ಯಕ್ಷಗಾನ ಅಭ್ಯಾಸಿಗಳಿಗೆ ವಿದ್ಯಾನಿಧಿ ವಿತರಣೆ

Vidhyanidi vitharane copyಉಜಿರೆ : ಸೇವಾಭಾರತಿ (ರಿ) ಕನ್ಯಾಡಿ || ಇದರ ಅಂಗಸಂಸ್ಥೆ ಯಕ್ಷಭಾರತಿ ಕನ್ಯಾಡಿ || ಇದರ ದ್ವಿತೀಯ ವಾರ್ಷಿಕೋತ್ಸವದಂಗವಾಗಿ ಸೆ. 24ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾಮಂಟಪದಲ್ಲಿ ಆರ್ಥಿಕವಾಗಿ ಹಿಂದುಳಿದ ಯಕ್ಷಗಾನಾಸಕ್ತ ನಾಲ್ವರು ವಿದ್ಯಾರ್ಥಿಗಳಿಗೆ ತಲಾ ರೂ 5ಸಾವಿರದಂತೆ ಒಟ್ಟು 20 ಸಾವಿರ ಮೊತ್ತದ ವಿದ್ಯಾನಿಧಿಯನ್ನು ವಿತರಿಸಲಾಯಿತು. ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ನ್ಯಾಯವಾದಿ ಹರೀಶ್ ಪೂಂಜ, ಸೇವಾಭಾರತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಕರ್ನಾಟಕ ಬ್ಯಾಂಕ್ ಉಜಿರೆ ಶಾಖಾಧಿಕಾರಿ ಅರವಿಂದ ಭಂಡಾರ್ಕರ್, ವೇಣೂರು ಎಸ್‌ಡಿಎಂ ಐಟಿಐ ತರಬೇತಿ ಅಧಿಕಾರಿ ವಿಶ್ವೇಶ್ವರ ಪ್ರಸಾದ್, ಯಕ್ಷಭಾರತಿ ಅಧ್ಯಕ್ಷ ಹರಿದಾಸ ಗಾಂಭೀರ, ಮಂಜುನಾಥ ಕಾಮತ್, ಗೋಪಾಲರಾವ್, ಶ್ರೀಕರ ರಾವ್ ಅರಸಿನಮಕ್ಕಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಯಕ್ಷ ಮಿತ್ರರು ಬೆಳ್ತಂಗಡಿ ತಂಡದವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಪ್ರಾಯೋಜಕತ್ವದಲ್ಲಿ ಹಿರಿಯ ಕಲಾವಿದರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.