ಮೂಡುಕೋಡಿ ಯುವವಾಹಿನಿ ಸಂಚಾಲನ ಸಮಿತಿ ಮಹಾಸಭೆ

ಮೂಡುಕೋಡಿ: ನ.20 ರಂದು ನಡೆಯುವ ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯ ಅಂತರ್ ಘಟಕ ಸಾಂಸ್ಕೃತಿಕ ವೈಭವ ಡೆನ್ನನ ಡೆನ್ನನ ಈ ಕಾರ್ಯಕ್ರಮದ ಸಮಾಲೋಚನಾ ಸಭೆಯು ಮೂಡುಕೋಡಿ ಯುವವಾಹಿನಿ ಸಂಚಾಲನಾ ಸಮಿತಿ ಸಂಚಾಲಕ ಹರೀಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಅ.23ರಂದು ಮೂಡುಕೋಡಿ ಗ್ರಾಮದ ಉರುಂಜಿಬೆಟ್ಟು ಸಂಜೀವ ಪೂಜಾರಿಯವರ ಮನೆಯಲ್ಲಿ ಜರುಗಿತು. ಈ ಸಭೆಯಲ್ಲಿ ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಬೆಳ್ತಂಗಡಿ ಯುವವಾಹಿನಿ ಘಟಕದ ಸಲಹೆಗಾರ ರಮಾನಂದ ಸಾಲಿಯಾನ್ ಮುಂಡೂರು, ವೇಣೂರು ವಲಯದ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪೂವಪ್ಪ ಪೂಜಾರಿ ಪರನೀರು ಭಾಗವಹಿಸಿ ನವೆಂಬರ್ 20 ರಂದು ನಾರಾಯಣ ಗುರು ಸಭಾಭವನ ಬೆಳ್ತಂಗಡಿಯಲ್ಲಿ ನಡೆಯುವ ಸಾಂಸ್ಕೃತಿಕ ವೈಭವದ ಮಾಹಿತಿಯನ್ನು ಸಭೆಗೆ ನೀಡಿದರು.
ಯುವವಾಹಿನಿ ನಿರ್ದೇಶಕ ನಿತ್ಯಾನಂದ ನಾವರ, ಕರುಣಾಕರ ಸುವರ್ಣ ಮರೋಡಿ, ಗಣೇಶ್ ಶಾಂತಿ, ಉಮೇಶ್ ಸುವರ್ಣ ಶಿರ್ಲಾಲು, ರವಿ ಪೂಜಾರಿ ಪಾಲ್ದಲ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕ ಗಣೇಶ್ ಶಾಂತಿ ಪ್ರಾರ್ಥಿಸಿ, ಕಾರ್ಯದರ್ಶಿ ಅರುಣ್ ಕೋಟ್ಯಾನ್ ಸ್ವಾಗತಿಸಿ, ಕೇಂದ್ರ ಸಮಿತಿ ನಿರ್ದೇಶಕ ರಾಕೇಶ್ ಕುಮಾರ್ ಮೂಡುಕೋಡಿ ನಿರೂಪಿಸಿ ಯುವವಾಹಿನಿ ಕಾನೂನು ಸಲಹೆಗಾರರಾದ ಸತೀಶ್ ಪಿ.ಎನ್. ವಂದಿಸಿದರು. ಸಭೆಗೆ ಪ್ರಭಾಕರ, ದಿವಾಕರ ಉರುಂಜಿಬೆಟ್ಟು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.