ಅಂತರಾಷ್ಟ್ರೀಯ ಚೆಸ್ ಪಂದ್ಯಾಟ ಡಾ. ಹೆಗ್ಗಡೆಯವರಿಂದ ಮಾಹಿತಿ ಪತ್ರ ಬಿಡುಗಡೆ

belthangadiyalli chess pandyata copyಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ಡಿ.24 ರಿಂದ 28ರ ವರೆಗೆ ರೋಟೋ ಲಾಯರ‍್ಸ್ ಕಪ್ ಅಂತಾರಾಷ್ಟ್ರೀಯ ಚೆಸ್ ಪಂದ್ಯಾಟವನ್ನು ಬೆಳ್ತಂಗಡಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಪಂದ್ಯಾಟದ ಮಾಹಿತಿ ಪತ್ರವನ್ನು ಅ.18 ರಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಚೆಸ್‌ನ ಫಿಡೆ ನಿಯಮಾವಳಿಯಂತೆ ಪಂದ್ಯಾಟ ನಡೆಯಲಿದ್ದು ಡಿ. 24ರಿಂದ 28ರ ವರೆಗೆ ಪ್ರತಿದಿನ ಎರಡು ಸುತ್ತಿನ ಪಂದ್ಯಾಟ ಹಾಗೂ ಡಿ. 28 ರಂದು ಒಂಬತ್ತನೆ ಸುತ್ತಿನ ಪಂದ್ಯಾಟ ನಡೆಯಲಿದೆ.
ಪ್ರವೇಶ ಪತ್ರ: ಡಿ.ಡಿ. ಮೂಲಕ ನಿಗದಿತ ಶುಲ್ಕದೊಂದಿಗೆ ಸ್ಪರ್ಧಾಳುಗಳು ಪ್ರವೇಶಪತ್ರವನ್ನು ಯನ್. ರತ್ನವರ್ಮ ಬುಣ್ಣು, ವಕೀಲರು, ಮೊಬೈಲ್: 9448446143 ಇವರಿಗೆ ಕಳುಹಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.