ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಷ್ಕೃತ ಶಾಲಾ ಮುಖ್ಯೋಪಾಧ್ಯಾಯ ಡಿ ಧರ್ಣಪ್ಪ ಇವರನ್ನು ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಯಿತು.
ಮಕ್ಕಳ ಕ್ಷೇಮಪಾಲನಾ ಅಭಿವೃದ್ದಿ ಅಧಿಕಾರಿ ಬಿ.ಸೋಮಶೇಖರ ಶೆಟ್ಟಿ ಯವರು ವ್ಯಕ್ತಿಯಲ್ಲಿ ತತ್ವಗಳು ಸೇರಿದಾಗ ವ್ಯಕ್ತಿತ್ವ ಬೆಳೆಯುತ್ತದೆ. ದೇವರ ಅದ್ಭುತ ಸೃಷ್ಟಿ ಅಧ್ಯಾಪಕರು. ತರಗತಿಯ ಮಗು ತನ್ನ ಮಗುವೆಂದು ತಿಳಿದು ದುಡಿಯುವಾತ ನಿಜವಾದ ಶಿಕ್ಷಕ ಎಂದರು.
ತಾನು ಮಾಡುವ ಕೆಲಸದ ಬಗ್ಗೆ ಚಿಂತನೆ ವ್ಯಕ್ತಿ ಸಾಧನೆಯಿಂದ ಗುರುತಿಸಲ್ಪಡುತ್ತದೆ ಎಂದು ಅಭಿನಂದಿಸಿದ ಶ್ರೀ ಧ.ಮ.ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮನಮೋಹನ ನಾಯಕ್ ನುಡಿದರು. ಶ್ರೀ ಧ.ಮ.ಪ್ರೌಡ ಶಾಲೆಯ ಮುಖ್ಯ ಶಿಕ್ಷಕ ಜನಾರ್ದನ ತೋಳ್ಪಾಡಿತ್ತಾಯ ಮಾತನಾಡಿ ಶ್ರಮ ವಹಿಸಿ ದುಡಿಯುವಾತ ಪ್ರಶಸ್ತಿಗೆ ಪಾತ್ರನಾಗುತಾನೆ. ಪ್ರಶಸ್ತಿಯ ಹಿಂದೆ ಪರಿಶ್ರಮ, ತ್ಯಾಗ, ಸತತ ಪ್ರಯತ್ನ ಅತೀ ಅಗತ್ಯ ಎಂದರು. ಶ್ರೀ ಧ.ಮ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭಿವಂದನೆ ಸ್ವೀಕರಿಸಿದ ಜಿಲ್ಲಾ ಪ್ರಶಸ್ತಿ ಪುರಷ್ಕೃತ ಶಾಲಾ ಮುಖ್ಯೋಪಾಧ್ಯಾಯ ಡಿ ಧರ್ಣಪ್ಪರವರು ಜೀವನದಲ್ಲಿ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ. ಶಾಲಾ ಮೂಲಭೂತ ಸೌಕರ್ಯಗಳನ್ನು ಆಡಳಿತ ಮಂಡಳಿಯು ಒದಗಿಸಿದ್ದು ತಾನು ಸೇರಿದ ಸಂಘ ಸಂಸ್ಥೆಗಳಲ್ಲಿ ತನ್ನದೇ ಆದ ಮುದ್ರೆ ಒತ್ತಿರುತ್ತೇನೆ.ನನ್ನ ಪ್ರಶಸ್ತಿಯನ್ನು ಸಂಸ್ಥೆಗೆ, ಸಹೋದ್ಯೋಗಿಗಳಿಗೆ, ಹಳೆ ವಿದ್ಯಾರ್ಥಿಗಳಿಗೆ ಹಾಗೂ ಮುದ್ದು ಪುಟಾಣಿಗಳಿಗೆ ಅರ್ಪಿಸಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ರವರು ಮಾತನಾಡಿ ಈ ಪ್ರಶಸ್ತಿಯು ಸಂತೋಷವನ್ನು ಉಂಟುಮಾಡಿದೆ. ಮುಂದೆ ರಾಜ್ಯ ಪ್ರಶಸ್ತಿ ಲಭಿಸಲಿ ಎಂದು ಹರಸಿದರು. ಶಿಕ್ಷಕ ಸುಬ್ರಹ್ಮಣ್ಯ ರಾವ್ ಸ್ವಾಗತಿಸಿ, ಲಕ್ಷ್ಮಣ ಗೌಡ ವಂದಿಸಿದರು. ಶ್ರೀಮತಿ ಮನೋರಮ ನಿರೂಪಿಸಿದರು. ಶಾಲಾ ಮಕ್ಕಳು, ಸಹೋದ್ಯೊಗಿಗಳು ಉಪಸ್ಥಿತರಿದ್ದರು.