ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಪ್ರತಿಭಾ ಪ್ರೋತ್ಸಾಹ ಕಾರ್ಯಕ್ರಮ

anugraha college prathibha dina copyಬೆಳ್ತಂಗಡಿ : ಅನುಗ್ರಹ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಪ್ರಾಯೋಜಕರ ಸಹಭಾಗಿತ್ವದಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜು ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ತಮ್ಮ ನೆರವಿನಿಂದ ಕಾಲೇಜು ಫೀಸು ತುಂಬಿ ವಿದ್ಯಾಭ್ಯಾಸ ಪಡೆಯಲು ಕಾರಣರಾದ ಸೋಜಾ ಎಲೆಕ್ಟ್ರಾನಿಕ್ಸ್ ಮಾಲಕ ಆಲ್ಫೋನ್ಸ್ ಫ್ರಾಂಕೋ ಅವರು ಅತಿಥಿಯಾಗಿ ಭಾಗವಹಿಸಿ ಪ್ರೋತ್ಸಾಹಿಸಿದರು. ಅಧ್ಯಕ್ಷತೆಯನ್ನು ತಾ. ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸುಧೀರ್ ಆರ್ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿ ಭಾರತ ಸೇವಾ ದಳದ ಉಡುಪಿ ಜಿಲ್ಲಾ ಸಂಘಟಕ ಮಹೇಶ್ ಎನ್ ಪತ್ತರ್, ಸುವರ್ಣ ಆರ್ಕೆಡ್‌ನ ಮಾಲಿಕ ವೈ ನಾಣ್ಯಪ್ಪ ಪೂಜಾರಿ, ಕಾಲೇಜಿನ ಪ್ರಾಂಶುಪಾಲ ತಲ್‌ಹತ್ ಎಂ. ಜಿ, ಪತ್ರಕರ್ತ ಲ| ಅಶ್ರಫ್ ಆಲಿಕುಂಞಿ ಭಾಗವಹಿಸಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.