ಕಾಜೂರು ದರ್ಗಾ ಆಡಳಿತ ಸಮಿತಿ ರಚನೆ ವಕ್ಫ್ ಬೋರ್ಡ್‌ನಿಂದ ಆದೇಶ

p a muhammad copyಪಿ.ಎ. ಮುಹಮ್ಮದ್

j h siddeek copyಜೆ.ಹೆಚ್. ಸಿದ್ದೀಕ್

muhammad kamal copyಮುಹಮ್ಮದ್ ಕಮಾಲ್

ನೂತನವಾಗಿ ರಚನೆಯಾಗಿರುವ ಆಡಳಿತ ಮಂಡಳಿ
ವಕ್ಫ್ ಬೋರ್ಡ್ ಆದೇಶದಂತೆ ನೂತನವಾಗಿ ರಚಿಸಲಾಗಿರುವ ಮಂಡಳಿಯ ಅಧ್ಯಕ್ಷರಾಗಿ ಪಿ. ಎ ಮುಹಮ್ಮದ್,ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೆ. ಹೆಚ್, ಕಾರ್ಯದರ್ಶಿಯಾಗಿ ಜೆ. ಹೆಚ್ ಅಬೂಬಕ್ಕರ್ ಸಿದ್ದೀಕ್, ಜೊತೆ ಕಾರ್ಯದರ್ಶಿಯಾಗಿ ಪಿ. ಎ ಉಸ್ಮಾನ್ ಗೌಸಿಯಾ ನಗರ, ಕೋಶಾಧಿಕಾರಿಯಾಗಿ ಮುಹಮ್ಮದ್ ಕಮಾಲ್, ಸದಸ್ಯರಾಗಿ ಅಬ್ದುಲ್ ಖಾದರ್ ಪಯ್ಯೆ, ಕೆ. ಹೆಚ್ ಮುಹಮ್ಮದ್ ಯಾನೆ ಮೋನು, ಎನ್. ಎಮ್ ಯಾಕೂಬ್, ಕೆ. ಪಿ ಉಸ್ಮಾನ್, ಕೆ. ಹೆಚ್ ಸಿದ್ದೀಕ್, ಮತ್ತು ಅಬ್ದುಲ್ ಹಕೀಂ ಕೆ. ಕೆ ಅವರನ್ನು ಆರಿಸಿದೆ.

*11 ತಿಂಗಳಿಗೆ ಆಡಳಿತ ಸಮಿತಿಗೆ ಅಧಿಕಾರ ವಹಿಸಲು ಸೂಚನೆ.
*ಈ ವರೆಗಿನ ಆಡಳಿತಾಧಿಕಾರಿಯಾಗಿದ್ದ ಹಾಜಿ ವಿ. ಮುಹಮ್ಮದ್ ಅವರಿಂದ ಕೀಲಿ ಕೈ ಹಸ್ತಾಂತರ.
*ಕಾಜೂರು ತಂಙಳ್ ಉಪಸ್ಥಿತಿಯಲ್ಲಿ ಆಡಳಿತಾಧಿಕಾರಿಗೆ ಬೀಳ್ಕೊಡುಗೆ.
*ಮುಂದಿನ ವರ್ಷದ ಉರೂಸ್ ನಡೆಯುವ ವಿಶ್ವಾಸ.
*ಕಾಜೂರು ಜಮಾತ್ ಮತ್ತು ಅಂಗ ಸಂಸ್ಥೆಗಳು, ಸುನ್ನೀ ಸಮೂಹ ಸಂಸ್ಥೆಗಳ ಸಮ್ಮುಖ ಅಧಿಕಾರ ಹಸ್ತಾಂತರ ಸರಳ ಕಾರ್ಯಕ್ರಮ.

