ಯೋಧ ಏಕನಾಥ ಶೆಟ್ಟಿ ಅವರಿಂದ ದೇಶಕ್ಕಾಗಿ ಪ್ರಾಣ ತ್ಯಾಗ ಮಾತ್ರವಲ್ಲ ದೇಹ ತ್ಯಾಗ ಕೂಡ…

ekanath shetty copy

ಏಕನಾಥ ಶೆಟ್ಟಿ

Ekanatha shetty manege adikarigala beti copyಸೇನ ನ್ಯಾಯಾಲಯದಲ್ಲಿ ಅಧಿಕೃತ ಘೋಷಣೆ ಮಾತ್ರ ಬಾಕಿ

* ಏಕನಾಥ ಶೆಟ್ಟಿ ಮನೆಗೆ ಸೇನಾಧಿಕಾರಿ ಭೇಟಿ.
* ಅಧಿಕೃತ ದಾಖಲೆಪತ್ರಗಳ ಜೋಡಣೆಗೆ ಕ್ರಮ.
* ಕಣ್ಮರೆಯಾಗಿದ್ದ ವಿಮಾನ ಎ.ಎನ್ 32ರಲ್ಲಿದ್ದ 29 ಮಂದಿಯೂ ಬದುಕಿರುವುದು ಅನುಮಾನ ಎಂಬುದಾಗಿ ಪತ್ರ.
* ದೇಶದ ಮೊಟ್ಟಮೊದಲು ಅಪರೂಪದ ಕೇಸಿನಲ್ಲಿ ಸುಧೀರ್ಘ ದಿನಗಳ ಶೋಧ ಕಾರ್ಯ ಇನ್ನೂ ಮುಂದುವರಿಕೆ.
* ಸೇನಾ ನ್ಯಾಯಾಲಯದಲ್ಲಿ ವಿಚಾರಣೆಗೆ ಚಾಲನೆ-ಅಲ್ಲಿಂದ ಮನೆಯವರಿಗೆ ಪತ್ರ ರವಾನೆ.
* ಅಂತಿಮ ಘೋಷಣೆ ಪ್ರಧಾನಿ ಮತ್ತು ರಕ್ಷಣಾ ಸಚಿವರ ಹೆಗಲಿಗೆ.

