ಬೆಳ್ತಂಗಡಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತೀವ್ರ ಸಿಬ್ಬಂದಿ ಕೊರತೆ ರಾಜ್‌ಕೇಸರಿ ಫ್ರೆಂಡ್ಸ್‌ನಿಂದ ಆರೋಗ್ಯ ಸಚಿವರು, ಶಾಸಕರಿಗೆ ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Rajakesari manavi copyಬೆಳ್ತಂಗಡಿ : ಬೆಳ್ತಂಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯನ್ನು ಸರಕಾರ 100 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದ್ದರೂ ಅಲ್ಲಿಗೆ ಬೇಕಾದ ವೈದ್ಯಾಧಿಕಾರಿಗಳು ಹಾಗೂ ಸ್ವಚ್ಚತಾ ಸಿಬ್ಬಂದಿ ಸೇರಿದಂತೆ ಇತರ ಅಗತ್ಯ ಸಿಬ್ಬಂದಿಗಳ ನೇಮಕಗೊಳಿಸದೆ ಇರುವುದರಿಂದ ಆಸ್ಪತ್ರೆಯ ನಿರ್ವಹಣೆ ಮತ್ತು ಜನತೆಗೆ ಸಿಗಬಹುದಾದ ಅನುಕೂಲಗಳು ಕಡಿಮೆಯಾಗಿದೆ ಎಂದು ರಾಜ್‌ಕೇಸರಿ ಫ್ರೆಂಡ್ಸ್ ಬೆಳ್ತಂಗಡಿ ಇದರ ವತಿಯಿಂದ ಆರೋಗ್ಯ ಸಚಿವರಿಗೆ, ಶಾಸಕರಿಗೆ, ನಗರ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅವರು, ತಮ್ಮ ಬೇಡಿಕೆಯನ್ನು ಶಾಸಕರ ಮೂಲಕ ಆರೋಗ್ಯ ಸಚಿವರಿಗೆ ತಲುಪುವಂತೆ ಮಾಡಿ ಕ್ರಮ ಆಗುವಂತೆ ಮಾಡುವುದಾಗಿ ಭರವಸೆ ನೀಡಿದರು. ಈ ವೇಳೆ ಪ್ರಜಾಪ್ರಭುತ್ವ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ, ಆಸ್ಪತ್ರೆಯ ಅಧೀಕ್ಷಕ ಲೋಕೇಶ್, ಕ್ಷ ಕಿರಣ ಸಿಬ್ಬಂದಿ ಪ್ರಕಾಶ್, ಮೊದಲಾದವರು ಉಪಸ್ಥಿತರಿದ್ದರು.
ಆಸ್ಪತ್ರೆಯ ಕುಂದು ಕೊರತೆಗಳು, ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಕೊರತೆ, ಅಗತ್ಯವಿರುವ ತಾಂತ್ರಿಕ ಉಪಕರಣಗಳ ಕೊರತೆ, ಹೆಚ್ಚಿನ ಆರೋಗ್ಯ ಸೇವೆಯನ್ನು ಇಲ್ಲಿಯೇ ಒದಗಿಸಲು ಅನುಕೂಲವಾಗುವಂತೆ ಜಿ.ಪಂ. ವ್ಯಾಪ್ತಿಯಿಂದ ಕಳಚಿ ನೇರವಾಗಿ ಸರಕಾರದ ಅಧೀನದಲ್ಲಿಯೇ ಕಾರ್ಯನಿರ್ವಹಿಸುವಂತೆ ಮಾಡು ವಲ್ಲಿಯೂ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ರಾಜ್‌ಕೇಸರಿ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ದೀಪಕ್ ಜಿ, ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಪ್ರಶಾಂತ್.ಟಿ, ಕೋಶಾಧಿಕಾರಿ ರೋಹನ್ ಪಿರೇರಾ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.