ಕನ್ಯಾಡಿ ಬಳಿ ಯಾರೋ ತೊರೆದು ಹೋದ ವಿಕಲಾಂಗ ಗಂಡು ಮಗು ಪತ್ತೆ…

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  Magu patte 1 copy Magu patte copy* ಮರದ ಕೆಳಗೆ ಬಟ್ಟೆಯಲ್ಲಿ ಸುತ್ತಿಟ್ಟ ರೀತಿಯಲ್ಲಿ ಮಗು ಪತ್ತೆ.
* ಸಾರ್ವಜನಿಕರ ನೆರವಿನಿಂದ ಆಸ್ಪತ್ರೆಗೆ ದಾಖಲು.
* ದೀರ್ಘ ಚಿಕಿತ್ಸೆ ನೀಡಬೇಕಾಗಿರುವ ರೋಗದ ಕಾರಣಕ್ಕೆ ಹೆತ್ತವರೇ ತ್ಯಜಿಸಿ ಹೋಗಿರುವ ಸಾಧ್ಯತೆ.
* ಅಂದಾಜು 1 ರಿಂದ ಒಂದೂವರೆ ವರ್ಷದ ಮಗು.
* ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ಲಾಕ್‌ಗೆ ಸಾಗಾಟ.
* ಆರೈಕೆಯ ಬಳಿಕ ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರ ಸಾಧ್ಯತೆ.
* ಸೇವಾ ಭಾರತಿಯ ಸೇವಾ ವಿಚಾರ ತಿಳಿದೇ ಇಲ್ಲಿ ಬಿಟ್ಟುಹೋಗಿರುವ ಸಾಧ್ಯತೆ. : ವಿನಾಯಕ್ ರಾವ್ ಪ್ರತಿಕ್ರಿಯೆ.

ಬೆಳ್ತಂಗಡಿ : ಅಂದಾಜು ಒಂದರಿಂದ ಒಂದೂವರೆ ವರ್ಷ ಪ್ರಾಯವಿರಬಹುದಾದ ವಿಕಲಾಂಗ ಗಂಡು ಮಗುವೊಂದು ಸೆ. 21 ಕನ್ಯಾಡಿ || ಇಲ್ಲಿನ ಸೇವಾ ಭಾರತಿ ಇದರ ಕಾರ್ಯಾಲಯದ ಪಕ್ಕದ ಮರದ ಕೆಳಗೆ ಮಲಗಿಸಿಟ್ಟ ರೀತಿಯಲ್ಲಿ ಬೆಳಿಗ್ಗೆ ೭ ಗಂಟೆಯ ವೇಳೆಗೆ ಪತ್ತೆಯಾಗಿದೆ.
ಸಾರ್ವಜನಿಕರ ಗಮನಕ್ಕೆ ಬಂದ ಈ ವಿಚಾರಕ್ಕೆ ತಕ್ಷಣ ಸ್ಪಂದಿಸಿದ ಸೇವಾ ಭಾರತಿ ಕನ್ಯಾಡಿಯ ಮುಖ್ಯಸ್ಥ ವಿನಾಯಕ್ ರಾವ್ ಕನ್ಯಾಡಿ, ಅವರ ಸೇವಾ ಆಂಬುಲೆನ್ಸ್ ಚಾಲಕ ಮಂಜುನಾಥ್, ಪ್ರಮುಖರಾದ ಗ್ರೇಸಿಯನ್ ವೇಗಸ್, ಯತೀಶ್ ಸುವರ್ಣ, ಮುಂತಾದವರು ಮುತುವರ್ಜಿ ವಹಿಸಿ ಅಕ್ಕಪಕ್ಕದ ಮನೆಯವರ ಸಹಾಯದಿಂದ ತಮ್ಮ ಖಾಸಗಿ ಸೇವಾ ಆಂಬುಲೆನ್ಸ್‌ನಲ್ಲಿ ಮಗುವನ್ನು ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ತಲುಪಿಸಿದ್ದಾರೆ. ಇದರಿಂದಾಗಿ ಬೀದಿ ನಾಯಿ ಅಥವಾ, ಇರುವೆ ಇತ್ಯಾಧಿಗಳಿಗೆ ಆಹಾರವಾಗಿ ಅಥವಾ ತೊಂದರೆ ಗೊಳಗಾಗಿ ಪ್ರಾಣ ಕಳೆದುಕೊಳ್ಳಬೇ ಕಾಗಿದ್ದ ಮಗುವೊಂದು ಇದೀಗ ಸರಕಾರಿ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮಂಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ತಲುಪಿದೆ. ಬೆಳ್ತಂಗಡಿಯಿಂದ ಮಗುವನ್ನು ಆರೋಗ್ಯರಕ್ಷಾ ೧೦೮ ಆಂಬುಲೆನ್ಸ್ ಸಿಬ್ಬಂದಿ
ಸುರಕ್ಷಿತವಾಗಿ ಮಂಗಳೂರಿಗೆ ತಲುಪಿಸಿ ಕರ್ತವ್ಯದಕ್ಷತೆ ಮೆರೆದಿದ್ದಾರೆ.
ರೋಗಗ್ರಸ್ಥ ವಿಕಲಾಂಗ ಮಗು: ದೀರ್ಘ ಚಿಕಿತ್ಸೆ ಆವಶ್ಯಕತೆ ಇರುವ ರೀತಿಯ ವಿಕಲಾಂಗ ಮಗು ಇದಾಗಿದ್ದು ತಲೆಯ ಭಾಗದಲ್ಲಿ ಹೆಚ್ಚಿನ ಬೆಳವಣಿಗೆಯೊಂದು ಕಂಡು ಬಂದಿದೆ. ಕಾಲುಗಳು ಸ್ವಾಧೀನ ರಹಿತದಂತೆ ಕಾಣುತ್ತಿದ್ದು ಒಟ್ಟು ದೇಹ ಅಸಮತೋಲನದ ರೀತಿಯಲ್ಲಿದೆ. ಮಗುವಿಗೆ ಯಾವ ಕಾಯಿಲೆ ಇದೆ ಎಂಬ ಬಗ್ಗೆ ಮುಂದಿನ ವೈದ್ಯಕೀಯ ಪರೀಕ್ಷೆಯಿಂದಷ್ಟೇ ಬೆಳಕಿಗೆ ಬರಬೇಕಿದೆ. ಆದರೆ ಮುಖ ಮತ್ತು ಕಣ್ಣುಗಳಲ್ಲಿ ಲವಲವಿಕೆ ಕಂಡು ಬಂದಿದ್ದು, ಮಾನವೀಯ ಹೃದಯವುಳ್ಳವರಿಗೆ ಇದು ಕರುಳು ಚುರುಕ್ ಎನ್ನುವ ಘಟನೆಯಾಗಿತ್ತು. ಒಮ್ಮೆಗೆ ಈ ರೀತಿಯಾಗಿ ಮಗುವನ್ನು ಸಾರ್ವಜನಿಕ ಸ್ಥಳದಲ್ಲಿ ಅನಾಥವಾಗಿಸಿ ತ್ಯಜಿಸಿ ಹೋಗಿರುವ ಬಗ್ಗೆ ಅಲ್ಲಿದ್ದ ಜನರ ಕರುಳು ಹಿಂಡಿದ ಅನುಭವ ಪಡೆದವರು ಯಾವ ಕಲ್ಲು ಹೃದಯ ಈ ಕೆಲಸ ಮಾಡಿದೆ ಎಂಬುದಾಗಿ ಮಾತನಾಡುತ್ತಿದ್ದುದೂ ಕೇಳಿಬಂತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.