ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ರಚನೆ

Gowda sanga copy

Gowda sanga 1 copy

ಬೆಳ್ತಂಗಡಿ : ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ) ಬೆಳ್ತಂಗಡಿ. ತಾಲೂಕು ಸಮಿತಿಯ ಬಲವರ್ಧನೆಗೆ ಪೂರಕವಾಗಿ ತಾಲೂಕು ಯುವ ವೇದಿಕೆ ಮತ್ತು ಮಹಿಳಾ ವೇದಿಕೆಗಳ ಕಾರ್ಯಕಾರಿ ಸಮಿತಿ ರಚನೆ ಮಾಡುವ ಬಗ್ಗೆ ಸಭೆ ಸೆ.12ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾ ಭವನದಲ್ಲಿ ಜರಗಿತು.
ಪ್ರಾಸ್ತಾವಿಕವಾಗಿ ಗೌಡರ ಯಾನೆ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ ಮಾತನಾಡುತ್ತಾ ಜನಸಂಖ್ಯೆಯಲ್ಲಿ ತಾಲೂಕಿನಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಇನ್ನು ಬೆಳೆಯಬೇಕಾಗಿದೆ. ಇದಕ್ಕಾಗಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಗಳನ್ನು ರಚಿಸಿ, ಪ್ರತಿ ಗ್ರಾಮ ಮಟ್ಟದಿಂದಲೇ ಸಕ್ರೀಯವಾಗಿ ಸಮಿತಿಗಳನ್ನು ರಚಿಸುವಲ್ಲಿ ಈ ಸಮಿತಿಗಳು ತಾ| ಸಮಿತಿಗೆ ಪೂರ್ಣ ಸಹಕಾರ ನೀಡಬೇಕು. ಅದಕ್ಕಾಗಿ ಯುವ ಶಕ್ತಿಯ ಪಡೆ ಕಟ್ಟಬೇಕಾಗಿದೆ. ನಮ್ಮ ಬಲಿಷ್ಠ ಸಂಘಟನೆ ಯಾವುದೇ ಸಂಘರ್ಷಕ್ಕೆ ಅಲ್ಲ ಸಾಮರಸ್ಯಕ್ಕಾಗಿ ಎಂದು ತಿಳಿಸಿದರು.
ಯುವ ಶಕ್ತಿಗಳ ಸಂಘಟನೆ ಬಗ್ಗೆ ಉಪನ್ಯಾಸಕ ಆನಂದ ಡಿ. ಮಾತನಾಡಿ ನಮ್ಮ ಯುವಕರು ಗ್ರಾಮ ಮಟ್ಟದಿಂದಲೇ ಗ್ರಾಮ ಸಮಿತಿಗಳನ್ನು ರಚಿಸಿಕೊಂಡು ಶೈಕ್ಷಣಿಕವಾಗಿ, ರಾಜಕೀಯವಾಗಿ ಬೆಳೆಯಬೇಕಾಗಿದೆ. ಇದಕ್ಕಾಗಿ ಗ್ರಾಮೀಣ ಮಟ್ಟದಲ್ಲಿ ಜನರಿಗೆ ಉಪಯುಕ್ತವಾದ ಮಾಹಿತಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ತಾ| ಸಮಿತಿಯ ಗೌರವಾಧ್ಯಕ್ಷ ಹೆಚ್. ಪದ್ಮಗೌಡ ಮಾತನಾಡಿ ಪ್ರಾರಂಭದಲ್ಲಿ ನಮ್ಮ ಸಂಘಟನೆಗಾಗಿ ಪ್ರತಿ ಗ್ರಾಮ ಮಟ್ಟದಲ್ಲಿ ಕೆಲಸ ಮಾಡಿಕೊಂಡು ಬಂದಿರುವ ಕಾರಣ ನಾವು ಸಂಘಟಿತರಾಗಿದ್ದೇವೆ. ಇದನ್ನು ಇನ್ನೂ ಪರಿಣಾಮಕಾರಿ ಬೆಳೆಸಿಕೊಂಡು ಹೋಗುವ ಕಾರಣ ಯುವ ಸಂಘಟನೆ ಮಾಡಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ತಾ| ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಸೋಮೇ ಗೌಡ ವಹಿಸಿದ್ದರು. ವೇದಿಕೆಯಲ್ಲಿ ತಾ| ಸಮಿತಿಯ ಸದಸ್ಯರುಗಳಾದ ಉಪಾಧ್ಯಕ್ಷ ದೇವಸ್ಯ ನಾರಾಯಣ ಗೌಡ, ಕೋಶಾಧಿಕಾರಿ ರಾಜೀವ ಗೌಡ, ಮೋಹನ್ ಗೌಡ ಕಲ್ಮಂಜ, ಉಪಾಧ್ಯಕ್ಷೆ ಜಯಶ್ರೀ ಡಿ.ಎಂ. ಗೌಡ, ಲೋಕೇಶ್ವರಿ ವಿನಯಚಂದ್ರ, ಸವಿತಾ ಜಯದೇವ್, ನ್ಯಾಯವಾದಿ ಗಣೇಶ್ ಗೌಡ, ಬೆಳಾಲು ತಿಮ್ಮಪ್ಪ ಗೌಡ, ಟೈಲರ್ ಧರ್ಣಪ್ಪ ಗೌಡ, ಲಕ್ಷ್ಮಣ ಗೌಡ, ದಾಮೋದರ ಗೌಡ ಬಂದಾರು ಮತ್ತು ವಾಣಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಯಧುಪತಿ ಗೌಡ ಉಪಸ್ಥಿತರಿದ್ದರು. ತಾ| ಸಮಿತಿ ಪ್ರ. ಕಾರ್ಯದರ್ಶಿ ಮೋಹನ್ ಗೌಡ ಸ್ವಾಗತಿಸಿಕೊಂಡು, ನಿರೂಪಿಸಿದರು. ಸಭೆಯಲ್ಲಿ ಗ್ರಾಮ ಸಮಿತಿ ಪದಾಧಿಕಾರಿಗಳು, ಮಹಿಳಾ ಸದಸ್ಯರು, ಯುವಕರು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.