ಜಿಲ್ಲಾ ಮಟ್ಟದ ಪ್ರೋ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

GOLIYANGADI copyಕುಂಭನಿಧಿ  ಮೂಲ್ಯರ ಯಾನೆ ಕುಂಬಾರರ ಸಂಘ

ನಿಟ್ಟಡೆ : ಕುಂಭನಿಧಿ ಮೂಲ್ಯರ ಯಾನೆ ಕುಂಬಾರರ ಸಂಘದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಪ್ರೊ. ಕಬಡ್ಡಿ ನ.20ರಂದು ಗೋಳಿಯಂಗಡಿ ಎಸ್‌ಡಿಎಂ ಐಟಿಐ ಕ್ರಿಡಾಂಗಣದಲ್ಲಿ ನಡೆಯಲಿದೆ.
ಆಮಂತ್ರಣ ಪತ್ರಿಕೆಯನ್ನು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಬಿಡುಗಡೆಗೊಳಿಸಿ, ಸೋಲು ಮತ್ತು ಗೆಲುವಿನ ಮಧ್ಯೆ ಬದುಕು ನಿಂತಿದ್ದು, ಪ್ರೀತಿಯಿಂದ ಸಮಾಜದಲ್ಲಿ ಎಲ್ಲವನ್ನೂ ಗಳಿಸಬಹುದು. ಕ್ರೀಡಾಕೂಟಗಳು ಸಮಾಜವನ್ನು ಬೆಸೆಯುವ ಕಾರ್ಯ ಮಾಡಬೇಕು. ಸರ್ವ ಹಿಂದೂ ಸಮಾಜದ ಬಲವರ್ಧನೆಗೆ ಕುಲಾಲ್ ಸಮಾಜ ಕಾರಣವಾಗಲಿ ಎಂದರು. ಸ್ವಜಾತಿ ಸಂಘಟನೆಗಳು ಹಿಂದೂ ಧರ್ಮವನ್ನು ಪ್ರೀತಿಸುವ ವಿಶಾಲತೆ ತೋರುವ ಜೊತೆಗೆ ಸಮಾಜಕ್ಕೆ ಬೆಳಕಾಗಬೇಕು. ಯುವ ಸಂಘಟನೆಗಳು ಸಮಾಜಕ್ಕೆ ಮಾದರಿಯಾಗಬೇಕು. ಯುವ ಪೀಳಿಗೆ ದೇಶದ ಅಂತಃಸತ್ವವನ್ನು ಉಳಿಸಿಕೊಂಡು ಹೋಗುವ ಕಾರ್ಯ ಮಾಡಬೇಕು. ಕುಂಭ ನಿಧಿ ಮೂಲ್ಯರ ಸಂಘ ಗೋಳಿಯಂಗಡಿ ಹಿರಿಯರ ಮಾರ್ಗದರ್ಶನ ಸಲಹೆಗಳೊಂದಿಗೆ ಯುವಕರ ಸಂಘಟಣೆಯಿಂದ ಇದು ಇತರ ಸಮಾಜದ ಸಂಘಟನೆಗಳಿಗೆ ಮಾದರಿಯಾಗಲಿ ಎಂದರು. ಸಂಘದ ಸಂಘಟನಾ ಪ್ರಧಾನ ಕಾರ್ಯದರ್ಶಿ ದಿನಕರ ಕುಲಾಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ, ಕುಂಭನಿಧಿ ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ಪೆರ್ಮುಡ, ನಿವೃತ್ತ ಬ್ಯಾಂಕ್ ಪ್ರಬಂಧಕ ಸೋಮಯ್ಯ ಮೂಲ್ಯ, ಉಪಾಧ್ಯಕ್ಷ ವರದ ಕುಲಾಲ್, ಉಮೇಶ್ ಟೈಲರ್, ಕೋಶಾಧಿಕಾರಿ ಶುಜಿತ್ ಕುಲಾಲ್, ಜೊತೆ ಕಾರ್ಯದರ್ಶಿ ಸವಿತಾ ಅರ್ಕುಡೇಲು, ಗ್ರಾ.ಪಂ ಸದಸ್ಯೆ ಶ್ರೀಮತಿ ಗೌರಿ, ಕಾರ್ಯಕಾರಿ ಸದಸ್ಯರಾದ ಸೋಮನಾಥ್ ಕೆ.ವಿ, ಗೋಪಾಲ ಬರ್ತೆರು, ಪ್ರಸಾದ್ ಕಡ್ತ್ಯಾರು, ಚೇತನ್, ಸವಿತಾ ಕಲ್ಲಾಜೆ, ಅನಿತ ಪೆರ್ಬುಡಾ, ನಯನ ಅರ್ಕುಡೇಲ್, ಸಚಿನ್, ವಿಜಯ ಪೆರ್ಬುಡಾ, ಚಂದ್ರಹಾಸ ಕಲ್ಲಾಜೆ, ಸಂತೋಷ್ ಕಲ್ಲಾಜೆ, ಶಿವಾನಂದ ಬೊಳ್ಜಾಲು, ಸಂದೀಪ್ ಕಲ್ಲಾಜೆ, ಸತೀಶ್ ಕಲ್ಲಾಜೆ, ಗಿರಿಯಪ್ಪ ಮೂಲ್ಯ ಕನಡ್ಯೆಕೋಡಿ, ಧರ್ಣಪ್ಪ ಕಲ್ಲಾಜೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.