ಇಂದು ಮಕ್ಕಳಲ್ಲಿ ಅತ್ಮವಿಶ್ವಾಸದ ಕೊರತೆ ಕಂಡು ಬರುತ್ತಿದೆ: ಮಮತಾ ಎಂ ಶೆಟ್ಟಿ ಬೆಳ್ತಂಗಡಿ ಯೋಗ ಸಂದೇಶ ಮತ್ತು ಧ್ಯಾನ ಕೇಂದ್ರದಿಂದ ಚಿಣ್ಣರ ಯೋಗೋತ್ಸವ

yoga 1

yoga

ಬೆಳ್ತಂಗಡಿ : ಬೆಳ್ತಂಗಡಿ ಯೋಗ ಸಂದೇಶ ಮತ್ತು ಧ್ಯಾನ ಕೇಂದ್ರದ ವತಿಯಿಂದ ಅ. 12 ರಂದು ವಾಣಿ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಪ್ರಾರಂಭಗೊಂಡ “ಚಿಣ್ಣರ ಯೋಗೋತ್ಸವ” ಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಸೋಮೇ ಗೌಡ, ವಾಣಿ ಪ. ಪೂ ಕಾಲೇಜು ಪ್ರಾಂಶುಪಾಲ ಡಿ ಯದುಪತಿ ಗೌಡ, ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ, ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ಶಿವಶಂಕರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ನ್ಯಾಯವಾದಿ ಸಂತೋಷ್ ಕುಮಾರ್ ಲಾಲ, ರಾಜ್‌ಗೋಪಾಲ್, ಜಿನೇಂದ್ರ, ಮಂಗಳಾ, ವಿಮಲಾ, ಉಪಸ್ಥಿತರಿದ್ದರು.
ಶಿಕ್ಷಕ ಕೆ ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ್ ಧನ್ಯವಾದವಿತ್ತರು. ಚಂದ್ರಶೇಖರ್ (ಪಾರ್ಮಸಿಸ್ಟ್) ಸ್ವಾಗತಿಸಿದರು. ಮೈಥಿಲಿ ಪ್ರಾರ್ಥನೆ ಹಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.