ಬ್ರಹ್ಮಶ್ರೀ ನಾರಾಯಣ ಗುರು ನಾಮಫಲಕ ಅನಾವರಣ

fnct 1

fnct

FUNCTIONಬೆಳ್ತಂಗಡಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ನಗರದ ನಾಮಫಲಕ ಅನಾವರಣ ಕಾರ್ಯಕ್ರಮವು ಇಂದು ಬೆಳ್ತಂಗಡಿ ಹಳೆಕೋಟೆಯಲ್ಲಿ ನಡೆಯಿತು.
ನಾಮಫಲಕವನ್ನು ಶ್ರೀ ಗುರುದೇವ ವಿವಿಧೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್.ಪದ್ಮನಾಭ ಅನಾವರಣಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ , ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ನಗರ ಪಂಚಾಯತ್ ಉಪಾಧ್ಯಕ್ಷ ಜಗದೀಶ್.ಡಿ, ವಾರ್ಡ್ ಸದಸ್ಯರುಗಳಾದ ಜೇಮ್ಸ್ ಡಿಸೋಜ, ರಾಜೇಶ್, ಸಂತೋಷ್ ಕುಮಾರ್, ಹಿರಿಯರಾರ ಬಾಬು ಪೂಜಾರಿ ಕೆಲ್ಲಗೆರೆ ಮೊದಲಾದವರು ಭಾಗವಹಿಸಿದರು.
ಯುವವಾಹಿನಿ ಸಂಚಲನಾ ಸಮಿತಿಯ ಸದಸ್ಯರುಗಳು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಅಶ್ವಥ್ ಕುಮಾರ್ ಸ್ವಾಗತಿಸಿ, ನಿತ್ಯಾನಂದ ನಾವರ ವಂದಿಸಿದರು. ಸ್ಮಿತೇಶ್ ಎಸ್.ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.