ಕ್ರೇಜ್ಹಿಬಾಯ್ಸ್ ಯೂತ್ ಕ್ಲಬ್ ರೆಂಕೆದಗುತ್ತು ಪ್ರತಿಭಾಕಲರವ ಸಮಾರೋಪ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1

crazy boys youth club samaropa copyಬೆಳ್ತಂಗಡಿ : ಕ್ರೇಜ್ಹಿ ಬಾಯ್ಸ್ ಯೂತ್ ಕ್ಲಬ್ (ರಿ) ರೆಂಕೆದಗುತ್ತು ಬೆಳ್ತಂಗಡಿ, ಊರ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಐದು ದಿನಗಳ ಮಕ್ಕಳ ಸೃಜನಶೀಲ ಕಲಾ ಶಿಬಿರ ಪ್ರತಿಭಾ ಕಲರವ ಸೀಸನ್-2 ಕಾರ‍್ಯಕ್ರಮದ ಸಮಾರೋಪ ಸಮಾರಂಭವು ಅ.16 ರಂದು ನೆರವೇರಿತು.
ಕ್ರೇಜ್ಹಿ ಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ರೋಷನ್ ಆರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ನಾಗರಿಕ ಸೇವಾಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅಥಿತಿಗಳಾಗಿ ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬಹುಜನ ವಿದ್ಯಾರ್ಥಿ ಸಂಘ ಬೆಳ್ತಂಗಡಿ ಇದರ ಸಂಯೋಜಕ ಸುಖೇಶ್ ಮಾಲಾಡಿ, ಹುಣ್ಸೆಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶಶಿಕಲಾ ಬಿ, ಸಿ.ಎ.ಬ್ಯಾಂಕ್ ನಿರ್ದೇಶಕ ಬಾಬು ಎಂ ಮುಗುಳಿ, ಹುಣ್ಸೆಕಟ್ಟೆ ರಾಜಕೇಸರಿ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಆರ್‌ಎಫ್‌ಸಿ ಗೆಯ್ಸ್ ರೆಂಕೆದಗುತ್ತು ಇದರ ಅಧ್ಯಕ್ಷ ಕರುಣಾಕರ, ಸುದೆಮುಗೇರು ಸಂಗಮ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜು ಬಿ.ಹೆಚ್ ಮಕ್ಕಳ ಶಿಬಿರದ ಮಹತ್ವವನ್ನು ವಿವರಿಸುತ್ತಾ ಶುಭಹಾರೈಸಿದರು.
ಐದು ದಿನಗಳ ಶಿಬಿರದಲ್ಲಿ ಖ್ಯಾತಕಲಾವಿದ ಗೋಪಾಡ್ಕರ್ ತಂಡದ ಸದಸ್ಯರಿಂದ ವಿಭಿನ್ನ ಕ್ರಿಯಾತ್ಮಕ ಪ್ರಯೋಗಗಳು, ವಿಚಾರವಾದಿ ನರೇಂದ್ರ ನಾಯಕ್- ಮೂಢನಂಬಿಕೆಗಳ ಪವಾಡ ರಹಸ್ಯ ಬಯಲು, ಖ್ಯಾತ ಛಾಯಾಗ್ರಾಹಕ ಪಾಲಾಕ್ಷ ಸುವರ್ಣ-ಛಾಯಾಗ್ರಹಣ, ಉರಗ ಪ್ರೇಮಿ ಸ್ನೇಕ್‌ಜಾಯ್-ಉರಗಗಳ ಪ್ರಾಯೋಗಿಕ ಮಾಹಿತಿ, ಪ್ರಾಣೇಶ್ ಕಿನ್ನಿಗೋಳಿ-ಕಸದಿಂದ ರಸ, ಪ್ರಶಾಂತ್ ಬೆಳ್ತಂಗಡಿ-ಚಿತ್ರಕಲೆ, ಡಾ|ಶ್ರೀಹರಿ ಭಟ್-ಆರೋಗ್ಯ ಮಾಹಿತಿ, ಸ್ಮಿತೇಶ್ ಬಾರ್ಯ-ರಂಗತರಬೇತಿ, ಕರಾಟೆ ಶಿಕ್ಷಕ ಅಬ್ದುಲ್‌ರಹಿಮಾನ್ -ಕರಾಟೆ, ಶಿಕ್ಷಣ ಚಿಂತಕ ಯಾಕೂಬ್ ಕೊಯ್ಯೂರು-ಶಿಕ್ಷಣದ ಮಹತ್ವ ವಿಷಯಗಳಲ್ಲಿ ತರಬೇತಿ ಮಾಹಿತಿಗಳನ್ನು ನೀಡಿದರು.
ಶಿಬಿರ ಸಮಾರೋಪದ ದಿನ ನಡೆದ ಮೆರವಣಿಗೆ ಮುಗುಳಿ, ರೆಂಕೆದಗುತ್ತು ಪರಿಸರದ ವಿದ್ಯಾಭಿಮಾನಿಗಳ ಗಮನಸೆಳೆಯಿತು. ಈ ಸಂದರ್ಭ ಮಕ್ಕಳ ಸೃಜನಶೀಲ ಕಲಾಕೃತಿಗಳ ಪ್ರದರ್ಶನ ನಡೆಯಿತು. ಶಿಬರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಜಯಂತ್‌ಗುಪ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ಪೋಷಕರಾದ ಸಂಜೀವ ಆರ್, ಬಾಬಿ ಮಾಲಾಡಿ, ಲಕ್ಷ್ಮಣ್ ಜಿ.ಎಸ್.ರಮೇಶ್ ಮಾಲಾಡಿ, ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ದ.ಸಂ.ಸ (ಪ್ರೊ.ಬಿ.ಕೆ. ಸ್ಥಾಪಿತ) ಸಂಚಾಲಕ ರಮೇಶ್ ಆರ್ ಕಾರ‍್ಯಕ್ರಮ ನಿರೂಪಿಸಿ, ದಯಾನಂದ ಗುಪ್ತಾ ಸ್ವಾಗತಿಸಿದರು. ಸುರೇಶ್ ಕಲ್ಕಣಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.