ಯಶಸ್ವಿ ನಾಯಕನಾಗಲು, ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮತ್ತು ತರಬೇತಿ ಬೇಕು

ujire jci sapthaha copyಉಜಿರೆ ಜೇಸಿ  ಸಪ್ತಾಹ ಸಮಾರೋಪ

ಉಜಿರೆ : ಭಾರತದ ಯುವಶಕ್ತಿ ಬಲಿಷ್ಠವಾಗಿದೆ. ಯುವ ಸಮೂಹಕ್ಕೆ ಸರಿಯಾದ ಮಾರ್ಗದರ್ಶನ ದೊರೆತರೆ ಭಾರತ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಯಶಸ್ವಿ ನಾಯಕನಾಗಲು ವ್ಯಕ್ತಿತ್ವ ವಿಕಸನಕ್ಕೆ ಪೂರಕ ಅವಕಾಶ ಹಾಗೂ ತರಬೇತಿ ಬೇಕು ಎಂದು ಉಜಿರೆ ಶ್ರೀ ಧ.ಮಂ. ಕಾಲೇಜಿನ ಪ್ರಾಚಾರ್ಯ ಡಾ| ಕೆ. ಎಸ್. ಮೋಹನ ನಾರಾಯಣ ನುಡಿದರು. ಅವರು ಸೆ. 15ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಜೇಸಿಐ ಉಜಿರೆ ವತಿಯಿಂದ ನಡೆದ ಜೇಸಿ ಸಪ್ತಾಹ – 2016ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ವ್ಯಕ್ತಿ ಕೇವಲ ರಾಜಕೀಯ ನಾಯಕತ್ವ ವಹಿಸದೆ ಧಾರ್ಮಿಕ, ಸಾಮಾಜಿಕ, ಸಹಕಾರ ಹಾಗೂ ಸಂಘಟನೆಯ ಮೂಲಕ ನಾಯಕತ್ವ ಬೆಳೆಸಿಕೊಳ್ಳಲು ಯುವಕರು ಸಮಾಜ ಮುಖಿ ಚಿಂತನೆ ನಡೆಸಬೇಕೆಂದರು. ಜೇಸಿಐ ಪೂರ್ವ ನಿರ್ದೇಶಕ ಸಂಪತ್ ಸುವರ್ಣ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಸೋಲಿಗೆ ದೃತಿಗೆಡದೆ ಯುವಜನತೆ ನಾಳಿನ ಭವಿಷ್ಯಕ್ಕೆ ಅಂತಃಶಕ್ತಿಯನ್ನು ಉದ್ದೀಪನಗೊಳಿಸಿ ಆತ್ಮವಿಶ್ವಾಸ ತುಂಬುವ, ವ್ಯಕ್ತಿತ್ವ ವಿಕಸನ ಸಂಸ್ಥೆಯ ಮೂಲಕ ಸಾಧನೆ ಮೆರೆಯಬೇಕೆಂದರು. ಜೇಸಿ ವಲಯ ಉಪಾಧ್ಯಕ್ಷ ಕೃಷ್ಣ ನಾರಾಯಣ ಮುಳಿಯ ಈಗಿನ ಶಿಕ್ಷಣದಿಂದ ಯಾವುದೇ ಸಾಧನೆ, ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಬಾಲಪ್ರತಿಭೆ ತೌಷಿರ್, ಸಮಾಜ ಸೇವೆಗಾಗಿ ಲಕ್ಷ್ಮಣ ಸಪಲ್ಯ, ನಾಟಿ ವೈದ್ಯ ಬೇಬಿ ಪೂಜಾರಿ, ಅಂಬ್ಯುಲೆನ್ಸ್ ಚಾಲಕ ಪ್ರಕಾಶ್ ಗೌಡ ಮತ್ತು ಸಾಂಸ್ಕೃತಿಕ ಸಾಧನೆಗಾಗಿ ನಿಯಾಜ್ ಆಲಿಯವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಉಜಿರೆ ಜೇಸಿ ನಿಕಟಪೂರ್ವ ಆಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್ ದಂಪತಿಗಳಿಗೆ ಕಮಲಪತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಜಿರೆ ಜೇಸಿಗೆ ಅಜಯ ಕುಮಾರ್, ಕಿರಣ್ ರಾಜ್ ಕೆ., ರಾಜೇಶ್ ಕೆ., ದೀಕ್ಷಿತ್ ರೈ ಮತ್ತು ಸುಮನ್ ಜೈನ್ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಸಂಧ್ಯಾ ಜೈನ್, ದೇವದಾಸ್ ನಾಯಕ್, ಸುಮಾ ಶ್ರೀನಾಥ್, ಸೋಮಶೇಖರ ಶೆಟ್ಟಿ, ಅಶ್ವಿನಿ ಹೆಬ್ಬಾರ್, ರಾಜು, ಹರೀಶ ಶೆಟ್ಟಿ, ರವಿ, ಸತೀಶ್ ಮತ್ತು ಕುಮಾರ ಹೆಗ್ಡೆ ಮುಖ್ಯ ಅತಿಥಿಗಳು, ನೂತನ ಸದಸ್ಯರು ಹಾಗೂ ಸನ್ಮಾನಿತರನ್ನು ಪರಿಚಯಿಸಿದರು. ಉಜಿರೆ ಜೇಸಿ ಅಧ್ಯಕ್ಷ ಮಹೇಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನವೀನ್ ಕುಮಾರ್ ಜೈನ್ ಸಪ್ತಾಹದ ವರದಿ ಮಂಡಿಸಿ ಕೊನೆಯಲ್ಲಿ ವಂದಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಅರುಣ್ ಕುಮಾರ್ ನಿರ್ದೇಶನ ಹಾಗೂ ಮಾಲಿನಿ ಅಂಚನ್ ಸಂಯೋಜನೆಯಲ್ಲಿ ಯಕ್ಷಗಾನ ನೃತ್ಯ ರೂಪಕ ಹಾಗೂ ಉಜಿರೆಯ ತ್ರಿಲೋಕ್ ಡ್ಯಾನ್ಸ್ ಇನ್ಸ್‌ಟಿಟ್ಯೂಟ್ ಇದರ ವಿದ್ಯಾರ್ಥಿಗಳಿಂದ ಫಿಲ್ಮೀ ಡ್ಯಾನ್ಸ್ ಕಾರ್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.