ಕಾರ್ಗಿಲ್‌ನ ಲೇಹ್‌ನಲ್ಲಿ ಭಾರತೀಯ ಸೈನಿಕರಿಗಾಗಿ ಸುಮಾ ಶ್ರೀನಾಥ್ ಅವರಿಂದ ಸಂಗೀತ ಗಾಯನ

ವಿಶೇಷ ಬರಹ: ಅಚ್ಚು ಮುಂಡಾಜೆ.

suma shrinath copyಸುಮಾ ಶ್ರೀನಾಥ್

* ರೇಡಿಯೋ ನಿನಾದದಲ್ಲಿ ಸೈನಿಕರಿಗಾಗಿ ಕಾಲ್ಪನಿಕ ಕಥೆ
* ಕನ್ನಡಿಗ ಸೈನಿಕರಿಗೆ ಧ್ವನಿ ತಲುಪಿಸಿದ ಯೋಧ ಶೇಷಗಿರಿ

Army copyಉಜಿರೆ ಶ್ರೀ ಧ.ಮಂ. ಕಾಲೇಜಿನ ಉಪನ್ಯಾಸಕ ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯದರ್ಶಿಯಾಗಿರುವ ಡಾ| ಎಂ.ಪಿ ಶ್ರೀನಾಥ್ ಅವರ ಪತ್ನಿ ಎಸ್‌ಡಿಎಂ ಸಿಬಿಎಸ್‌ಇ ಶಾಲಾ ಶಿಕ್ಷಕಿ ಸುಮಾ ಶ್ರೀನಾಥ್ ಅವರು ಇತ್ತೀಚೆಗೆ ಕಾರ್ಗಿಲ್ ದಿನಾಚರಣೆಯಂದು ಕಾರ್ಗಿಲ್‌ಗೆ ತೆರಳಿ ಅಲ್ಲಿನ ಲೇಹ್ನಲ್ಲಿ ಕನ್ನಡಿಗ ಸೈನಿಕರಿಗಾಗಿ ಗಾಯನ ಕಾರ್ಯಕ್ರಮ ನೀಡುವ ಮಹತ್ತರ ಅವಕಾಶ ಪಡೆದುಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಬಂದಿದ್ದಾರೆ. ಎರಡನೇ ಹಂತವಾಗಿ ಅವರು ರೇಡಿಯೋ ನಿನಾದ ಕಾರ್ಯಕ್ರಮದ “ಮನಸ್ಸಿನ ಮಾತು ಶೀರ್ಷಿಕೆ”ಯಲ್ಲಿ ಸೈನಿಕರ ಬಗೆಗಿನ ಕಾಲ್ಪನಿಕ ಕಥೆಯೊಂದನ್ನು ಬರೆದಿದ್ದು ಅದು ಇದೀಗ ಕನ್ನಡಿಗ ಎಲ್ಲಾ ಸೈನಿಕರಿಗೆ ತಲುಪಿಸುವ ಕಾರ್ಯದಲ್ಲಿ ಕನ್ನಡಿಗ ಸೈನಿಕ ಯೋಧ ಶೇಷಗಿರಿ ಅವರು ಸಾಥ್ ನೀಡಿದ್ದಾರೆ.
ಸುಮಾ ಬರೆದು ವಾಚಿಸಿರುವ ಕಥೆಯ ಧ್ವನಿಗೆ ನಾವು ಅಕ್ಷರ ರೂಪ ನೀಡಿದ್ದೇವೆ.. ನೀವೂ ಓದಿ…
ಮದುವೆಯಾಗಿ 10 ದಿನವೂ ಆಗಿರಲಿಲ್ಲ. ಆತನಿಗೆ ಒಂದು ದಿನ ರಾತ್ರೋರಾತ್ರಿ ಸೇನಾಧಿಕಾರಿಯಿಂದ ಕರೆ ಬಂದ ತಕ್ಷಣ ತನ್ನವರೆಲ್ಲರಿಗೂ ವಿದಾಯ ಹೇಳಿ ಕರ್ತವ್ಯಕ್ಕೆ ಹೊರಟೇ ಬಿಟ್ಟಿದ್ದ.
