ಎನ್.ಸಿ.ಸಿ ಕೆಡೆಟ್‌ಗಳಿಂದ ಸ್ವಚ್ಛತಾ ಅಭಿಯಾನ

punjalkatte ncc swachate copyಪುಂಜಾಲಕಟ್ಟೆ : ಸರಕಾರಿ ಪದವಿ ಪೂರ್ವ ಕಾಲೇಜು ಪುಂಜಾಲಕಟ್ಟೆ ಹಾಗೂ ಮಡಂತ್ಯಾರಿನ ಸೇ.ಹಾ.ಪ.ಪೂ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಉಪಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಸಿ.ಪಿ ಮಾತನಾಡಿ ನಾವು ಪರಿಸರ ಸ್ವಚ್ಛಗೊಳಿಸುವುದರ ಜೊತೆಗೆ ನಮ್ಮ ಸ್ವ-ಶುಚಿತ್ವದ ಕಡೆಗೂ ಗಮನ ಕೊಡಬೇಕು ಎಂದರು.
ಎನ್.ಸಿ.ಸಿ ಕೆಡೆಟ್‌ಗಳು ಪುಂಜಾಲಕಟ್ಟೆಯ ರಸ್ತೆ ಬದಿಗಳಲ್ಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಗೂ ಸ್ಥಳೀಯ ಬಸವನಗುಡಿ ದೇವಸ್ಥಾನದ ಆವರಣದಲ್ಲಿ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಿದರು.
ಕಾರ್ಯಕ್ರಮದಲ್ಲಿ ಎನ್.ಸಿ.ಸಿ ಅಧಿಕಾರಿಗಳಾದ ಚೀಫ್ ಆಫೀಸರ್ ಜೆರಾಲ್ಡ್ ಪೆರ್ನಾಂಡಿಸ್, ಫಸ್ಟ್ ಆಫೀಸರ್ ನಿರಂಜನ್ ಜೈನ್, ದೈಹಿಕ ಶಿಕ್ಷಕ ಸತ್ಯಕಿರಣ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.