ಕಾಜೂರು :  ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತೆವೆತ್ತಿರುವ ನಾಡಿನ ಪ್ರಖ್ಯಾತ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಕಾಜೂರು ರಹ್ಮಾನಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸೀದಿ ಇದರ ಆಡಳಿತ ಮಂಡಳಿ ರಚನೆಗೆ ಕರ್ನಾಟಕ ವಕ್ಫ್ ಬೋರ್ಡ್ ನಿರ್ದೇಶನ ನೀಡಿದ್ದು ಆಡಳಿತಾಧಿಕಾರಿ ಯನ್ನು ಹಿಂಪಡೆದುಕೊಂಡಿದೆ.
ಆ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಜಮಾತ್ ಮತ್ತು ಅಂಗಸಂಸ್ಥೆಗಳ ವಿಶೇಷ ಸಭೆಯಲ್ಲಿ ಆಡಳಿತಾಧಿಕಾರಿಯಾಗಿದ್ದ ನಿವೃತ್ತ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹಾಜಿ ವಿ ಮುಹಮ್ಮದ್ ಅವರು ರಚನೆಯಾಗಿರುವ ಆಡಳಿತ ಮಂಡಳಿಗೆ ಕೀಲಿ ಕೈ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಕಾಜೂರ ಕ್ಷೇತ್ರಕ್ಕೆ ಆಡಳಿತ ಮತ್ತು ಇತರ ವಿಚಾರದಲ್ಲಿ ಕಾಜೂರು ಮತ್ತು ಕಿಲ್ಲೂರು ಜಮಾತ್‌ನೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ  ಬಳಿಕ ಇಲ್ಲಿ ಅದಕ್ಕೆ ಪರಿಹಾರವಾಗದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಆಡಳಿತಾಧಿಕಾರಿ ನೇಮಿಸಿತ್ತು. ಬಳಿಕ ಉಭಯತ್ರರೂ ನ್ಯಾಯಾಲಯದ ಮೆಟ್ಟಿಲೇರಿದ್ದ ಸ್ಥಿತಿಯೂ ಬಂದಿತ್ತು.
ವಕ್ಫ್ ಬೋರ್ಡ್‌ನಲ್ಲಿ ನಡೆದ ಪರಿಶೀಲನೆ ಬಳಿಕ ಅ.7 ರಂದು ಕಾಜೂರಿನ ಜಮಾತಿಗೊಳಪಟ್ಟ 11 ಅನುಭವಿ ವ್ಯಕ್ತಿಗಳನ್ನು ಆರಿಸಿ, ಮುಂದಿನ 11 ತಿಂಗಳು ಅವಧಿಗೆ ಆಡಳಿತ ವಹಿಸಿಕೊಡಲು ಆದೇಶ ನೀಡಿತು.
ಆಡಳಿತಾಧಿಕಾರಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಕಾಜೂರು ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಅವರ ಸಮ್ಮುಖ ದರ್ಗಾ ಶರೀಫ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದ ಬಳಿಕ ಹಾಜಿ ವಿ ಮುಹಮ್ಮದ್ ಅವರನ್ನು ಬೀಳ್ಕೊಡಲಾಯಿತು.
ಈ ಸಂದರ್ಭ ಜಮಾತಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಸುನ್ನೀ ಯುವಜನ ಸಂಘ (ಎಸ್‌ವೈಎಸ್)ಕಾಜೂರು ಬ್ರಾಂಚ್, ಸ್ವಲಾತ್ ಸಮಿತಿ, ರಿಫಾಯಿಯ್ಯ ದಫ್ಫ್ ಸಮಿತಿ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಕಾಜೂರು ಶಾಖಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರುಗಳು, ನೂರುಲ್ ಹುದಾ ಮದರಸ ಕುಕ್ಕಾವು, ಮಸ್ಜಿದುಲ್ ಹಿದಾಯ ದಿಡುಪೆ, ಹಯಾತುಲ್ ಇಸ್ಲಾಂ ಮದರಸ ಗೌಸಿಯಾ ನಗರ, ರಹ್ಮಾನಿಯಾ ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ, ನೂರುಲ್ ಹುದಾ ಅರ್ರಿಫಾಯಿಯ್ಯ ಮದರಸ ಅಭಿವೃದ್ಧಿ ಸಮಿತಿ, ಮಲವಂತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ. ಯು ಮುಹಮ್ಮದ್ ಮೊದಲಾದವರು ಹಾಜರಿದ್ದು ನೂತನ ಸಮಿತಿ ಸದಸ್ಯರಿಗೆ ಶುಭ ಕೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.