HomePage_Banner_
HomePage_Banner_

ವಿಶಿಷ್ಠ ಕಾಯಿಲೆಯಿಂದ ಬಳಲುತ್ತಿದ್ದ ನಾವೂರು ಗ್ರಾಮದ ವಿದ್ಯಾರ್ಥಿನಿ ಶ್ರಧ್ಧಾ ದಾರುಣ ಸಾವು

shradda copy ನಾವೂರು: ನಾವೂರು ಗ್ರಾಮದ ಹಡೀಲು ನಿವಾಸಿ ಬಿ ವಿಶ್ವನಾಥ ಪ್ರಭು ಮತ್ತು ಜಯಲಕ್ಷ್ಮೀ ದಂಪತಿಯ ಕೊನೆಯ ಪುತ್ರಿ, ನಡ ಸರಕಾರಿ ಪ್ರೌಢ ಶಾಲಾ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶ್ರದ್ಧಾ ಅವರು ವಿಶಿಷ್ಠ ಕಾಯಿಲೆಯಿಂದ ಬಳಲುತ್ತಿದ್ದವರು ಅ. 1 ರಂದು ನಿಧನರಾಗಿದ್ದಾರೆ.
ಚಿಕಿತ್ಸೆಗೆಂದು ಬೆಳ್ತಂಗಡಿ ಆಸ್ಪತ್ರೆಗೆ ಕರೆತಂದಿದ್ದ ತಂದೆ ತಾಯಿಯ ಜೊತೆಗೇ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಾರಿ ಮಧ್ಯೆ ಈ ಘಟನೆ ನಡೆದಿದೆ.
ಮೃತರು ತಂದೆ, ತಾಯಿಯಲ್ಲದೆ ಅಜ್ಜ ವಾಸುದೇವ ಪ್ರಭು, ಅಜ್ಜಿ ಸುಶೀಲಮ್ಮ, ವಿವಾಹ ಮಾಡಿಕೊಡಲಾಗಿರುವ ಅಕ್ಕ ಸೌಭಾಗ್ಯ, ಇನ್ನೊರ್ವೆ ಅಕ್ಕ ಸೌಮ್ಯಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ನಾವೂರು ಶಾಲಾ ಶಿಕ್ಷಕವೃಂದ ಹಾಗೂ ಊರ ಗಣ್ಯರು ಭೇಟಿ ನೀಡಿ ಅಂತಿಮದರ್ಶನ ಪಡೆದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.