ಡ್ರಾಮಾ ಜೂನಿಯರ್‌ನಲ್ಲಿ ಫೈನಲ್ ಪ್ರವೇಶಿಸಿದ ತುಷಾರ್

Advt_NewsUnder_1
Advt_NewsUnder_1
Advt_NewsUnder_1

333ಡಾ. ರಾಜ್ ಕುಮಾರ್ ಪಾತ್ರದಲ್ಲಿ  ತುಷಾರ್

ಬೆಳ್ತಂಗಡಿ : ಝೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಬೆಳ್ತಂಗಡಿಯ ಕುವರ ತುಷಾರ್ ಕಾರ್ಯಕ್ರಮದ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್ ಸ್ಪರ್ಧೆಯ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಮುಂದಿನ ವಾರ ಸೆ.17 ಮತ್ತು 18ರಂದು ರಾತ್ರಿ 9 ಗಂಟೆಗೆ ಸೆಮಿಫೈನಲ್ ಪ್ರಸಾರವಾಗಲಿದೆ. ಅದರಲ್ಲಿ ತುಷಾರ್ ನಟಸಾರ್ವಭೌಮ ರಾಜ್‌ಕುಮಾರ್‌ರವರ ಪಾತ್ರವನ್ನು ಮತ್ತು ಸರ್ದಾರ್ಜಿ ಪಾತ್ರವನ್ನು ಅಭಿನಯಿಸಿ ದ್ದಾನೆ. ಈ ಅಭಿನಯಕ್ಕೆ ತುಷಾರ್‌ಗೆ ವೀಕ್ಷಕರ ವೋಟ್ ಬೇಕಾಗಿದೆ. ಎಷ್ಟು ಹೆಚ್ಚು ವೋಟ್ ಬರುತ್ತದೋ ಅದು ಫೈನಲ್‌ನಲ್ಲಿ ಅವನ ಸಹಾಯಕ್ಕೆ ಬರುತ್ತದೆ. ಫೈನಲ್‌ನಲ್ಲಿ ತುಷಾರ್ ಜಯಗಳಿಸ ಬೇಕಾದರೆ ಅತಿ ಹೆಚ್ಚು ಸಂಖ್ಯೆಯ ವೋಟ್ ಬರಬೇಕು. ಆದ್ದರಿಂದ ಎಲ್ಲರೂ ಸೆ.17 ಮತ್ತು 18ರಂದು ರಾತ್ರಿ 10ರಿಂದ ಮರುದಿನ ಬೆಳಿಗ್ಗೆ 9 ಗಂಟೆಯವರೆಗೆ THUS ಎಂದು ಟೈಪ್ ಮಾಡಿ 57575ಗೆ ಎಸ್.ಎಂ.ಎಸ್. ಮಾಡಬೇಕಾಗಿ ಕುಟುಂಬಸ್ಥರು ವಿನಂತಿಸಿದ್ದಾರೆ. ತುಷಾರ್ ಬೆಳ್ತಂಗಡಿ ಮಿತ್ತಬಾಗಿಲು ಗ್ರಾಮದ ದಿಡುಪೆಯ ಪಯ್ಯೆ ಪದ್ಮನಾಭ ಗೌಡ ಮತ್ತು ದಿ. ಪುಷ್ಪಲತಾರವರ ಮೊಮ್ಮಗ ಹಾಗೂ ಸುಳ್ಯದಲ್ಲಿ ಉದ್ಯಮಿಯಾಗಿರುವ ಪಯ್ಯೆ ವಿಜಯಕುಮಾರ್-ರೂಪಶ್ರೀ ದಂಪತಿಯ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.