ಧರ್ಮಸ್ಥಳದಲ್ಲಿ ಸಹಸ್ರಾರು ಮದ್ಯವರ್ಜಿತರ ಸಮಾವೇಶಕ್ಕೆ ಭರದ ಸಿದ್ಧತೆ

Advt_NewsUnder_1
Advt_NewsUnder_1
Advt_NewsUnder_1

dharmasthala madyavarjana shibira samavastra bidugade copyಸಮವಸ್ತ್ರ ವನ್ನು ಡಾ. ಎಲ್.ಎಚ್ ಮಂಜುನಾಥ್ ಬಿಡುಗಡೆಗೊಳಿಸಿದರು

ಬೆಳ್ತಂಗಡಿ : ಕಳೆದ ಎರಡು ದಶಕಗಳಿಂದ ಕರ್ನಾಟಕ ರಾಜ್ಯಾದ್ಯಂತ ಮದ್ಯವರ್ಜನ ಶಿಬಿರಗಳನ್ನು ಪ್ರಾಯೋಜಿಸಿ ಇದೀಗ ಸಾವಿರನೇ ಶಿಬಿರವನ್ನು ಆಯೋಜಿಸುತ್ತಿರುವ ಶುಭ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ಜಯಂತಿ ಪ್ರಯುಕ್ತ ಅ.1ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಸಾವಿರ ಶಿಬಿರ ಸಹಸ್ರಾರು ಮದ್ಯವರ್ಜಿತರ ಸಮಾವೇಶಕ್ಕೆ ಭರದ ಸಿದ್ಧತೆ ನಡೆಯುತ್ತಿದೆ ಎಂದು ಸಂಚಾಲಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಅವರು ಸೆ.20ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮದ್ಯವರ್ಜಿತರು ಮೆರವಣಿಗೆಯಲ್ಲಿ ಧರಿಸಲಿರುವ ‘ಸಮವಸ್ತ್ರ’ವನ್ನು ಬಿಡುಗಡೆಗೊಳಿಸಿ ಮಾತನಾಡಿ, ರಾಜ್ಯದ ಹತ್ತು ಜಿಲ್ಲೆಗಳ ಪ್ರಮುಖ ಸ್ಥಳಗಳಾದ ಬೆಳ್ತಂಗಡಿ, ಸುಳ್ಯ, ಮೂಡಬಿದ್ರೆ, ಹಾಸನ, ಕೆ.ಆರ್.ನಗರ, ಶಿವಮೊಗ್ಗ, ಶಿರಸಿ, ನ್ಯಾಮತಿ, ತುಮಕೂರು, ಕೊಪ್ಪದಲ್ಲಿ ಏಕಕಾಲದಲ್ಲಿ ಸೆ.24ರಿಂದ ಅ.೧ರವರೆಗೆ ಮದ್ಯವರ್ಜನಾ ಶಿಬಿರ ನಡೆಯಲಿದ್ದು, ಈ ಹತ್ತು ಶಿಬಿರಗಳಲ್ಲಿ ಈಗಾಗಲೇ 1250ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ಹೆಸರು ನೋಂದಾಯಿಸಿದ್ದಾರೆ. ಈ ಶಿಬಿರಗಳಲ್ಲಿ ಚಿಕಿತ್ಸೆ ಪಡೆದ ಮದ್ಯವರ್ಜಿತರು ಕುಟುಂಬ ಸಮೇತರಾಗಿ ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.ಅ.1ರಂದು ಬೆಳಗ್ಗೆ ಎಲ್ಲಾ ಪಾನಮುಕ್ತರಿಗೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಮವಸ್ತ್ರ ವಿತರಿಸಲಿದ್ದಾರೆ. ಸಮವಸ್ತ್ರದಲ್ಲಿ ಗಾಂಧಿ ಟೋಪಿ, ಶಾಲು, ಟಿ.ಶರ್ಟು, ಪಂಚೆ ಹೊಂದಿದ್ದು, ರೂ. ೮ಲಕ್ಷ ವೆಚ್ಚದಲ್ಲಿ ಈ ಸಮವಸ್ತ್ರವನ್ನು ತಯಾರಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಧರ್ಮಸ್ಥಳದ ಮಹಾದ್ವಾರದಿಂದ ಮದ್ಯವರ್ಜಿತರು ಮತ್ತು ಅವರ ಕುಟುಂಬಸ್ಥರು ಸಂಭ್ರಮದ ಮೆರವಣಿಗೆಯಲ್ಲಿ ಸಮವಸ್ತ್ರ ಧರಿಸಿ ರಥಬೀದಿ ರಸ್ತೆಯಾಗಿ ದೇವಸ್ಥಾನದ ಮುಂಭಾಗದಿಂದ ಸಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ಸಮಾವೇಶಗೊಳ್ಳಲಿದ್ದಾರೆ ಎಂದು ಹೇಳಿದರು. ಪೂರ್ವಾಹ್ನ 11 ಗಂಟೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾವೇಶವನ್ನು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಉದ್ಘಾಟಿಸಲಿದ್ದಾರೆ. ಬೆಳಗಾವಿ ಮೊಟಗಿ ಮಠದ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಜ್ಯ ಆಯುಶ್ ಸಚಿವ ಶ್ರೀಪಾದ ಯೆಸ್ಸೋ ನಾಯ್ಕ್ ‘ಲೋಗೋ’ ಬಿಡುಗಡೆ ಮಾಡಲಿದ್ದಾರೆ. ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜನಜಾಗೃತಿ ಹಾಡುಗಳ ‘ಪರಿವರ್ತನೆ ಸಿ.ಡಿ’ಯನ್ನು ಸಂಸದ ನಳಿನ್‌ಕುಮಾರ್ ಕಟೀಲ್, ‘ಸಹಾಯವಾಣಿ’ ಸಮರ್ಪಣೆಯನ್ನು ಶಾಸಕ ವಸಂತ ಬಂಗೇರ, ನವಜೀವನ ‘ಗುರುತು ಕಾರ್ಡ್’ನ್ನು ಬೆಂಗಳೂರು ವ್ಯಾಸ ಯೋಗ ವಿ.ವಿ.ಯ ಅಧ್ಯಕ್ಷ ಡಾ| ನಾಗೇಂದ್ರ ಬಿಡುಗಡೆ ಮಾಡಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಇದೇ ದಿನ ಗಾಂಧಿ ಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತದಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಪಾನಮುಕ್ತರು ಸೇರಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಬೆಳ್ತಂಗಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಪೂಂಜ, ಜನಜಾಗೃತಿ ವೇದಿಕೆ ಅಧ್ಯಕ್ಷ ಕಿಶೋರ್ ಹೆಗ್ಡೆ, ಕಾರ್ಯದರ್ಶಿ ವಿನ್ಸೆಂಟ್ ಪಾಸ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಸಂತೋಷ್ ಕುಮಾರ್ ಕಾಪಿನಡ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.