ಬೆಳ್ತಂಗಡಿ : ಚೆನ್ನೈ ವಾಯು ನೆಲೆಯಿಂದ ಅಂಡಮಾನ್ ನಿಕೋಬಾರ್ ತಾಂಬರಂ ಪೋರ್ಟ್‌ಬ್ಲೇರ್ ವಾಯು ನೆಲೆಗೆ ಜುಲೈ 21 ರಂದು ಹೊರಟಿದ್ದ ಯುದ್ಧ ವಿಮಾನ ಎ.ಎನ್- 32 ಇದರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಇತಿಹಾಸದಲ್ಲೇ ವಿಶ್ವದ ಮೊಟ್ಟಮೊದಲ ಪ್ರಕರಣವೆಂದು ಪರಿಗಣಿಸಲ್ಪಟ್ಟಿರುವ ದೀರ್ಘ ಕಾಲದ ಶೋಧ ಕಾರ್ಯಕ್ಕೆ ಸಾಕ್ಷಿಯಾಗಿರುವ ಪ್ರಕರಣದಲ್ಲಿ ವಿಮಾನದಲ್ಲಿದ್ದ 29 ಮಂದಿ ಕೂಡ ಬದುಕುಳಿದಿರುವುದು ಅನುಮಾನ ಎಂಬರ್ಥದಲ್ಲಿ ಸೇನೆಯಿಂದ ಮನೆಯವರಿಗೆ ಅಧಿಕೃತ ಸಂದೇಶ ರವಾನೆಯಾಗಿದೆ.
ಇದರಿಂದಾಗಿ ವಿಮಾನದಲ್ಲಿದ್ದ ಏಕೈಕ ಕನ್ನಡಿಗ ಯೋಧ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ ಏಕನಾಥ ಶೆಟ್ಟಿ ಅವರು ಯೋಧನಾಗಿ ದೇಶಕ್ಕೆ ಪ್ರಾಣ ತ್ಯಾಗ ಮಾಡಿದ್ದೂ ಮಾತ್ರವಲ್ಲದೆ ದೇಹ ತ್ಯಾಗವನ್ನೂ ಮಾಡಿದಂತಾಗಲಿದ್ದು ಆ ಮೂಲಕ ದೇಶಾಭಿಮಾನಿಗಳ ಮನದಲ್ಲಿ ಮರೆಯಲಾಗದ ನೆನಪಾಗಿ ಅಮರರಾಗಿದ್ದಾರೆ.
ಭಾರತೀಯ ಭೂ ಸೇನೆಯ ಮಾಜಿ ಸುಬೇದಾರ್ ಆಗಿದ್ದು ಒಂದು ಹಂತದ ಸೇನಾ ಜೀವನದಿಂದ ನಿವೃತ್ತರಾದ ಬಳಿಕ ಎರಡನೇ ಬಾರಿಗೆ ಗೃಹ ಇಲಾಖೆಯ ವ್ಯಾಪ್ತಿಗೆ ಬರುವ ಸೇನೆಯ ರಕ್ಷಣಾ ವಿಭಾಗಕ್ಕೆ ಮರುನೇಮಕಗೊಂಡು ಇನ್ನೇನೋ ಒಂದೆರಡು ವರ್ಷಗಳಲ್ಲಿ ಸೇವಾ ನಿವೃತ್ತಿ ಹೊಂದಬೇಕಾಗಿದ್ದ ಅವರು ಕೊನೆಯ ಬಾರಿಗೆ ಸಹೋದರಿಯ ಗೃಹ ಪ್ರವೇಶಕ್ಕೆಂದು ಊರಿಗೆ ಬಂದಿದ್ದವರು ಮರಳಿದ ವಾರದ ಅಂತರದಲ್ಲೇ ಈ ಘಟನೆ ಸಂಭವಿಸಿತ್ತು.
ಕಣ್ಣೂರು ಸೇನಾ ಕಚೇರಿಯಿಂದ ಸೇನಾಧಿಕಾರಿ ಭೇಟಿ
ಸೇನಾ ಕಚೇರಿಯಿಂದ ಪೂರ್ವ ಸೂಚನೆ ನೀಡಿದ್ದಂತೆ ಏಕನಾಥ ಶೆಟ್ಟಿ ಅವರ ಮನೆಗೆ ಸೆ. ೧೮ ರಂದು ಕಣ್ಣೂರು ಕಚೇರಿಯ ರಕ್ಷಣಾ ಸೇವಾ ವಿಭಾಗದ ದಾಖಲೆ ನಿರ್ವಹಣಾ ಇಲಾಖೆಯ ಅಧೀಕ್ಷಕ, ಉತ್ತರ ಕರ್ನಾಟಕ ಮೂಲದ ಸುರೇಂದ್ರ ಶೆಟ್ಟಿ ಅವರು ಭೇಟಿ ನೀಡಿದ್ದು, ಮುಂದಿನ ಅಗತ್ಯ ಕ್ರಮಗಳಿಗಾಗಿ ಮನೆಯವರಿಂದ ಸಂಗ್ರಹಿಸಬೇಕಾಗಿರುವ ಮಾಹಿತಿಗಳ ಸಲುವಾಗಿರುವ ಅಧಿಕೃತ ನಮೂನೆಗಳ ಗುಚ್ಚವನ್ನು ಪತ್ನಿ ಜಯಂತಿ ಅವರಿಗೆ ಹಸ್ತಾಂತರಿಸಿದ್ದಾರೆ.
ಮುಂದಿನ ಕ್ರಮ ಏನು?
ಈ ಬಗ್ಗೆ ಮುಂದಿನ ಕ್ರಮ ಏನು ಎಂಬುದಾಗಿ ಸೇನಾ  ಅಧಿಕಾರಿ ಸುರೇಂದ್ರ ಶೆಟ್ಟಿ ಅವರನ್ನು ಸುದ್ದಿ ಮಾತನಾಡಿಸಿದಾಗ ಪ್ರತಿಕ್ರೀಯಿಸಿದ ಅವರು, ಮನೆಯವರಿಗೆ ಬ್ಯಾಂಕ್ ಖಾತೆ ತೆರೆಯುವಿಕೆ ಸೇರಿದಂತೆ ಸೇನೆಗೆ ಕೆಲವು ದಾಖಲೆಗಳು ಬೇಕಾಗಿದೆ. ಅದಕ್ಕಾಗಿ ಮಾಹಿತಿ ಸಂಗ್ರಹಕ್ಕೆ ರಕ್ಷಣಾ ಸಚಿವಾಲಯ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಬರಲಾಗಿದೆ. ಇನ್ನು 3 ದಿನಗಳ ಕಾಲ ಇದ್ದು
