ಪವಾಡ ಪುರುಷ್ಯೆ ಫಾತಿಮಾ ಮಾತೆಯ ಮೂರ್ತಿಯ ಪುರಪ್ರವೇಶ

FATHIMA 1

FATHIMA 2

FATHIMA 3

FATHIMA 4

FATHIMA 5

FATHIMA

ಉಜಿರೆ : ಯುರೋಪ್ ದೇಶದ ಪೋರ್ಚ್‌ಗಲ್ ನಗರಿಯಲ್ಲಿ 1917ನೇ ಮೇ.೧೩ರಂದು ಕುರಿ ಮೇಯುಸುತ್ತಿದ್ದ ಲೂಸಿ, ಜೆಸಿಂತಾ ಫ್ರಾನ್ಸಿಸ್ ಎಂಬ ಮಕ್ಕಳಿಗೆ ಪವಾಡ ಸದೃಷ್ಯವಾಗಿ ಕಾಣಸಿಕ್ಕಳು. ಅದರ ನಂತರ ಅದೇ ಜಾಗದಲ್ಲಿ 5 ಬಾರಿ ಮಕ್ಕಳಿಗೆ ಕಾಣಸಿಕ್ಕಳು, ಮಕ್ಕಳು ಈ ಜಾಗದಲ್ಲಿ ಜಪಸರದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಜಾಗದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಿಡಿಲು ಮಿಂಚಿನ ಮಧ್ಯದಲ್ಲಿ ಮಕ್ಕಳಿಗೆ ಕಳೆದ 100 ವರ್ಷಗಳ ಹಿಂದೆ ನಡೆದ ಪವಾಡದ ಈ ಆಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಫಾತಿಮ ಮಾತೆಯ ಮೂರ್ತಿಯನ್ನು ಪ್ರತೀ ಚರ್ಚ್‌ನಲ್ಲಿ 3 ದಿನಗಳ ಕಾಲ ವಿಶೇಷ ಪ್ರಾರ್ಥನೆ ನೆರವೇರಿಸಲಾಗುವುದು. ಇದರ ಸಲುವಾಗಿ ಬೆಳ್ತಂಗಡಿಯಿಂದ ಉಜಿರೆ ಸಂತ ಅಂತೋನಿ ಚರ್ಚ್‌ಗೆ ಅ.24ರಂದು ಸಂಜೆ 5 ಗಂಟೆಗೆ ಆಗಮಿಸಿದ ಮೂರ್ತಿಗೆ ಭವ್ಯ ಸ್ವಾಗತಿಸಿಲಾಯಿತು. ವಂ| ಫಾ ಜೋಸೆಫ್ ಮಸ್ಕರೇನ್ಹಸ್ ಹಾಗೂ ಸಹಾಯಕ ಧರ್ಮಗುರು ಫಾ| ಉದಯ ಜೋಸೆಫ್ ಪ್ರಾರ್ಥನಾ ವಿಧಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವಲಯದ ಧರ್ಮಗುರು ವಂ| ಫಾ| ಬೊನವೆಂಚರ್ ನಜ್ರೆತ್, ಫಾ| ಮೆಲ್ವಿನ್ ಲೋಬೊ, ಫಾ| ಅನಿಲ್ ಡಿಸಿಲ್ವ್ವ, ಬೆಳ್ತಂಗಡಿ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಜಾನ್ ಅರ್ವಿನ್ ಡಿಸೋಜ, ಕಾರ್ಯದರ್ಶಿ ಎಲೋಸಿಯಸ್ ಲೋಬೊ ಹಾಗೂ ೬೦೦ ಮಿಕ್ಕಿ ಕ್ರೈಸ್ತ ಬಾಂಧವರು ಈ ವಿಧಿಯಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.