ಅಕ್ರಮವಾಗಿ 2,75,000/- ಮೌಲ್ಯದ 120.000ಲೀ ಶೇಂದಿ ಸಾಗಾಟ : ಬಾಬು ಪೂಜಾರಿಗೆ ನ್ಯಾಯಾಲಯ ಬಂಧನ

RRRRRRRRRRRRRR ತಾಲೂಕಿನ ಹತ್ಯಡ್ಕ ಗ್ರಾಮದ ಪಾಲಸತ್ತಡ್ಕ ಎಂಬಲ್ಲಿ ಕಿರಿ ಸೇತುವೆಯ ಬಳಿಯಲ್ಲಿ ಅಕ್ರಮವಾಗಿ ಮಹೀಂದ್ರ ಜೀಪ್ ವಾಹನ ನೋಂದಣಿ ಸಂಖ್ಯೆ KA 39 M 2345 ಇದರಲ್ಲಿ ಅಕ್ರಮವಾಗಿ 2,75,000/- ಮೌಲ್ಯದ 120.000ಲೀ ಶೇಂದಿಯನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಲಾಗಿ ವಾಹನದ ಮಾಲಿಕ/ ಚಾಲಕ ಶಿಬಾಜೆ ಗ್ರಾಮದ ಪಡಂತ್ತಾಜೆ ಮನೆಯ ನೋಣಯ್ಯರವರ ಪುತ್ರ ಬಾಬು ಪೂಜಾರಿ (35ವ), ಇವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಅ.25ರಂದು ಹಾಜರುಪಡಿಸಲಾಗಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ರಾಜೇಂದ್ರ ಪ್ರಸಾದ್‌ರವರ ನಿರ್ದೇಶನದಂತೆ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಎಲ್.ಎ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವಲಯ ಕಚೇರಿಯ ಅಬಕಾರಿ ನಿರೀಕ್ಷಕರಾದ ಸೌಮ್ಯಲತಾ ಎನ್, ಅಬಕಾರಿ ಉಪ ನಿರೀಕ್ಷಕರುಗಳಾದ ತುಕಾರಾಮ ಮತ್ತು ವಿಶ್ವನಾಥ ಗೌಡ, ಸಿಬ್ಬಂದಿ ಸೈಯದ್ ಶಬೀರ್, ಸಂಜೀವ ನಾಯ್ಕ್, ಅಬ್ದುಲ್ ಹಮೀದ್ ಕೆ, ವಾಹನ ಚಾಲಕರಾದ ನವೀನ್ ಕುಮಾರ್ ಪಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸದ್ರಿ ಪ್ರಕರಣವನ್ನು ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕರಾದ ಸೌಮ್ಯಲತಾ ಎನ್ ಮೊಕದ್ದಮೆ ದಾಖಲು ಮಾಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.