ಅದಾಗಿ ನಾಲ್ಕು ತಿಂಗಳಾಗಿತ್ತು. ಆಕೆ ವಾರಕ್ಕೆ ಎರಡು ಉಜಿರೆ ಶ್ರೀ ಧ.ಮಂ. ಕಾಲೇಜಿನ ಉಪನ್ಯಾಸಕ ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯದರ್ಶಿಯಾಗಿರುವ ಡಾ| ಎಂ.ಪಿ ಶ್ರೀನಾಥ್ ಅವರ ಪತ್ನಿ ಎಸ್‌ಡಿಎಂ ಸಿಬಿಎಸ್‌ಇ ಶಾಲಾ ಶಿಕ್ಷಕಿ ಸುಮಾ ಶ್ರೀನಾಥ್ ಅವರು ಇತ್ತೀಚೆಗೆ ಕಾರ್ಗಿಲ್ ದಿನಾಚರಣೆಯಂದು ಕಾರ್ಗಿಲ್‌ಗೆ ತೆರಳಿ ಅಲ್ಲಿನ ಲೇಹ್ನಲ್ಲಿ ಕನ್ನಡಿಗ ಸೈನಿಕರಿಗಾಗಿ ಗಾಯನ ಕಾರ್ಯಕ್ರಮ ನೀಡುವ ಮಹತ್ತರ ಅವಕಾಶ ಪಡೆದುಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಬಂದಿದ್ದಾರೆ. ಎರಡನೇ ಹಂತವಾಗಿ ಅವರು ರೇಡಿಯೋ ನಿನಾದ ಕಾರ್ಯಕ್ರಮದ “ಮನಸ್ಸಿನ ಮಾತು ಶೀರ್ಷಿಕೆ”ಯಲ್ಲಿ ಸೈನಿಕರ ಬಗೆಗಿನ ಕಾಲ್ಪನಿಕ ಕಥೆಯೊಂದನ್ನು ಬರೆದಿದ್ದು ಅದು ಇದೀಗ ಕನ್ನಡಿಗ ಎಲ್ಲಾ ಸೈನಿಕರಿಗೆ ತಲುಪಿಸುವ ಕಾರ್ಯದಲ್ಲಿ ಕನ್ನಡಿಗ ಸೈನಿಕ ಯೋಧ ಶೇಷಗಿರಿ ಅವರು ಸಾಥ್ ನೀಡಿದ್ದಾರೆ.
ಸುಮಾ ಬರೆದು ವಾಚಿಸಿರುವ ಕಥೆಯ ಧ್ವನಿಗೆ ನಾವು ಅಕ್ಷರ ರೂಪ ನೀಡಿದ್ದೇವೆ.. ನೀವೂ ಓದಿ…
ಂಮದುವೆಯಾಗಿ ೧೦ ದಿನವೂ ಆಗಿರಲಿಲ್ಲ. ಆತನಿಗೆ ಒಂದು ದಿನ ರಾತ್ರೋರಾತ್ರಿ ಸೇನಾಧಿಕಾರಿಯಿಂದ ಕರೆ ಬಂದ ತಕ್ಷಣ ತನ್ನವರೆಲ್ಲರಿಗೂ ವಿದಾಯ ಹೇಳಿ ಕರ್ತವ್ಯಕ್ಕೆ ಹೊರಟೇ ಬಿಟ್ಟಿದ್ದ.
ಅದಾಗಿ ನಾಲ್ಕು ತಿಂಗಳಾಗಿತ್ತು. ಆಕೆ ವಾರಕ್ಕೆ ಎರಡು
ಪತ್ರ ಬರೆಯುತ್ತಿದ್ದಳು.
ಆದರೆ ಆಕೆಯ ಯಾವುದೇ ಪತ್ರಕ್ಕೆ ಆತನಿಂದ ಯಾವುದೇ ಉತ್ತರ ಬಂದಿರಲಿಲ್ಲ. ಆತಂಕದಿಂದ ವಿಚಾರಿಸಿದಾಗ ಆತ ಕ್ಷೇಮವಾಗಿದ್ದಾನೆ ಎಂದು ಮಾತ್ರ ಮೇಲಾಧಿಕಾರಿಗಳಿಂದ ತಿಳಿದು ಬಂದಿತ್ತು.
