ಬಿಜೆಪಿ ಯುವ ಮೋರ್ಚಾದಿಂದ ಸ್ವಚ್ಚಭಾರತ್ ಬೆಳ್ತಂಗಡಿ ಕಾರ್ಯಕ್ರಮ ತಾಲೂಕಿನಾದ್ಯಂತ ೧೯ ಕಡೆಗಳಲ್ಲಿ ಸಾಮೂಹಿಕ ಸ್ವಚ್ಚತೆ

mithabagilu swachathe copyಬೆಳ್ತಂಗಡಿ : ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ಹೊಸ ಗಮ್ಯತೆಯಡೆಗೆ ನಮ್ಮ ಪಯಣ ಎಂಬ ಪರಿಕಲ್ಪನೆಯಡಿ ಸಮೃದ್ಧ ಶಿರ್ಷಿಕೆಯಡಿ ಸ್ವಚ್ಚಭಾರತ್ ಬೆಳ್ತಂಗಡಿ ಕಾರ್ಯಕ್ರಮ ತಾಲೂಕಿನ 19 ಕಡೆ ಗ್ರಾಮೀಣ ಕೇಂದ್ರದಲ್ಲಿ ಅನುಷ್ಠಾನಗೊಂಡಿತು.
ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ. ಸುವರ್ಣ ಅವರ ನೇತೃತ್ವದಲ್ಲಿ ಪಕ್ಷದ ಹಿರಿ-ಕಿರಿಯ ನಾಯಕರ ಮಾರ್ಗದರ್ಶನ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು. ಕಲ್ಲೇರಿ ಪೇಟೆಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಮಿಥುನ್ ಕುಲಾಲ್, ಪುಂಜಾಲಕಟ್ಟೆ ಮೇಲಿನ ಪೇಟೆಯಿಂದ ಪುರಿಯ ಭಜನಾ ಮಂದಿರವರೆಗೆ ಪುನೀತ್ ಕುಮಾರ್ ಮತ್ತು ರೋಹಿತ್ ಕುಮಾರ್, ಸರಕಾರಿ ಪ್ರಾಥಮಿಕ ಶಾಲಾ ವಠಾರ ನಡದಲ್ಲಿ ಕರುಣಾಕರ ಗೌಡ, ಮಿತ್ತಬಾಗಿಲು ಪೇಟೆಯಲ್ಲಿ ರಾಜೇಶ್ ಎನ್. ಆರ್, ಅಳದಂಗಡಿ ಕೆದ್ದುವಿನಿಂದ ಶ್ರೀ ಗಣಪತಿ ದೇವಸ್ಥಾನದವರೆಗೆ ಕಮಲೇಶ್ ಬಂಗೇರ, ಬಳ್ಳಮಂಜ ಪೇಟೆಯಲ್ಲಿ ಚಂದ್ರಕಾಂತ ಗೌಡ, ಬೆಳಾಲು ಪರಿಸರದಲ್ಲಿ ಸತೀಶ್ ಎಳ್ಳುಗದ್ದೆ, ಮಡಂತ್ಯಾರಿನಿಂದ ರಕ್ತೇಶ್ವರಿ ಪದವಿನವರೆಗೆ ಉಮೇಶ್ ಸುವರ್ಣ, ಮೇಲಂತಬೆಟ್ಟು ಪರಿಸರದಲ್ಲಿ ಅಂಕಿತ್ ಬಂಗೇರ, ಶಿಶಿಲ ಪರಿಸರದಲ್ಲಿ ಕರುಣಾಕರ, ಬಡಕೋಡಿ ಮಂಜುಶ್ರೀ ಭಜನಾ ಮಂದಿರ ವಠಾರದಲ್ಲಿ ಕರುಣಾಕರ ಬಡಕೋಡಿ, ಕೊಕ್ಕಡ ಪೇಟೆಯಲ್ಲಿ ಕಿಶೋರ್, ಗುರುವಾಯನಕೆರೆ ಪರಿಸರದಲ್ಲಿ ವಿಶ್ವೇಶ್ ಕಿಣಿ, ಬಾರ‍್ಯ ಪಿಲಿಗೂಡಿನಲ್ಲಿ ಜಯಾನಂದ ಕಲ್ಲಾಪು, ಪಾಲೇದು ತಣ್ಣೀರುಪಂತದಲ್ಲಿ ರುಕೇಶ್ ಮುಂದಿಲ, ಪುಂಜಾಲಕಟ್ಟೆ ಬೆರ್ಕಳ ಪರಿಸರದಲ್ಲಿ ರಾಜೇಶ್, ಕಾಶಿಪಟ್ಣ ಪರಿಸರದಲ್ಲಿ ಸುದೀಪ್ ಕಾಶಿಪಟ್ಣ ಅರಸಿನಮಕ್ಕಿಯಲ್ಲಿ ದೀಕ್ಷಿತ್ ಶೆಟ್ಟಿ ಮತ್ತು ಧರ್ಮಸ್ಥಳ ಪರಿಸರದಲ್ಲಿ ಸುಧಾಕರ ಗೌಡ ಇವರು ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಪ್ರಭಾರಕ ಬಂಗೇರ, ಜಯಂತಿ ಪಾಲೇದು, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಪ್ರಭಾಕರ ಗೌಡ ಪೊಸೊಂದೋಡಿ, ವಾಸುದೇವ ರಾವ್ ಕಕ್ಕೆನೇಜಿ, ಸೀತಾರಾಮ ಬಿ. ಎಸ್ ಮೊದಲಾದವರು ಸಾಥ್ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.