ಗುರುವಾಯನಕೆರೆಯಲ್ಲಿ ಬಿಜೆಪಿ ಮಂಡಲದ ಮೊದಲ ಕಾರ್ಯಕಾರಿಣಿ ಸಭೆ

bjp sabheಗುರುವಾಯನಕೆರೆ : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ಮೊದಲ ಕಾರ್ಯಕಾರಿಣಿ ಸಭೆಯು ಅ. 24 ರಂದು ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ ರಂಜನ ಜಿ ಗೌಡ ವಹಿಸಿದ್ದರು. ಉದ್ಘಾಟನೆಯನ್ನು ಮಾಜಿ ಶಾಸಕ ಪ್ರಭಾಕರ ಬಂಗೇರ ನೆರವೇರಿಸಿದರು. ತಾಲೂಕು ಉಸ್ತುವಾರಿಯೂ ಆಗಿರುವ ಜಿಲ್ಲಾ ಕಾರ್ಯದರ್ಶಿ ಬೃಜೇಶ್ ಚೌಟ, ಜಿಲ್ಲಾ ಉಪಾಧ್ಯಕ್ಷರುಗಳಾದ ಭಗೀರಥಿ ಮುರುಳ್ಯ, ಮತ್ತು ಶಾರದಾ ಆರ್ ರೈ, ಜಿಲ್ಲಾ ಪ್ರ. ಕಾರ್ಯದರ್ಶಿ ಕೆ ಕೊರಗಪ್ಪ ನಾಯ್ಕ, ತಾಲೂಕು ಕಾರ್ಯದರ್ಶಿಗಳಾದ ಸೀತಾರಾಮ ಬಿ. ಎಸ್ ಮತ್ತು ಪ್ರಭಾಕರ ಶೆಟ್ಟಿ ಉಪ್ಪಡ್ಕ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ಇವರು ಉಪಸ್ಥಿತರಿದ್ದರು. ವಿಜಯ ಗೌಡ ಕಾರ್ಯಕ್ರಮ ನಿರೂಪಿಸಿದರು. ಗೀತಾ ರಾಮಣ್ಣ ಗೌಡ ಸ್ವಾಗತಿಸಿದರು. ಜಗಧೀಶ್ ಕೆ ವಂದೇ ಮಾತರಂ ಹಾಡಿದರು. ಜೋಯೆಲ್ ಮೆಂಡೋನ್ಸಾ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.