ಕೊಕ್ಕಡ ನಗರ ಭಜನಾ ಷಷ್ಟ್ಯಬ್ದ ನಿಮಿತ್ತ ಭಗವದ್ಗೀತಾ ಪುಸ್ತಕ, ಆಮಂತ್ರಣ ಪತ್ರಿಕೆ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

kokkada bagathgitha amantrana patrike bidugade copy  ಕೊಕ್ಕಡ : ಕೊಕ್ಕಡದಲ್ಲಿ ವರ್ಷಂಪ್ರತಿ ನಡೆಯುತ್ತಿರುವ ನಗರ ಭಜನಾ ಕಾರ್ಯಕ್ರಮಕ್ಕೆ ಈ ವರ್ಷ 60 ರ ಸಂಭ್ರಮ. ನ.6 ರಿಂದ 12 ರ ವರೆಗೆ ಭಜನಾ ಸಪ್ತಾಹ ನಡೆಯಲಿದ್ದು ಈ ವರ್ಷ ಷಷ್ಠ್ಯಬ್ದ ನಿಮಿತ್ತ ವಿಜ್ರಂಭಣೆಯ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಕೊಕ್ಕಡ ಗ್ರಾಮದ ಆಸು ಪಾಸಿನ ಗ್ರಾಮಗಳೂ ಸೇರಿ ಹಿಂದೂ ಧರ್ಮದ ಭಕ್ತಾದಿಗಳ ಪ್ರತೀ ಮನೆ ಮನೆಗೆ ಭಗವದ್ಗೀತೆಯ ಪುಸ್ತಕವನ್ನು ಮತ್ತು ಆಮಂತ್ರಣ ಪತ್ರಿಕೆಯನ್ನು ವಿತರಣೆ ಮಾಡುವ ಕಾರ್ಯಕ್ಕೆ ಮಂಗಳವಾರದಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಉಡುಪಿಯ ಪರ್ಯಾಯ ಪೇಜಾವರ ಮಠಾದೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಕೊಡಮಾಡಿದ ಶ್ರೀ ಕೃಷ್ಣ ಸಂದೇಶ ಎಂಬ ನಾಮಾಂಕಿತ ಭಾವಾರ್ಥ ಸಹಿತ ಭಗವದ್ಗೀತೆಯ ಸಂದೇಶಗಳಿರುವ ಸುಮಾರು 1 ಸಾವಿರ ಪುಸ್ತಕಗಳನ್ನು ಉಚಿತವಾಗಿ ನೀಡಿದ್ದು ಉಜಿರೆಯ ತುಳುವೆರೆ ಚಾವಡಿಯ ಅಧ್ಯಕ್ಷ , ದಂತ ವೈದ್ಯರಾದ ಡಾ. ಎಂ. ಎಂ. ದಯಾಕರ್ ಇವರು ಇದನ್ನು ಸಾಂಕೇತಿಕವಾಗಿ ಕೇಶವ ಗೌಡ ಇವರ ಮನೆಯಲ್ಲಿ ವಿತರಿಸಿದರು. ಮತ್ತು ನಗರ ಭಜನೆಯ ಷಷ್ಠ್ಯಬ್ದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು.
ಈ ಸಂದರ್ಭ ನಗರ ಭಜನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಹಿತ್ತಿಲು ,ಕೊಕ್ಕಡ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ನೂಜೆ ತುಕ್ರಪ್ಪ ಶೆಟ್ಟಿ ,ನಗರ ಭಜನಾ ಷಷ್ಟ್ಯಬ್ದ ಸಮಿತಿಯ ಅಧ್ಯಕ್ಷರಾದ ಹರೀಶ್ ಪೂಂಜ, ಸಂಚಾಲಕರಾದ ನವೀನ್ ನೆರಿಯ, ಭಾಸ್ಕರ್ ಧರ್ಮಸ್ಥಳ, ಶ್ರೀಧರ ಗೌಡ ಕೆಂಗುಡೇಲು, ನಾರಾಯಣ ಗೌಡ , ಜನಾರ್ಧನ ಕೆ.ಪಿ., ಡಾ. ಗಣೇಶ್ ಪ್ರಸಾದ್ , ಧರ್ಣಪ್ಪ ಪೂಜಾರಿ , ಲಕ್ಷ್ಮೀನಾರಾಯಣ ಟಿ.ಎಂ., ಮತ್ತು ನಗರ ಭಜನಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.