ಕರ್ನಾಟಕ ಸೀರೋ ಮಲಬಾರ್ ಕಥೋಲಿಕ್ ಅಸೋಸಿಯೇಶನ್

karnataka siro malabar 1 copy

karnataka siro malabar 2 copy

karnataka siro malabar 3 copy

karnataka siro malabar copy

ಬೆಳ್ತಂಗಡಿ : ಕರ್ನಾಟಕ ಸೀರೋ ಮಲಬಾರ್ ಕಥೋಲಿಕ್ ಅಸೋಸಿಯೇಶನ್ ಇದರ ಪದಾಧಿಕಾರಿಗಳ ಸಂಗಮ ಮತ್ತು ತರಬೇತಿ ಕಾರ‍್ಯಕ್ರಮವು ಸೆ.9ರಂದು ಸಂತ ಲಾರೆನ್ಸ್‌ರ ಕಥೀಡ್ರಲ್ ಚರ್ಚ್ ಹಾಲ್ ಉದಯ ನಗರ ಬೆಳ್ತಂಗಡಿಯಲ್ಲಿ ನಡೆಯಿತು.
ಬೆಳ್ತಂಗಡಿ ಧರ್ಮಾಧ್ಯಕ್ಷ ಅತಿ ವಂದನೀಯ ಡಾ| ಲಾರೆನ್ಸ್ ಮುಕ್ಕುಯಿರವರು ಉದ್ಘಾಟಿಸಿ, ಸೀರೋ ಮಲಬಾರ್ ಧರ್ಮಸಭೆಯ ಶ್ರೀ ಸಾಮಾನ್ಯರ ಸಂಘಟನೆ ಕೆಎಸ್‌ಎಂಸಿಎಯ ಎಲ್ಲಾ ಚಟುವಟಿಕೆಗಳಿಗೆ ಶುಭಾಶಯಗಳನ್ನು ಕೋರಿದರು. ಸಂಘಟನೆಯ ಧ್ಯೇಯೋದ್ದೇಶಗಳ ಬಗ್ಗೆ ಕೇಂದ್ರೀಯ ಸಮಿತಿ ನಿರ್ದೇಶಕರ ರೆ| ಫಾ| ಬಿನೋಯ್ ಜೋಸೆಫ್ ಕುರಿಯಾಳಶೇರಿಯವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಅತಿಥಿಗಳಾಗಿ ಉಪನ್ಯಾಸಕಿ ಡಾ| ಮೇರಿ.ಎಂ.ಜೆರವರು ಶುಭ ಹಾರೈಸಿದರು. ಬೆಳ್ತಂಗಡಿ ಜ್ಯೋತಿ ಆಸ್ಪತ್ರೆ ಸಿಸ್ಟರ್ ಡಾ| ಅನುಜಾ ಎಸ್.ಡಿ ವೈದ್ಯಾಧಿಕಾರಿಗಳು, ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಸೇವಿಯರ್ ಪಾಲೇಲಿರವರು ಸಂಘಟನೆಯ ಯಶಸ್ವಿ ಕಾರ‍್ಯಾಚರಣೆಗೆ ಪದಾಧಿಕಾರಿಗಳ ತರಬೇತಿ ಅಗತ್ಯ ಎಂಬುದನ್ನು ಒತ್ತಿ ಹೇಳಿದರು.
ತರಬೇತಿದಾರ ಇಂಡಿಯಾ ಸಿಕ್ತ್‌ಸೆನ್ಸ್ ರಾಷ್ಟ್ರೀಯ ಮಟ್ಟದ ತಜ್ಞ ಡಾ| ಅಬ್ರಹಾಂ ರೂಬಿರವರು ಪದಾಧಿಕಾರಿಗಳ ತರಬೇತಿಯನ್ನು ಮನೋಜ್ಞವಾಗಿ ನಿರ್ವಹಿಸಿದರು.
ಸಭಾ ಕಾರ‍್ಯಕ್ರಮದಲ್ಲಿ ಬಿಷಪ್ ಲಾರೆನ್ಸ್ ಮುಕ್ಕುಯಿ, ತರಬೇತು ದಾರ ಡಾ| ಅಬ್ರಹಾಂ ರೂಬಿ ಮತ್ತು ಇತ್ತೀಚೆಗೆ ಪೋಲಿಸ್ ಉಪನಿರೀಕ್ಷಕರಾಗಿ ಪದೋನ್ನತಿಗೊಂಡ ಬೆಳ್ತಂಗಡಿಯ ಓಮನ ಎನ್.ಕೆ ಯವರನ್ನು ಸನ್ಮಾನಿಸಲಾಯಿತು.
ದ.ಕ, ಉಡುಪಿ, ಮತ್ತು ಕೊಡಗು ಜಿಲ್ಲೆಗಳ ಜಿಲ್ಲಾ, ತಾಲೂಕು ಮತ್ತು ಪ್ರಾಥಮಿಕ ಘಟಕಗಳ ೨೦೦ರಷ್ಟು ಪದಾಧಿಕಾರಿಗಳು ತರಬೇತಿ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ‍್ಯಕ್ರಮದಲ್ಲಿ ಶ್ರೀಮತಿ ಅಲ್ಫೋನ್ಸಾ ಪ್ರಾರ್ಥಿಸಿ, ಕೆ.ಕೆ ಸೆಬಾಸ್ಟಿಯನ್ ಸ್ವಾಗತಿಸಿ, ಜೋಸೆಫ್ ಟಿ.ಜೆ ಮತ್ತು ಶ್ರೀಮತಿ ಲಿಲ್ಲಿ ಕಾರ‍್ಯಕ್ರಮವನ್ನು ನಿರೂಪಿಸಿದರು. ಸದಸ್ಯರ ಗುಂಪು ಚರ್ಚೆಯ ಮಾಡರೇಟರಾಗಿ ಸೇವಿಯರ್ ಪಾಲೇಲಿ ಕಾರ‍್ಯ ನಿರ್ವಹಿಸಿದರು. ಬಿಟ್ಟಿ ನಿಡುನಿಲಂ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.