ಅಕ್ಟೋಬರ್ 2ಕ್ಕೆ ಲಾಯಿಲದಲ್ಲಿ ಜಿಲ್ಲೆಯಲ್ಲಿ ಒಂದು ವಿಶೇಷ ಹಳ್ಳಿಹಬ್ಬದ ಶೈಲಿಯ ಗ್ರಾಮ ಸಭೆ

Advt_NewsUnder_1
Advt_NewsUnder_1
Advt_NewsUnder_1

  laila GP pressmeet copyಲಾಯಿಲೋತ್ಸವ  ಮೆರವಣಿಗೆ ಸಾಂಸ್ಕೃತಿಕ ಪ್ರದರ್ಶನ ಇಡೀ ದಿನ ಮಾಹಿತಿ ಹಬ್ಬ ಸರಕಾರಿ ಇಲಾಖೆಗಳ ಸ್ಟಾಲ್ ರಾಜಧಾನಿಗೆ ಕಾರ್ಯಕ್ರಮದ ನೇರಪ್ರಸಾರ

ಲಾಯಿಲ : ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ವಿಶೇಷ ಗ್ರಾಮ ಸಭೆ ನಡೆಯಲಿದ್ದು, ಪ್ರತೀ ಜಿಲ್ಲೆಯಲ್ಲಿ ಆಯ್ದ ಒಂದೆಡೆ ಹಳ್ಳಿಹಬ್ಬದ ಶೈಲಿಯಲ್ಲಿ ನಡೆಸುವ ಗ್ರಾಮ ಸಭೆಗೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾ.ಪಂ. ಆಯ್ಕೆಯಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ವೀಣಾ ರಾವ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಈ ಸಭೆಯಲ್ಲಿ ತಾಲೂಕಿನ 47 ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ- ಉಪಾಧ್ಯಕ್ಷರುಗಳು, ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಸಕರು ಆದಿಯಾಗಿ ವಿವಿಧ ಸ್ಥರದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 9 ಗಂಟೆಗೆ ಪಂಚಾಯತ್ ಬಳಿಯಿಂದ ಟ್ಯಾಬ್ಲೋಗಳನ್ನೊಳಗೊಂಡ ಜಾಥಾ ನಡೆಯಲಿದೆ. ಆಕರ್ಷಕ ಮೆರವಣಿಗೆ ಸುಬ್ರಹ್ಮಣ್ಯ ಸಭಾಭವನದಲ್ಲಿ ಸಮಾಪ್ತಿಗೊಂಡು ಇಡೀ ದಿನ ಸಭೆ ನಡೆಯಲಿದೆ. ವಿವಿಧ ಇಲಾಖೆಗಳಿಂದ ಮಾಹಿತಿ ಕೌಂಟರ್ ಮತ್ತು ಮಾಹಿತಿ ಕಾರ್ಯಕ್ರಮ, ತುಳುನಾಡ ಶೈಲಿಯ ಮತ್ತು ಇತರೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ, ಅಭಿವೃದ್ಧಿ ಸಂದೇಶ ಸಾರುವ ಯಕ್ಷಗಾನ ಪ್ರದರ್ಶನ ಇತ್ಯಾಧಿಗಳು ನಡೆಯಲಿದೆ. ಸಾಧಕರನ್ನು ಗುರುತಿಸುವ ಕಾರ್ಯ ಕೂಡ ನಡೆಯಲಿದೆ. ಶಾಲಾ- ಕಾಲೇಜು, ಅಂಗನವಾಡಿ ಕಾರ್ಯಕ ರ್ತರು, ಆರೋಗ್ಯ ಇಲಾಖೆ ಸೇರಿ ದಂತೆ ಎಲ್ಲರೂ ಇದರಲ್ಲಿ ಭಾಗಿಯಾ ಗಲಿದ್ದಾರೆ. ನೇರ ಪ್ರಸಾರ ನಡೆಯುವ ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮತ್ತು ಆಸಕ್ತರು ಭಾಗವಹಿಸುವಂತೆ ಅವರು ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದರು. ಗೋಷ್ಟಿಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ವಸಂತ ಸುವರ್ಣ, ದಿನೇಶ್ ಶೆಟ್ಟಿ, ಲತಾ ನಾಗೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.