ಮತದಾರರ ಪಟ್ಟಿ ಪರಿಷ್ಕರಣೆ

ಭಾರತ ಚುನಾವಣಾ ಆಯೋಗವು ಜ.1, 2017ರ ಅರ್ಹತಾ ದಿನಾಂಕದಂತೆ ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಈ ಕೆಳಗೆ ಕಾಣಿಸಿರುವ ವೇಳಾ ಪಟ್ಟಿಯಂತೆ ಹಮ್ಮಿಕೊಳ್ಳಲಿದೆ. ಅ.01ರಂದು ಮತದಾರರ ಪಟ್ಟಿಗಳ ಕರಡು ಪ್ರಕಟಣೆ, ಅ.01ರಿಂದ 31ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ಅವಧಿ, ಅ.7ರಿಂದ ಅ.14ರವರೆಗೆ ಮತದಾರರ ಪಟ್ಟಿಗಳ ಸಂಬಂಧಪಟ್ಟ ಭಾಗಸಂಖ್ಯೆಯನ್ನು ಗ್ರಾಮಸಭೆ, ನಗರ ಸ್ಥಳೀಯ ಸಂಸ್ಥೆ ಮತ್ತು ಆರ್.ಡಬ್ಲ್ಯು.ಎ ಸಭೆಗಳಲ್ಲಿ ಓದಿ ಹೇಳಿ ಪರಿಶೀಲಿಸುವ ಅವಧಿ, ಅ.16ರಿಂದ ಅ.23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಬೂತು ಮಟ್ಟದ ಏಜೆಂಟರೊಂದಿಗೆ ಸ್ವೀಕರಿಸಲು ಹಮ್ಮಿಕೊಳ್ಳಬೇಕಾದ ವಿಶೇಷ ಆಂದೋಲನ, ನ.30 ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಬೇಕಾದ ದಿನಾಂಕ, ಜ.10 ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.