ಒಂದಿನ ಅತ್ಯಂತ ಸೂಕ್ಷ್ಮವಾದ ಗಡಿಪ್ರದೇಶಕ್ಕೆ ಹೋಗಿ ಕೆಲಸ ಮಾಡಬೇಕು ಅಂತ ಆ ಯೋಧನಿಗೆ ಸೂಚನೆ ಬರೊತ್ತೆ.
ಅಲ್ಲಿಗೆ ಹೋಗಿ ವಾಪಾಸು ಜೀವಂತವಾಗಿ ಬರ‍್ತೀನೋ ಇಲ್ಲವೋ ಎಂಬ ಸಂದೇಹ ಬರೊತ್ತೆ ಆತನಿಗೆ.
ರಾತ್ರಿ ತನ್ನ ಹೆಂಡತಿ ಬರೆದ ಎಲ್ಲಾ ಪತ್ರಗಳನ್ನೂ ಓದುತ್ತಾನೆ. ಆತನ ಕಣ್ಣಿಂದ ದಾರಾಕಾರವಾಗಿ ಕಣ್ಣೀರು ಹರಿಯೊತ್ತೆ.
ಪ್ರತೀ ಪತ್ರದಲ್ಲೂ ಬಾವನೆಯಿಂದ ತುಂಬಿದ ಕವಿತೆಗಳು.
ಆತನನ್ನು ಆಕೆ ಅಗಲಿ ಅನುಭವಿಸುತ್ತಿದ್ದ ನೋವು ಸ್ಪಷ್ಟವಾಗಿ ಕಾಣುತ್ತಿತ್ತು.
ಂನಾನಿಂದು ಬರೆದಿರಲು ಕವಿತೆಗಳ  ಸಾಲಲ್ಲಿ ನಿನ ಹೆಸರೇ ಆರಂಭವೋ….
ಒಡಲಿಂದು ಅಳುತಿರಲು ಕಣ್ಣೀರ ಹನಿಯಲ್ಲಿ ನಿನ್ನದೇನೇ ಪ್ರತಿಬಿಂಬವೋ….
ನಿನ್ನ ಒಲವಿನ ನೆರಲು ಇರದಿರಲು ಪ್ರತೀ ಇರುಲು ಯುಗದಂತೆ ನನ ಕಾಡಿದೆ…ಂನಾನು ಇಷ್ಟು ಪತ್ರ ಬರೆದರೂ ಒಂದಕ್ಕೂ ಉತ್ತರ ಬರೀಬೇಕು ಅನ್ಸೊಲ್ವಾ ನಿಮಗೆ. ನಿಮ್ಮ ತಾಯಿ ಮೇಲೆ ನಿಮಗಿರೋ ಪ್ರೀತಿ…ನನ್ನ ಮೇಲೆ ನಿಮಗಿರೋ ಪ್ರೀತಿ… ಎಲ್ಲವನ್ನೂ ಸೋಲಿಸಿ ನಿಂತಿದೆ ದೇಶದ ಮೇಲೆ ನಿಮ್ಮ ಪ್ರೀತಿ… ಅದೆಂತಾ ವಿಸ್ಮಯ…
ಒಂದೇ ಒಂದು ಪತ್ರ ಬರೆದು ಆ ವಿಸ್ಮಯವನ್ನು ನನ್ನ ಜೊತೆ ಹಂಚಿಕೊಳ್ಳಬಾರದಾ?
ಪತ್ರ ಓದಿ ಮುಗಿಸಿದ ತಕ್ಷಣ ಆತ ಒಂದು ಪತ್ರ ಬರೆದಿಟ್ಟು ಗಡಿ ಪ್ರದೇಶಕ್ಕೆ ಹೊರಟೋಗುತ್ತಾನೆ. ಒಂದೇ ವಾರದಲ್ಲಿ ಆತನ ಪಾರ್ಥಿವ ಶರೀರ ಊರಿಗೆ ಬರೊತ್ತೆ. ಆತ ಬರೆದ ಪತ್ರ ಆತನ ಹೆಂಡತಿಗೆ ಕೊಡುತ್ತಾರೆ. ನಿನ್ನ  ಮೇಲಿರುವ ಪ್ರೀತಿ ವ್ಯಾಮೋಹ ಅದೆಲ್ಲ ನನ್ನನ್ನ ಕರ್ತವ್ಯ ವಿಮುಖನನ್ನಾಗಿ ಮಾಡಿಬಿಡೊತ್ತೋ ಅನ್ನೋ ಭಯದಿಂದ ನಿನ್ನ ಯಾವುದೇ ಪತ್ರಗಳನ್ನು ನಾನು ಓದುತ್ತಿರಲಿಲ್ಲ. ಇವತ್ತು ಆ ಎಲ್ಲಾ ಪತ್ರಗಳನ್ನು ಓದಿ ಈ ಪತ್ರ ಬರೆಯುತ್ತಿದ್ದೇನೆ.
