ಮಾನವೀಯತೆಯಿಂದ ಸಮಾಜಕ್ಕೆ ಸಣ್ಣ ಕೆಲಸಗಳನ್ನಾದರೂ ಮಾಡುವ ತುಡಿತ ನಮ್ಮದಾಗಬೇಕು: ತ್ರಿಶಾಲ ಜೈನ್ ಕೆ .ಎಸ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

schoolಮಡಂತ್ಯಾರು: ಸುಮಾರು ಮೂವತ್ತು ವರ್ಷಗಳ ಹಿಂದಿನ ದಿನಗಳನ್ನು ಸ್ಮರಿಸಿಕೊಂಡರೆ, ನಮ್ಮ ಮಡಂತ್ಯಾರು ಸಾಕಷ್ಟು ಬದಲಾಗಿದೆ. ದಿವಂಗತ ಫಾ| ಲಿಗೋರಿ ಡಿಸೋಜಾರವರ ಉನ್ನತ ಕನಸು, ದೂರದರ್ಶಿತ್ವದ ಫಲವನ್ನು ನಾವು ಇವತ್ತು ಅನುಭವಿಸುತ್ತಿದ್ದೇವೆ. ಉನ್ನತ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಹೋಗಲು ಸಾಧ್ಯವಿಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ವಿಧ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾಗ , ಅವರು ಇಲ್ಲಿ ಕಾಲೇಜು ಸ್ಥಾಪಿಸುವ ಕನಸನ್ನು ಕಂಡು ಅದನ್ನು ನನಸುಗೊಳಿಸಿದರು. ಇಂದು ಹಳೇ ವಿಧ್ಯಾರ್ಥಿಗಳಾಗಿ ಆಗಮಿಸಿದ ನಿಮ್ಮಲ್ಲಿ ಹಲವಾರು ಮಂದಿ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣ್ಯವ್ಯಕ್ತಿಗಳಾಗಿದ್ದೀರಿ. ನಿಮ್ಮನ್ನೆಲ್ಲ ಕಂಡಾಗ ಹಳೇಯ ಸ್ಮೃತಿಗಳು ಮನಪಟಲದಲ್ಲಿ ತೇಲಿ ಬರುತ್ತದೆ. ನಿಮ್ಮಂಥ ವಿದ್ಯಾರ್ಥಿಗಳಿಂದ ನಾನು ಉತ್ತಮ ಪ್ರಾಧ್ಯಪಕಿಯಾಗುವ ಹಾಗಾಯ್ತು ಎಂದು ಸೆಕ್ರೇಡ್ ಹಾರ್ಟ್ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರೊಫೆಸರ್ ಶ್ರೀಮತಿ ತ್ರಿಶಾಲ ಜೈನ್ ಕೆ .ಎಸ್ ಅವರು ನುಡಿದರು. ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಹಳೇ ವಿದ್ಯಾರ್ಥಿಗಳ ಬೃಹತ್ ಪುನರ್ಮಿಲನ ಸಮ್ಮಿಲನ -2016 ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಕಾಲೇಜಿನ ವಿದ್ಯಾರ್ಥಿಗಳಾದ ಸಿಸ್ಟರ್ ಸಿಲ್ವಿನ್ ಶೆಲಿಟಾ ಲೋಬೊ ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಮ್ಯಾಕ್ಸಿಂ ಅಲ್ಬುಕರ್ಕ್ ಅವರು ಸಂಘ ಅಸ್ತಿತ್ವಕ್ಕೆ ಬಂದ ಬಗೆ ಹಾಗೂ ಅದರ ಕಾರ್ಯಚಟುವಟಿಕೆಗಳನ್ನು ಹೇಳಿ ಅತಿಥಗಳನ್ನು ಸ್ವಾಗತಿಸಿದರೆ ಸಂಘದ ಕಾರ್ಯದರ್ಶಿ ಕು. ಜೊವಿಟಾ ಗೊನ್ಸಾಲ್ವಿಸ್ ಧನ್ಯವಾದವಿತ್ತರು , ಕೋಶಾಧಿಕಾರಿ ಶ್ರೀ ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಬೆಳವಣಿಗೆಯ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಮಧ್ಯಾಹ್ನದ ಭೋಜನದ ಬಳಿಕ ಹಳೇ ವಿದ್ಯಾರ್ಥಿಗಳು ತಮ್ಮ ಅನುಭವನ್ನು ಹಂಚಿಕೊಂಡರು.ಸಾಂಸ್ಕ್ರತಿಕ ಕಾರ್ಯಕ್ರಮಗಳೊಂಗೆ ವಿವಿಧ ವಿನೋದದ ಆಟಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.