ಛಾಯಾಗ್ರಾಹಕರ ಕ್ರೀಡಾಕೂಟ: ಬೆಳ್ತಂಗಡಿ ವಲಯಕ್ಕೆ ಹಲವು ಬಹುಮಾನಗಳು

skpa copyಬೆಳ್ತಂಗಡಿ : ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲೆ – ಉಡುಪಿ ಜಿಲ್ಲೆ ಮಾತೃ ಸಂಸ್ಥೆ ಆಯೋಜಿಸಿರುವ ಜಿಲ್ಲಾ ವಾರ್ಷಿಕ ಗ್ರಾಮೀಣ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ವಲಯವು ಮಹಿಳೆಯರ ವಯುಕ್ತಿಕ ವಿಭಾಗದ ಸ್ಮರಣ ಶಕ್ತಿ ಸ್ಪರ್ಧೆಯಲ್ಲಿ ವಾಣಿಶ್ರೀ ವೇಣೂರು ಪ್ರಥಮ, ಪುರುಷರ ಗುಂಡೆಸೆತದಲ್ಲಿ ವಿದ್ಯಾದರ ಪೆರಾಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಾಲಿಬಾಲ್ ವಿಭಾಗದಲ್ಲಿ ವಲಯವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಇವರು ಮಾತೃಸಂಸ್ಥೆಯ ಮಹಾಸಭೆಯಲ್ಲಿ ಬಹುಮಾನ ವಿತರಿಸಿದರು.
ಈ ಸಂಧರ್ಭ ವಲಯದ ಗೌರವಾಧ್ಯಕ್ಷ ಪಾಲಾಕ್ಷ ಸುವರ್ಣ, ವಲಯಾಧ್ಯಕ್ಷ ಮೌರೀಸ್ ಫೆರ್ನಾಂಡಿಸ್, ಕಟ್ಟಡ ಸಮಿತಿ ಅಧ್ಯಕ್ಷ ಸುಂದರ್ ಬೆಳ್ತಂಗಡಿ, ಕ್ರೀಡಾಕಾರ್ಯದರ್ಶಿ ದಾಮೋದರ ಗುರುವಾಯನಕೆರೆ, ಕಾರ್ಯದರ್ಶಿ ಸುರೇಶ್ ಕೌಡಂಗೆ, ಕ್ರೀಡಾ ಸಂಚಾಲಕರಾದ ಉಮೇಶ್ ಉಜಿರೆ, ಉಮೇಶ್ ಮದ್ದಡ್ಕ, ಸುಬ್ರಹ್ಮಣ್ಯ ಮಡಂತ್ಯಾರು ಹಾಗೂ ವಲಯದ ಸದಸ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.