ಲಯನ್ಸ್ ಕ್ಲಬ್ ಬೆಳ್ತಂಗಡಿಯಲ್ಲಿ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನದೊಂದಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

lionsಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿಯಲ್ಲಿ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಜರುಗಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿ ತಾಲೂಕಿನ ಗರಿಮೆ ಹೆಚ್ಚಿಸಿದ ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬಾಜನರಾಗಿರುವ ಪ್ರೌಢ ಶಾಲಾ ವಿಭಾಗದ ಯಾಕೂಬ್ ಕೊಯ್ಯೂರು, ಡಿ ಧರ್ಣಪ್ಪ ಧರ್ಮಸ್ಥಳ, ಸೇವಾ ನಿವೃತಿ ಪಡೆದಿರುವ ರಮೇಶ್ ಕಾರಂತ್, ಅವರ ಧರ್ಮಪತ್ನಿ ಸ್ವಯಂ ನಿವೃತಿ ಪಡೆದುಕೊಂಡಿರುವ ಯಶೋಧಾ ರಮೇಶ್ ಕಾರಂತ್ ಅವರನ್ನು ಅವರ ಸಾಧನೆಗೆ ತಕ್ಕುದಾಗಿ ಲಯನ್ಸ್‌ನಿಂದ ಒಂದೊಂದು ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಸುಶೀಲಾ ಎಸ್ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ವಲಯಾಧ್ಯಕ್ಷ ಲ| ರಾಜು ಶೆಟ್ಟಿ ಬೆಂಗೆತ್ಯಾರು, ಕ್ಲಬ್ ಉಪಾಧ್ಯಕ್ಷ ಕೆ ಧರಣೇಂದ್ರ ಜೈನ್, ಕೋಶಾಧಿಕಾರಿ ಅನಿಲ್ ನಾಯ್ಗ, ಕಾರ್ಯದಶಿ ಮೇದಿನಿ ಡಿ ಗೌಡ, ಕಾರ್ಯಕ್ರಮ ಸಂಯೋಜಕ ಕೃಷ್ಣ ಆಚಾರ್ಯ, ಪ್ರಮುಖ ಲಯನ್ಸ್‌ಗಳಾದ ಎಂ.ಜಿ ಶೆಟ್ಟಿ, ರಘುರಾಮ ಗಾಂಭೀರ, ವಿ. ಅರ್ ನಾಯಕ್, ಬಿ. ಕೆ ಸೀತಾರಾಮ ರಾವ್, ಎಂ ಜಯರಾಮ ಭಂಡಾರಿ, ಸಂತೋಷ್ ಕುಮಾರ್ ಕೋಟ್ಯಾನ್, ಹೇಮಂತ್ ರಾವ್ ಯರ್ಡೂರು, ರಾಜೀವ ಗೌಡ, ಧತ್ತಾತ್ಯೇಯ ಗೊಲ್ಲ, ನಿತ್ಯಾನಂದ ನಾವರ, ಅಶ್ರಫ್ ಆಲಿಕುಂಞಿ, ರಾಮಕೃಷ್ಣ ಗೌಡ, ಸುರೇಶ್ ಶೆಟ್ಟಿ ಲಾಕೈ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.