ನೀನು ಹೇಳಿರುವಂತೆ ಇಲ್ಲಿ ಯಾವುದೇ ವಿಸ್ಮಯವೂ ಇಲ್ಲ.
ನನ್ನೆಲ್ಲಾ ದೇಶ ಬಾಂಧವರು ಜೀವಭಯ ಇಲ್ಲದೆ ನಿಶ್ಚಿಂತೆಯಿಂದ ಸಂತೋಷವಾಗಿ ಬಾಳಬೇಕಾದರೆ ನಾನು ನನ್ನ ಇವತ್ತನ್ನು ನಾಳೆಯನ್ನು ಮರೀಲೇಬೇಕು. ಈ ಪತ್ರ ನಿನ್ನ ಕೈ ಸೇರುವಾಗ ನಾನು ಜೀವಂತವಾಗಿರ‍್ತೀನೋ ಇಲ್ವೋ ಗೊತ್ತಿಲ್ಲ.
ದೇಶಕ್ಕಾಗಿ ಹೋರಾಡುತ್ತಿದ್ದಾಗ ಒಂದುವೇಳೆ ನನ್ನ ಪ್ರಾಣ ಹೋದ್ರೆ ಅದು ಈ ದೇಶಕ್ಕಾಗಿ ನಾನು ಮಾಡುತ್ತಿರುವ ಒಂದು ಅಳಿಲ ಸೇವೆ ಅಷ್ಟೇ. ನಿನ್ನ ಎಲ್ಲಾ ನೋವಿಗೂ ಕ್ಷಮೆ ಇರಲಿ…
ಆಕೆ ಪತ್ರ ಓದಿ ಒಂದಿಷ್ಟೂ ಕಣ್ಣೀರು ಹಾಕ್ಲಿಲ್ಲ. ಅಲ್ಲೇ ನಿಂತಿದ್ದ ಸೇನಾಧಿಕಾರಿ ಹತ್ರ ಕೇಳ್ತಾಳೆ. ಸರ್ ನನಗೂ ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದಾ?? ಸ್ನೇಹಿತರೇ  ಇದೇ ವಿಸ್ಮಯ. ಎಲ್ಲರ ಮೇಲಿನ ಪ್ರೀತಿಯನ್ನು ಬದಿಗಿರಿಸಿ ಕರ್ತವ್ಯದ ಕಡೆ ಕೊಂಡೊಯ್ಯುವ ಶಕ್ತಿ ಆ ದೇಶಪ್ರೇಮಕ್ಕಿದೆ. ದೇಶ ಭಕ್ತಿಗಿದೆ.
ಆ ಭಗವಂತ ನಮ್ಮೆಲ್ಲಾ ಯೋಧರನ್ನು ಸುರಕ್ಷಿತವಾಗಿ ಚೆನ್ನಾಗಿಟ್ಟಿರಲಿ. ಅವರಿಗೂ ತನ್ನ ಸಂಸಾರದೊಂದಿಗೆ ಸುಖವಾಗಿ ಬಾಳುವ ಅವಕಾಶ ಸಿಗಲಿ ಎಂದು ಮನಪೂರ್ವಕವಾಗಿ ಹಾರೈಸೋಣ. ಇದು ನನ್ನ ಮನಸ್ಸಿನ ಮಾತು. ಇಂತೀ ನಿಮ್ಮ ಪ್ರೀತಿಯ ಸುಮಾ…
ಹೀಗೆಂದು ಆಕೆ ಬರೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.