ಬೆಳ್ತಂಗಡಿ ರಾಮ ಕ್ಷತ್ರೀಯ ಸಂಘದ 16ನೇ ವಾರ್ಷಿಕೋತ್ಸವ : ಕ್ಷತ್ರೀಯ ಚೈತನ್ಯ ಕಾರ್ಯಕ್ರಮ ಸಂಪನ್ನ

Advt_NewsUnder_1
Advt_NewsUnder_1
Advt_NewsUnder_1

rama kshathriya copy ಸಮಾರಂಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕ ರತ್ನಾಕರ ವೇಣೂರು ಅವರನ್ನು ಸಂಘದ ವತಿಯಿಂದ ಸನ್ಮಾನಿಸುತ್ತಿರುವುದು.

* ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನಗಳ ಕೊಡುಗೆ.
* ಮಕ್ಕಳಿಂದ ಹುಲಿ ವೇಷ, ವಿವಿಧ ನೃತ್ಯಪ್ರಕಾರಗಳು, ಛದ್ಮವೇಶ ಹಾಗೂ ವಿನೋದಾವಳಿಗಳು.
* ಸಮಾಜ ಬಾಂಧವರ ಮಕ್ಕಳ ಪೈಕಿ ಪ್ರತಿಭಾನ್ವಿತರಾಗಿರುವ ಮಕ್ಕಳನ್ನು ಗುರುತಿಸಿ ಪುರಸ್ಕಾರ.
* ಸಭೆಯ ಕೊನೆಗೆ ಸಮಾಜ ಬಾಂಧವ ಮಹಿಳೆಯರೂ ಸೇರಿದಂತೆ ಎಲ್ಲರಿಂದಲೂ ಸಂತೋಷಕ್ಕಾಗಿ ನೃತ್ಯ ನಡೆಯಿತು.
* ಅಚ್ಚುಕಟ್ಟಿನ ಕಾರ್ಯಕ್ರಮ, ಎಲ್ಲರ
ಮುಖದಲ್ಲೂ ಮಂದಹಾಸ.

ವಿದ್ಯೆಯಲ್ಲಿ ಸಾಧನೆ ಮಾಡಿ:
ಮಾಜಿ ಶಾಸಕ ಲಕ್ಷ್ಮೀನಾರಾಯಣ
ಕೇವಲ 40 ಕುಟುಂಬಸ್ಥರು ಮಾತ್ರ ಇದ್ದರೂ ಕೂಡ ಬೆಳ್ತಂಗಡಿಯ ಸಂಘ ಹಮ್ಮಿಕೊಳ್ಳುವ ಕಾರ್ಯಕ್ರಮ ಮಾದರಿಯಾದುದು. ಇದರ ಸಂಖ್ಯೆ 100ಕ್ಕೇರಬೇಕು. ಸಂಘಕ್ಕೆ ಸ್ವಂತ ಕಟ್ಟಡ ರಚನೆಯಾಗುವ ವೇಳೆ ನನ್ನಿಂದಾದ ಸಹಕಾರ ನೀಡಲು ನಾನು ಬದ್ಧ. ನಮ್ಮ ಸಮಾಜದ ಮಕ್ಕಳು ವಿದ್ಯೆಯಲ್ಲಿ ಸಾಧನೆ ಮಾಡಬೇಕು. ಎಲ್ಲ ಕ್ಷೇತ್ರಗಳಲ್ಲೂ ಮಿಂಚಬೇಕು ಎಂದು ಕುಂದಾಪುರ ಮಾಜಿ ಶಾಸಕ ಲಕ್ಷ್ಮೀನಾರಾಯಣ ಅಭಿಪ್ರಾಯಪಟ್ಟರು.

ಬೆಳ್ತಂಗಡಿ: ರಾಮ ಕ್ಷತ್ರೀಯ ಸಂಘ ಬೆಳ್ತಂಗಡಿ ಇದರ 16ನೇ ವಾರ್ಷಿಕೋತ್ಸವ ಹಾಗೂ ಕ್ಷತ್ರೀಯ ಚೈತನ್ಯ ಕಾರ್ಯಕ್ರಮವು ಅ. 2 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್‌ನ ಸಪ್ತಪದಿ ಸಭಾಂಗಣದಲ್ಲಿ ಜರುಗಿತು.
ಉದ್ಘಾಟನೆಯನ್ನು ಬೈಂದೂರು ಮಾಜಿ ಶಾಸಕರೂ ಆಗಿರುವ ವಿಶ್ವ ರಾಮ ಕ್ಷತ್ರೀಯ ಮಹಾ ಸಂಘ ಕುಂದಾಪುರ ಇದರ ಅಧ್ಯಕ್ಷ ಕೆ ಲಕ್ಷ್ಮೀನಾರಾಯಣ ನೆರವೇರಿಸಿದರು.
ಅಧ್ಯಕ್ಷತೆಯನ್ನು ರಾಮ ಕ್ಷತ್ರೀಯ ಸಂಘದ ಅಧ್ಯಕ್ಷ ವಿಜಯ ಕುಮಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ದ. ಕ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಾದ ಕೆ ಸುಧಾಕರ್, ಬೆಂಗಳೂರಿನ ಆದಾಯ ತೆರಿಗೆ ಅಧಿಕಾರಿ ಜಯಶ್ರೀ ಕೆ, ಬೆಂಗಳೂರಿನ ಹೈಟೆಕ್ ಮಲ್ಟಿಲ್ಯಾಟರಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಆಡಳಿತ ಪಾಲುದಾರ ಶೈಲೇಶ್ ಪಿ ಭಾಗಿಯಾಗಿದ್ದರು. ಸಂಘದ ಗೌರವಾಧ್ಯಕ್ಷ ಸಿ. ಹೆಚ್ ಪ್ರಭಾಕರ್, ಕಾರ್ಯದರ್ಶಿ ಕೆ ರಾಘವೇಂದ್ರ ರಾವ್, ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸ್ಥಾಪಕಾಧ್ಯಕ್ಷ ವಿ. ಆರ್ ನಾಯಕ್, ಪ್ರಸ್ತುತ ಅಧ್ಯಕ್ಷ ಪ್ರಮೋದ್ ಆರ್ ನಾಯಕ್ ಸೇರಿದಂತೆ ಪದಾಧಿಕಾರಿಗಳು ಸಹಕಾರ ನೀಡಿದರು. ನಿರುಪಮಾ ಗೌರೀಶ್, ನಿಶ್ಮಿತಾ ಆರ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಪುರಸ್ಕಾರವನ್ನು ಚಂದ್ರಕಾಂತ ನಿರ್ವಹಿಸಿದರು. ಕಾರ್ಯದರ್ಶಿ ರಾಘವೇಂದ್ರ ಧನ್ಯವಾದವಿತ್ತರು. ಸಮಾರಂಭದ ಅತಿಥಿಗಳಾಗಿದ್ದ ಕೆ ಲಕ್ಷ್ಮೀನಾರಾಯಣ ಅವರನ್ನೂ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.