ಧರ್ಮಸ್ಥಳ : ಇಂದು ಮಧ್ಯವರ್ಜಿತರ ಸಮಾವೇಶ

11

12

13

14

15

16

ಧರ್ಮಸ್ಥಳ : ಮಹಾತ್ಮಾ ಗಾಂಧೀಜಿಯವರ ಜನ್ಮ ಜಯಂತಿಯ ಅಂಗವಾಗಿ ಅವರ ಕನಸಾದ ವ್ಯಸನಮುಕ್ತ ಸಮಾಜ ನಿರ್ಮಾಣವನ್ನು ಮದ್ಯವರ್ಜಿತರ ಸಮಾವೇಶದ ಮೂಲಕ ಸಾವಿರನೇ ಮದ್ಯವರ್ಜನ ಶಿಬಿರ ಇಂದು ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ ನಡೆಯಿತು.
ಸಮಾವೇಶಕ್ಕೆ ಮೊದಲು ಇಂದು ಬೆಳಿಗ್ಗೆ 10 ಗಂಟೆಗೆ ಮೂಡಬಿದ್ರೆಯ ಡಾ. ಎಂ ಮೋಹನ ಆಳ್ವರ ನೇತೃತ್ವದಲ್ಲಿ ಪಾನಮುಕ್ತರ ಆಕರ್ಷಕ ಮೆರವಣಿಗೆ ನಡೆಯಿತು. ಡಿ. ವೀರೇಂದ್ರ ಹೆಗ್ಗಡೆಯವರು 8 ಲಕ್ಷ ರೂ. ಮೌಲ್ಯದ ಸಮವಸ್ತ್ರವನ್ನು ಪಾನಮುಕ್ತರಿಗೆ ನೀಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಮತ್ತು ಸಹಸ್ರ ಶಿಬಿರಗಳ ಸಮಗ್ರ ವ್ಯವಸ್ಥಾಪನ ಸಮಿತಿಯ ಆಶ್ರಯದಲ್ಲಿ ಎರಡು ದಶಕಗಳಿಂದ ಕರ್ನಾಟಕ ರಾಜ್ಯಾದ್ಯಂತ ಮದ್ಯವರ್ಜನ ಶಿಬಿರಗಳನ್ನು ಪ್ರಾಯೋಜಿಸಿ ಇದೀಗ ಒಂದು ಸಾವಿರನೇ ಶಿಬಿರವನ್ನು ರಾಜ್ಯದ ಹತ್ತು ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ಸೆ.24ರಿಂದ ನಡೆಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಡಿ ವೀರೇಂದ್ರ ಹೆಗ್ಗಡೆ ವಹಿಸಿದ್ದು, ಅಥಣಿಯ ಮೊಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ನಿರ್ವಹಿಸಿದರು. ಕೇಂದ್ರ ಆಯುಷ್ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ವೇದಿಕೆಯ ಲೋಗೋ, ಶಿಬಿರಗಳ ಸಮಗ್ರ ಮಾಹಿತಿಯುಳ್ಳ ಸ್ಮರಣಸಂಚಿಕೆಯನ್ನು ಸಚಿವ ಬಿ.ರಮಾನಾಥ ರೈ, ಜನಜಾಗೃತಿ ಹಾಡುಗಳ ಪರಿವರ್ತನೆ ಸಿಡಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಬಿಡುಗಡೆ ಮಾಡಿದರು. ಶಾಸಕ ಕೆ.ವಸಂತ ಬಂಗೇರ ಸಹಾಯವಾಣಿ ಸಮರ್ಪಣೆಯನ್ನು ಮಾಡಿದರು. ಬೆಂಗಳೂರಿನ ಡಾ. ಎಚ್. ಆರ್. ನಾಗೇಂದ್ರ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಂ. ಆರ್. ರಂಗಶ್ಯಾಮಯ್ಯ ಶುಭಾಶಂಸನೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.