ಎಲ್ಲವನ್ನೂ ಸಂಗ್ರಹಿಸಿ ಮರಳಲಾಗುವುದು. ಮಾಹಿತಿಗಳು ಸಲ್ಲಿಕೆಯಾದ ನಂತರ ಸೇನಾ ನ್ಯಾಯಾಲಯದಲ್ಲಿ ನಡೆಯುವ ಕೆಲವೊಂದು ಕಾನೂನಾತ್ಮಕ ಪ್ರಕ್ರೀಯೆಗಳು ನಡೆದು ಅಂತಿಮ ಘೋಷಣೆ ಹೊರಬೀಳಲಿದೆ. ಆ ಬಳಿಕ ಅವರ ವಸ್ತ್ರಗಳು ಸೇರಿದಂತೆ ಅವರ ಸೊತ್ತುಗಳನ್ನು ಸೇನಾ ಅಧಿಕಾರಿಗಳು ಮೃತದೇಹವನ್ನು ತರುವ ರೀತಿಯ ಗೌರವದಲ್ಲೇ ರಾಷ್ಟ್ರ ಧ್ವಜ ಸಹಿತ ತಂದು ತಹಶಿಲ್ದಾರರ ಮೂಲಕ ಮನೆಯವರಿಗೆ ಒಪ್ಪಿಸುವ ಕಾರ್ಯ ಮಾಡಲಾಗುವುದು. ಆ ಬಳಿಕ ಅವರಿಗೆ ಸಲ್ಲತಕ್ಕ ಪರಿಹಾರಗಳು, ಮಾಸಾಶನ ಇತ್ಯಾಧಿ ಸೌಲಭ್ಯಗಳು ದೊರೆಯಲಿದೆ ಎಂದು ತಿಳಿಸಿದರು. ಸೇನಾಧಿಕಾರಿ ಭೇಟಿಯ ಸಂದರ್ಭ ಜಿ.ಪಂ. ಸದಸ್ಯೆ ಮಮತಾ ಎಂ.ಶೆಟ್ಟಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಂಚೋಡು ಗೋಪಾಲ ಕೃಷ್ಣಭಟ್, ಮಾಜಿ ಸೈನಿಕ ಎಂ.ಆರ್. ಜೈನ್, ಏಕನಾಥ ಶೆಟ್ಟಿ ಕುಟುಂಬಿಕರಾದ ಪುರಂದರ ಶೆಟ್ಟಿ, ಸತೀಶ್ ಶೆಟ್ಟಿ, ಶಶಿರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇತ್ತೀಚೆಗೆ ಪತ್ತೆಯಾಗಿದ್ದ ವಿಮಾನದ ಕುರುಹು ಯಾವುದು?
ಇತ್ತೀಚೆಗೆ ವಿಮಾನದ ಕುರುಹು ಒಂದು ಪತ್ತೆಯಾಗಿದೆ ಎಂದು ರಕ್ಷಣಾ ಇಲಾಖೆಯಿಂದ ದೊರೆತಿದ್ದ ಮಾಹಿತಿಯ ಮುಂದುವರಿದ ಭಾಗವಾಗಿ ನಡೆದ ಕಾರ್ಯಾಚರಣೆಯಲ್ಲಿ ಅದು 2014 ರಲ್ಲಿ ನಿಗೂಢ ನಾಪತ್ತೆಯಾಗಿದ್ದ ಎಂ.ಎಚ್ 370 ವಿಮಾನದ್ದೆಂದು ಮಲೇಶಿಯಾ ಸರಕಾರ ಖಚಿತಪಡಿಸಿದೆ.
ಸುಮಾರು ಎರಡು ಮೀಟರ್ ಉದ್ದದ ವಿಮಾನದ ರೆಕ್ಕೆಯ ಭಾಗ ಇದಾಗಿದ್ದು ಅದರಲ್ಲಿರುವ ಬಿಡಿಭಾಗಗಳ ಸಂಖ್ಯೆ ಮತ್ತು ಡೆಲಿವರಿ ದಿನಾಂಕವನ್ನು ಆಧರಿಸಿ ಈ ವರದಿಯನ್ನು ಖಚಿತಪಡಿಸಲಾಗಿದೆ.
ಇಲ್ಲಿ ಅಚ್ಚರಿಯ ವಿಷಯವೆಂದರೆ ಮಲೇಶಿಯಾದಿಂದ ಬೀಜಿಂಗ್‌ಗೆ ಹೊರಟಿದ್ದ ವಿಮಾನದ ರೆಕ್ಕೆಯ ತುಂಡು ಸುಮಾರು 7,500 ಕಿ. ಮೀಟರ್ ದೂರದಲ್ಲಿ ಪತ್ತೆಯಾಗಿರುವುದು ಹೇಗೆ ಎಂಬ ಬಗ್ಗೆ ತಿಳಿದುಕೊಂಡಾಗ, ವಿಮಾನದ ಹಗುರವಾದ ಭಾಗವಾಗಿರುವ ಇದು 2 ವರ್ಷಗಳಲ್ಲಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ತೇಲಿ ಅಷ್ಟು ದೂರು ಕ್ರಮಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.