ಮೆಸ್ಕಾಂ ನಿವೃತ್ತ ನೌಕರ ಮಹಾಬಲ ಶೆಟ್ಟಿಯವರಿಗೆ ಶ್ರದ್ಧಾಂಜಲಿ

Mahabala shetty shraddanjali copyಗುರುವಾಯನಕೆರೆ : ಮೆಸ್ಕಾಂ ಬೆಳ್ತಂಗಡಿಯ ನಿವೃತ್ತ ನೌಕರ ಗುರುವಾಯನಕೆರೆ ಯರ್ಡೂರು ನಿವಾಸಿ ಮಹಾಬಲ ಶೆಟ್ಟಿಯವರು ಸೆ.೨೮ರಂದು ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಭೆ ಅ.10ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಜರುಗಿತು.
ಸುಲ್ಕೇರಿಮೊಗ್ರು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿತ್ಯಾನಂದ ಶೆಟ್ಟಿ ನೊಚ್ಚ ಅವರು ನುಡಿ ನಮನಗಳನ್ನು ಸಲ್ಲಿಸಿ ಮಹಾಬಲ ಶೆಟ್ಟಿಯವರ ಆದರ್ಶ ಜೀವನ ಹಾಗೂ ಅವರು ಮೆಸ್ಕಾಂ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯ ಬಗ್ಗೆ ತಿಳಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಇಲಾಖೆಯ ಪರವಾಗಿ ಬೆಳ್ತಂಗಡಿ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಿ.ಹೆಚ್ ಶಿವಶಂಕರ್ ಮಾತನಾಡಿ, ಮಹಾಬಲ ಶೆಟ್ಟಿಯವರು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಎಲ್ಲರೊಂದಿಗೂ ಆತ್ಮೀಯತೆಯನ್ನು ಹೊಂದಿದ್ದರು. ಅವರ ಸೇವೆ ಇಲಾಖೆಯಲ್ಲಿ ಎಲ್ಲರೂ ನೆನಪಿಸುವಂತೆ ಮಾಡಿದೆ ಎಂದು ತಿಳಿಸಿದರು. ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ ಹಾಗೂ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮೃತರ ತಾಯಿ ಶ್ರೀಮತಿ ಕಮಲ ಶೆಟ್ಟಿ, ಪತ್ನಿ ಶ್ರೀಮತಿ ಸುಮಿತ್ರ, ಪುತ್ರ ಪ್ರಶಾಂತ ಶೆಟ್ಟಿ, ಪುತ್ರಿಯರಾದ ಶ್ರೀಮತಿ ಸರಿತಾ, ಶ್ರೀಮತಿ ವಾಣಿ, ಶ್ರೀಮತಿ ಸ್ಮೀತಾ, ಅಳಿಯಂದಿರಾದ ಸತೀಶ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಅಶೋಕ್ ಶೆಟ್ಟಿ, ಸೊಸೆ ಶ್ರೀಮತಿ ಪ್ರಮೀಳಾ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು-ವರ್ಗದವರು, ಮೆಸ್ಕಾಂ ಇಲಾಖೆಯ ಅಧಿಕಾರಿಗಳು, ನೌಕರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.