ಸಾಹಿತಿ ಅನಂತರಾಮ ಬಂಗಾಡಿಯವರ ಪಂಚಗವ್ಯ ಕೃತಿ ಬಿಡುಗಡೆ

panchagavya ananthrama bangadi copyಬೆಳ್ತಂಗಡಿ : ಸಾಹಿತಿ ಕೆ.ಅನಂತ ರಾಮ ಬಂಗಾಡಿಯವರು ಬರೆದಿರುವ ಕಾವ್ಯ ಸಂಕಲನ ಪಂಚಗವ್ಯ ಕೃತಿಯನ್ನು ಬೆಳ್ತಂಗಡಿಯ ವಾಣಿ ಪದವಿಪೂರ್ಣ ವಿದ್ಯಾಲಯದ ಸಭಾಂಗಣದಲ್ಲಿ ಸೆ.16ರಂದು ಬಿಡುಗಡೆಗೊಳಿಸಲಾಯಿತು.
ಸಾಹಿತ್ಯ ಸಂಘ ಮತ್ತು ಸಂದೇಶ ಪ್ರಕಾಶನದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದ ಆರಂಭದಲ್ಲಿ ಸಾಹಿತಿ ಕೆ.ಅನಂತ ರಾಮ ಬಂಗಾಡಿಯವರು ಸ್ವಾಗತಿಸಿದರು. ಪಂಚಗವ್ಯ ಕೃತಿಯ ಬಗ್ಗೆ ಆಳ್ವಾಸ್ ಮಹಾ ವಿದ್ಯಾಲಯದ ಕನ್ನಡ ವಿಭಾಗದ ಪ್ರಾರ್ಧಯಾಪಕ ಡಾ| ಯೋಗೀಶ್ ಕೈರೋಡಿ ಮಾತನಾಡುತ್ತಾ ಕನ್ನಡದಲ್ಲಿ ಛಂದಸ್ಸಿನ ಹಿಡಿತ ಸಾಧಿಸಿ, ತುಳು, ಮತ್ತು ಕನ್ನಡ, ಉಭಯ ಭಾಷೆಯಲ್ಲಿ ಯಕ್ಷಗಾನ ಕೃತಿ ರಚಿಸಿ- ರಂಗ ಪ್ರದರ್ಶನಕ್ಕೆ ನೀಡಿದ ಬಂಗಾಡಿಯವರು ಓರ್ವ ನಿಗರ್ವಿ ಹಾಗೂ ಆತ್ಮೀಯತೆಯಿಂದ ಬರೆಯುವ ಭಾವ ಜೀವಿ.; ಅವರು ೧೫೦ ಯಕ್ಷಗಾನ ಮತ್ತು ಇತಿಹಾಸ, ಜಾನಪದ, ಕ್ಷೇತ್ರದಲ್ಲಿ ತೊಡಗಿಸಿ ಬರೆದ ಪುಸ್ತಿಕೆಗಳು ಅವರ ಪ್ರತಿಭೆಯನ್ನು ಸಾರಲು ಸಾಕೆಂದರು.
ಕೃತಿಯನ್ನು ಬಿಡುಗಡೆಗೊಳಿಸಿದ ಸಾಹಿತಿ ಬಿ.ತಮ್ಮಯ್ಯನವರು ಬಂಗಾಡಿ, ಬೈಲಂಗಡಿಯ ರಾಜಕೀಯ ಸಂಬಂಧದಂತೆ ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಸಂಬಂಧವಿದೆ. ಅವರು ತುಳು ಯಕ್ಷಗಾನಗಳನ್ನು ನೋಡುವ ಅಭಿಮಾನಿ ವರ್ಗದಲ್ಲಿ ನಾನು ಕೂಡ ಒಬ್ಬನಾಗಿರುತ್ತೇನೆ. ಉತ್ತಮ ಸಂದೇಶ ಉಳ್ಳ ಈ ಉಜ್ವಲ ಕೃತಿಯನ್ನು ಬಿಡುಗಡೆಗೊಳಿಸಲು ನನಗೆ ಬಹಳಷ್ಟು ಹೆಮ್ಮೆಯಾಗಿದೆ ಎಂದು ಹೇಳಿದರು.
ಸಭಾಧ್ಯಕ್ಷ ಯದುಪತಿ ಗೌಡ ಕಾಲೇಜಿನ ಪ್ರಾಚಾರ್ಯರು ಮಾತನಾಡುತ್ತಾ ಪಿನ್ಲೆಂಡ್ ಭಾರತ ಜಾನಪದ ಕ್ಷೇತ್ರ ಕಾರ್ಯದ, ಸಂಶೋಧನ ಕೂಟದಲ್ಲಿ ಅನಂತ ರಾಮ ಬಂಗಾಡಿಯವರ ಪರಿಚಯ ನನಗಾಯಿತು. ನಂತರ ಅವರನ್ನು ನಮ್ಮ ವಿದ್ಯಾಲಯದ ತುಳು ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದೆ. ಅಲ್ಲದೆ ಅವರ ಯಕ್ಷಗಾನ ತಂಡದವರಿಂದ ಇಲ್ಲಿ ಪರಿಸರ ಜಾಗೃತಿ ಬಗ್ಗೆ ಯಕ್ಷಗಾನ ಮಾಡಲು ಅನುವು ಮಾಡಿಕೊಟ್ಟಿದ್ದೆ. ಇಂದು ಬಂಗಾಡಿಯವರ ಈ ಕೃತಿಯು ನಮ್ಮ ವಿದ್ಯಾಲಯ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿರುವುದು ಸಂತಸದ ವಿಷಯವೆಂದು ಹೇಳಿದರು.
ಕಾರ‍್ಯಕ್ರಮದ ಮಧ್ಯೆ ಮಧ್ಯೆ ಗುರುವಾಯನಕೆರೆ ಬಿ.ಸುರೇಶ್ ಭಂಡಾರಿಯವರಿಂದ ಪಂಚಗವ್ಯ ಕೃತಿಯ ಹಾಡುಗಳು ಜನರ ಮನ ರಂಜಿಸಿದರೆ ಅವರಿಗೆ ತಬಲ ಸಾಥಿಯಾಗಿ ಚಂದ್ರಶೇಖರ ಆಚಾರ್ಯರು ಸಹಕರಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ಸಂಯೋಜಿಸಿದರು. ನಾಗರಿಕ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್, ಪಣಿಕಲ ವಸಂತ ಭಟ್, ಬಿ.ಇಬ್ರಾಹಿಂ ಇಂದಬೆಟ್ಟು, ಗ್ರಾ.ಪಂ ಉಪಾಧ್ಯಕ್ಷರು ಅಲ್ಲದೆ ಗಣ್ಯರು ಭಾಗವಹಿಸಿದ್ದರು. ಸಾಹಿತ್ಯ ಸಂಘದ ಸಂಚಾಲಕಿ ಶ್ರೀಮತಿ ಅನುರಾಧ ಭಟ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.