ಎಸ್.ಸಿ.ಮೋರ್ಚಾ ಪದಗ್ರಹಣ- ಕಾರ‍್ಯಕಾರಿಣಿ ಸಭೆ ಕಾಂಗ್ರೆಸ್ ಶೋಷಿತರನ್ನು ವೋಟು ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ : ಪೂಂಜ

sc morcha padagrahana copyಬೆಳ್ತಂಗಡಿ : ಎಸ್.ಸಿ ಮೋರ್ಚಾ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ‍್ಯಗಾರ ಅ.7 ರಂದು ಬೆಳ್ತಂಗಡಿಯ ಸುವರ್ಣ ಆರ್ಕೆಡ್‌ನ ಸಪ್ತವರ್ಣ ಸಭಾಭವನದಲ್ಲಿ ನಡೆಯಿತು. ಜಿಲ್ಲಾ ಭಾ.ಜ.ಪ ಎಸ್.ಸಿ ಮೋರ್ಚಾದ ಅಧ್ಯಕ್ಷರಾದ ದಿನೇಶ್ ಅಮ್ಟೂರು ಉದ್ಘಾಟನೆ ಮಾಡಿ, ಜಿಲ್ಲೆಯ ಅನನ್ಯ ಸಮಸ್ಯೆಗಳ ಬಗ್ಗೆ ಮಾತಾನಾಡಿ ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸುವಂತೆ ತಿಳಿಸುತ್ತಾ, ದೇಶದಲ್ಲಿ ಸಮಾನತೆಯನ್ನು ಬಯಸುವ ಪ್ರಧಾನಿಯವರು ಇದ್ದಾರೆ, ಹಾಗಾಗಿ ಸಂವಿಧಾನ ಶಿಲ್ಪಿ ಡಾ|ಬಿ.ಆರ್ ಅಂಬೇಡ್ಕರ್‌ರವರು ಬಾಳಿ ಬದುಕಿದ 5 ಸ್ಥಳಗಳನ್ನು ಪಂಚ ತೀರ್ಥ ಕ್ಷೇತ್ರಗಳಾಗಿಸುವ ಕಾಯಕಕ್ಕೆ ಸರಕಾರದಿಂದ 6 ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ಶೋಷಿತ ಸಮುದಾಯದ ನಾಯಕರಾದ ಅಂಬೇಡ್ಕರವರಿಗೆ ಗೌರವ ಒದಗಿಸುತ್ತಿದ್ದಾರೆ, ಹಾಗಾಗಿ ನಾವೆಲ್ಲರು ಪಕ್ಷ ಸಂಘಟನೆಯೊಂದಿಗೆ ಗುರುತಿಸಿಕೊಂಡು ರಾಷ್ಟ್ರ ಕಾರ್ಯಕ್ಕೆ ಮುನ್ನುಗ್ಗುವಂತೆ ಕರೆ ನೀಡಿದರು,
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಹರೀಶ್ ಪೂಂಜ ಅವರು ಜಾತ್ಯತೀತ ಮತ್ತು ಸಮಾನತೆ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ವಿಶ್ವಮಾನವತವಾಗಿದ್ದ ಡಾ|ಬಿ.ಆರ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಮತ್ತು ಅವರ ಕೊನೆಗಾಲದಲ್ಲಿ ಅವರ ಶವ ಸಂಸ್ಕಾರಕ್ಕೆ ದೆಹಲಿಯಲ್ಲಿ ಅವಕಾಶ ಕೊಡದೆ ಮುಂಬಯಿನ ಸಮುದ್ರದ ಬದಿಯಲ್ಲಿ ಸಂಸ್ಕಾರ ನಡೆಸುವಂತೆ ಮಾಡಿರುತ್ತದೆ, ಆ ಮೂಲಕ ಶೋಷಿತ ಸಮಾಜವನ್ನು ನಿರಂತರವಾಗಿ ಅವಮಾನಿಸುತ್ತಾ ಬಂದಿರುವ ಕಾಂಗ್ರೆಸ್ ಈಗಲು ಸುಳ್ಳು ಭರವಸೆ ಪೊಳ್ಳು ಆಶ್ವಾಸನೆಯೊಂದಿಗೆ ಜನರನ್ನು ವಂಚಿಸುತ್ತಾ ಶೋಷಿತರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಈಗ ನಾವೆಲ್ಲರು ರಾಷ್ಟ್ರ ಹಿತಕ್ಕಾಗಿ ಸಂಘಟಿತರಾಗುವಂತೆ ತಿಳಿಸಿದರು, ಮಂಡಲ ಅಧ್ಯಕ್ಷರಾದ ರಂಜನ್,ಜಿ,ಗೌಡ ರವರು ಮುಂದಿನ ದಿನಗಳಲ್ಲಿ ಎಸ್.ಸಿ ಮೋರ್ಚಾ ಕಾರ್ಯಕರ್ತರು ಮಾಡಬೇಕಾದ ಮಾಡಬಹುದಾದ ಕಾರ್ಯಯೋಜನೆ ಬಗ್ಗೆ ತಿಳಿಸಿದರು,ಜಿಲ್ಲಾ ಉಪಾಧ್ಯಕ್ಷರು ಶಾರದ ಆರ್ ರೈ, ಮಾಜಿ ಶಾಸಕರಾದ ಪ್ರಭಾಕರ ಬಂಗೇರ, ಮಂಡಲ ಪ್ರ.ಕಾರ್ಯದರ್ಶಿಗಳಾದ ಸೀತಾರಾಮ್.ಬಿ.ಎಸ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಅಧ್ಯಕ್ಷರಾದ ರಾಘವ ಕಲ್ಮಂಜ, ನಿಯೋಜಿತ ಅಧ್ಯಕ್ಷರಾದ ಸದಾಶಿವ ಕರಂಬಾರು, ಮಾಜಿ ಜಿ.ಪಂ.ಸದಸ್ಯರಾದ ಸಿ.ಕೆ.ಚಂದ್ರಕಲಾ, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಂಪತ್‌ಸುವರ್ಣ & ಪ್ರ.ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಮಂಡಲ ಸಮಿತಿ ಕಾರ್ಯದರ್ಶಿಯಾದ ಭಾಸ್ಕರ್ ಆರ್ ಸಾಲ್ಯಾನ್, ಹಿಂ.ವ.ಮೋ.ಜಿಲ್ಲಾ ಪ್ರ.ಕಾರ್ಯದರ್ಶಿ ಕೃಷ್ಣಪ್ಪ ಕಲ್ಲಡ್ಕ, ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು,
ಜಗದೀಶ್ ಕಕ್ಕಿಂಜೆ ವಂದೇ ಮಾತರಂ ಗೀತೆ ಹಾಡಿದರು. ಸಿ.ಕೆ.ಚಂದ್ರಕಲಾ ಸ್ವಾಗತಿಸಿ, ಮಂಡಲ ಎಸ್.ಸಿ.ಮೋರ್ಚಾ ಉಪಾಧ್ಯಕ್ಷ ಉದಯ ಜಿ.ಕೆ ಧನ್ಯವಾದವಿತ್ತರು. ಎಸ್.ಸಿ.ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರು ಕೇಶವ ಎಮ್, ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.