ಉಜಿರೆ : 36ನೇ ವರ್ಷದ ಶ್ರೀ ಶಾರದೋತ್ಸವ ಆಚರಣೆಗಳು ಸಂಸ್ಕೃತಿಗೆ ಪೂರಕವಾಗಿರಲಿ : ಪಡ್ವೆಟ್ನಾಯ

Advt_NewsUnder_1
Advt_NewsUnder_1
Advt_NewsUnder_1

Ujire shradosthava 1 copy

ujire sharadosava 1 copy

ujire sharadosava 2 copy

ujire sharadosava copy

ಉಜಿರೆ : ಆಸ್ತಿಕರು ದೇವರ ಮೇಲೆ ನಂಬಿಕೆಯಿರಿಸಿ ಧಾರ್ಮಿಕ ಆಚರಣೆಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವುದು ನಮ್ಮ ಸಂಸ್ಕೃತಿಯ ದ್ಯೋತಕ. ಇಂತಹ ಆಚರಣೆಗಳು ಕೇವಲ ಉತ್ಸವಗಳಿಗೆ ಮಾತ್ರ ಸೀಮಿತವಾಗಿರದೆ ದೈನಂದಿನ ಚಟುವಟಿಕೆಗಳಿಗೆ ಪ್ರೇರಣೆಯಾಗಬೇಕು. ಧರ್ಮಕ್ಕೆ ಅಪಚಾರವಾದಂತೆ ಸಂಸ್ಕೃತಿಗೆ ಚ್ಯುತಿಯಿಲ್ಲದಂತೆ ವಿಶ್ವದಲ್ಲೇ ವಿಶೇಷವಾದ ಇಂತಹ ಧಾರ್ಮಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಹೊಣೆಗಾರಿಕೆ ನಮ್ಮದು. ಯಾವುದೇ ಗೊಂದಲವಿಲ್ಲದೆ, ಸಹೃದಯತೆಯಿಂದ ಬಾಳಿ ನಾವೆಲ್ಲ ನಿಜ ಅರ್ಥದಲ್ಲಿ ಮನುಷ್ಯರಾಗಬೇಕೆಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರು ಹೇಳಿದ್ದಾರೆ.
ಅವರು ಅ.11ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ ನಡೆದ 36ನೇ ವರ್ಷದ ಶ್ರೀ ಶಾರದಾ ಪೂಜೋತ್ಸವದ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಉಜಿರೆ ಎಸ್‌ಪಿ ಆಯಿಲ್ ಮಿಲ್‌ನ ಶಿವಕಾಂತ ಗೌಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಕೋರಿದರು. ಶ್ರೀ ಶಾರದಾ ವಿಗ್ರಹ ನಿರ್ಮಿಸಿದ ಶಿವಕುಮಾರರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಮರಕಡ ಸ್ವಾಗತಿಸಿ ಸಂಜೀವ ಶೆಟ್ಟಿ ಕುಂಟನಿ ನಿರೂಪಿಸಿ, ಗೋಪಾಲಕೃಷ್ಣ ಜಿ.ಕೆ ವಂದಿಸಿದರು. ಕಾರ್ಯದರ್ಶಿ ವಿನಯಚಂದ್ರ, ಕೋಶಾಧಿಕಾರಿ ಈಶ್ವರ ಭಟ್ ಅತ್ತಾಜೆ ಸಹಕರಿಸಿದರು.
ನಾಲ್ಕು ದಿನಗಳ ಕಾಲ ನಡೆದ ಶ್ರೀ ಶಾರದೋತ್ಸವದಲ್ಲಿ ಉಜಿರೆಯ ಶ್ರೀ ಮಹಮ್ಮಾಯಿ ಭಜನಾ ಮಂಡಳಿ, ಮಂಗಳೂರು ಕೋಡಿಕಲ್ ಮಹಿಳಾ ಭಜನಾ ಸಂಘ, ಉಜಿರೆಯ ಮಾತೃ ಮಂಡಳಿಯವರಿಂದ ಭಜನೆ, ಉಜಿರೆಯ ಶ್ರೀ ಕೃಷ್ಣಗಾನ ಸುಧಾ ಸಂಗೀತ ವಿದ್ಯಾಲಯದ ಅನಸೂಯ ದೇವಸ್ಥಳಿ ಮತ್ತು ಬಳಗದವರಿಂದ ದೇವಿ ಕೃತಿಗಳು, ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಯಕ್ಷಕಲಾ ವೇದಿಕೆಯ ಕಲಾವಿದರಿಂದ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ, ಬೆಳ್ತಂಗಡಿ ಹಳೆಕೋಟೆಯ ಶಿರಡಿ ಸಾಯಿ ಸತ್ಯ ಸಾಯಿ ಸೇವಾ ಕ್ಷೇತ್ರದ ಸದಸ್ಯರಿಂದ ಭಜನ್ ಸಂಧ್ಯಾ, ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತ-ಸಾಹಿತ್ಯ-ಸಂಭ್ರಮ, ಉಜಿರೆಯ ಎಸ್‌ಡಿಎಂ ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಪ್ರಕಾಶ್ ದೇವಾಡಿಗ ಬಳಗದವರಿಂದ ಸೆಕ್ಸೋಫೋನ್ ವಾದನ, ರಂಗವಲ್ಲಿ-ಮುದ್ದುಕೃಷ್ಣ ಸ್ಪರ್ಧೆ, ಮಕ್ಕಳಿಗೆ ಅಕ್ಷರಾಭ್ಯಾಸ, ಸೇವಾಕರ್ತರಿಂದ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಭ್ರಮದ ಶೋಭಾಯಾತ್ರೆಯ ವರ್ಣರಂಜಿತ ಮೆರವಣಿಗೆಯ ಮೂಲಕ ಶಾರದಾ ವಿಗ್ರಹವನ್ನು ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಯಿತು. ಆಕರ್ಷಕ ಶೋಭಾಯಾತ್ರೆಯಲ್ಲಿ ನಾಸಿಕ್ ಬ್ಯಾಂಕ್ ಕೇರಳದ ಚೆಂಡೆಮೇಳ, ಮಹಿಷಾಸುರ ಮರ್ದಿನಿ, ಈಡುಗಾಯಿ, ಸುಡುಮದ್ದು ಪ್ರದರ್ಶನ, ನೃತ್ಯರೂಪಕ ಮೊದಲಾದ ವಿಶೇಷತೆಗಳಿದ್ದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.