ಮಾಲಾಡಿ : ತಂದೆ-ಮಗನ ಜಮೀನು ವಿವಾದ, ಕಂದಾಯ ನಿರೀಕ್ಷಕರ ಮೇಲೆ ಹಲ್ಲೆ

  ಮಾಲಾಡಿ : ಮಡಂತ್ಯಾರ್ ಸಮೀಪದ ಮಾಲಾಡಿ ಗ್ರಾಮದ ಪಾಲ್ದೊಟ್ಟು ಎಂಬಲ್ಲಿ ಸೆ.20ರಂದು ರಾಮಣ್ಣ ಶೆಟ್ಟಿ (ತಂದೆ) ಮತ್ತು ಗುರುಪ್ರಸಾದ್ ಶೆಟ್ಟಿ(ಮಗ)ಯ ನಡುವಿನ ಜಮೀನು ಮತ್ತು ವಾಸದ ಮನೆಯ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆಗೆ ತೆರಳಿದ್ದ ಇಲ್ಲಿನ ಕಂದಾಯ ನಿರೀಕ್ಷಕರ ಮೇಲೆ ಹಲ್ಲೆಯು ನಡೆದಿದೆ.
ರಾಮಣ್ಣ ಶೆಟ್ಟಿಯವರು ಮಗ ಗುರುಪ್ರಸಾದ್ ಶೆಟ್ಟಿ ತನ್ನ ಮನೆ ಅತಿಕ್ರಮಿಸಿರುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ್ದು, ತೀರ್ಪು ರಾಮಣ್ಣ ಶೆಟ್ಟಿಯವರ ಪರವಾಗಿ ನೀಡಿತ್ತು. ಈ ತಿರ್ಪಿನ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಕಮೀಷನರ್‌ಗೆ ದೂರು ನೀಡಲಾಗಿತ್ತು, ಇದರ ಪರಿಶೀಲನೆಗೆಂದು ಮನೆಗೆ ಹೋಗುವ ದಾರಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಬೇಲಿ ತೆರವುಗೊಳಿಸಲು ಅಧಿಕಾರಿಗಳೂ ಮುಂದಾಗುವ ವೇಳೆ ಪೊಲೀಸರು ಹಾಗೂ ಇಲ್ಲಿನ ತಹಶಿಲ್ದಾರ್ ಮುಂದೆಯೇ ಗುರುಪ್ರಸಾದ್ ಶೆಟ್ಟಿ ನೇರವಾಗಿ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.
ನಂತರ ಸ್ಥಳದಲ್ಲಿದ್ದ ಕಂದಾಯ ನಿರೀಕ್ಷಕ ರವಿಕುಮಾರ್ ಮೇಲೆ ಹಲ್ಲೆ ನಡೆಸಿ, ತಹಶಿಲ್ದಾರ್ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣ ಪೊಲೀಸರು ಗುರುಪ್ರಸಾದ್‌ರವರನ್ನು ಬಂಧಿಸಿದ್ದು, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.