ರೂ.13.85 ಲಕ್ಷ ವೆಚ್ಚದ ನೂತನ ಕಟ್ಟಡ ‘ನಂದ ಗೋಕುಲ’ ಉದ್ಘಾಟನೆ

Koyyu milk socity kattada udgatane copyಕೊಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘ

ಕೊಯ್ಯೂರು : ಕೊಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘ ಇದರ ವತಿಯಿಂದ ಸುಮಾರು ರೂ.13.85 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಂಘದ ನೂತನ ಕಟ್ಟಡ ‘ನಂದಗೋಕುಲ’ ಇದರ ಉದ್ಘಾಟನಾ ಸಮಾರಂಭ ಸೆ.8ರಂದು ಜರುಗಿತು.
ನೂತನ ಕಟ್ಟಡವನ್ನು ದ.ಕ. ಹಾಲು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ರವಿರಾಜ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ಬೆಳ್ತಂಗಡಿ ತಾಲೂಕು ಜಿಲ್ಲೆಯಲ್ಲಿ ಅತೀ ಹೆಚ್ಚು ಹಾಲು ಸಂಗ್ರಹಿಸುವ ತಾಲೂಕಾಗಿದ್ದು, ತಾಲೂಕಿನಲ್ಲಿ 20 ಸಂಘಗಳು ಬಿ.ಎಂ.ಸಿ ಅಳವಡಿಸಿಕೊಂಡಿವೆ. ಕೊಯ್ಯೂರು ಸಂಘಕ್ಕೂ ರೂ.11.85 ಲಕ್ಷ ವೆಚ್ಚದಲ್ಲಿ ಬಿ.ಎಂ.ಸಿ ಅಳವಡಿಸಿಲಾಗಿದೆ ಎಂದರು. ಕೃಷಿ ಉತ್ಪನ್ನ ಸೇರಿದಂತೆ ಎಲ್ಲಾ ಉತ್ಪನ್ನಗಳಲ್ಲಿ ಹಣ ಹಳ್ಳಿಯಿಂದ ಪೇಟೆಗೆ ಹೋಗುತ್ತದೆ. ಆದರೆ ಹೈನುಗಾರಿಕೆಯಲ್ಲಿ ಮಾತ್ರ ಹಣ ಪೇಟೆಯಿಂದ ಹಳ್ಳಿಗೆ ಬರುತ್ತಿದೆ. ಕೊಯ್ಯೂರು ಗ್ರಾಮಕ್ಕೆ ದಿನಕ್ಕೆ ರೂ.68 ಸಾವಿರದಂತೆ ವರ್ಷಕ್ಕೆ ರೂ.2.50 ಕೋಟಿ ಹಣ ಪೇಟೆಯಿಂದ ಬರುತ್ತಿದೆ ಎಂದು ವಿವರಿಸಿದರು. ಅಧ್ಯಕ್ಷತೆ  ವಹಿಸಿದ್ದ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕೆರೆಹಿತ್ತಿಲು ಅವರು ಮಾತನಾಡಿ ಈ ಸಂಘ ಇಷ್ಟು ಪ್ರಗತಿಯಾಗಬೇಕಾದರೆ ಹಿಂದೆ ಸೇವೆ ಸಲ್ಲಿಸಿದ ಅಧ್ಯಕ್ಷರು, ನಿರ್ದೇಶಕರುಗಳು ಹಾಗೂ ಈಗ ಸೇವೆ ಸಲ್ಲಿಸುತ್ತಿರುವ ಎಲ್ಲಾ ನಿರ್ದೇಶಕರು, ಸದಸ್ಯರ ಮುಂದೆಯೂ ಎಲ್ಲರ ಸಹಕಾರ ಕೋರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ. ಹಾಲು ಒಕ್ಕೂಟದ ನಿರ್ದೇಶಕ ಬಿ. ನಿರಂಜನ್ ಮಾತನಾಡಿ ಕೊಯ್ಯೂರು ಸಂಘವನ್ನು ಹಿಂದಿನ ಅಧ್ಯಕ್ಷರುಗಳು ಬಹಳಷ್ಟು ಕಷ್ಟದಲ್ಲಿ ಬೆಳೆಸಿದ್ದಾರೆ. ಇಲ್ಲಿ ಈಗ ಉತ್ತಮ ಕಟ್ಟಡವಾಗಿದ್ದು, ಬಿ.ಎಂ.ಸಿ ಅಳವಡಿಸಲಾಗಿದೆ. ಇದರ ಸದುಪಯೋಗ ಸದಸ್ಯರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಒಕ್ಕೂಟದ ನಿರ್ದೇಶಕ ಪದ್ಮನಾಭ ಅರ್ಕಜೆ ಮಾತನಾಡಿ ಕೊಯ್ಯೂರು ಸಂಘ ಬೆಳೆಯುವಲ್ಲಿ ಹಲವು ಮಂದಿಯ ಶ್ರಮ ಇದೆ. ಇಂದು ಈ ಸಂಘ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸ್ವಂತ ಕಟ್ಟಡ ಹೊಂದಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್, ಇನ್ನೋರ್ವ ನಿರ್ದೇಶಕ ಡಾ| ಕೆ.ಎಂ. ಕೃಷ್ಣ ಭಟ್, ನಿರ್ವಾಹಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ, ಮಂಗಳೂರು ಸಹಕಾರ ಸಂಘಗಳ ನಿಬಂಧಕ ಸಲೀಂ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿತ್ಯಾನಂದ ಭಕ್ತ, ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ತಾ.ಪಂ. ಸದಸ್ಯ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ಪ್ರಾರಂಭದ ಕಾರ್ಯದರ್ಶಿ ಬೊಮ್ಮಣ್ಣ ಗೌಡರನ್ನು ಸನ್ಮಾನಿಸಲಾಯಿತು. ಸ್ಥಾಪಕ ಸಿಬ್ಬಂದಿ ಪುರುಷೋತ್ತಮ, ನಾರ್ಣಪ್ಪ, ಹೆಚ್ಚು ಹಾಲು ಹಾಕುತ್ತಿರುವ ಶ್ರೀಮತಿ ವೀಣಾ, ಕಟ್ಟಡ ಕಾಮಗಾರಿ ನಿರ್ವಹಿಸಿದ ವೆಂಕಣ್ಣ ಇವರನ್ನು ಅಭಿನಂದಿಸಲಾಯಿತು. ಮೋಹನ್‌ನಾಯ್ಕ್ ಸನ್ಮಾನಿತರನ್ನು ಪರಿಚಯಿಸಿದರು. ಜನಶ್ರೀ ವಿದ್ಯಾ ಯೋಜನೆಯಲ್ಲಿ ಕು| ಜಯಶ್ರೀ ಇವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಒಕ್ಕೂಟದ ವಿಸ್ತರಣಾಧಿಕಾರಿ ವಾಸುದೇವ ಪುರಾಣಿಕ್, ಪಶುವೈದ್ಯಾಧಿಕಾರಿ ಡಾ| ದಿನೇಶ್ ಸರಳಾಯ, ಸಂಘದ ನಿರ್ದೇಶಕ ಡೊಂಬಯ್ಯ ಗೌಡ ಜೆಂಕಿನಡ್ಕ, ಬೂದ ಪಿ, ವೆಂಕಪ್ಪ ಗೌಡ ಪಡಂತರಂಡ, ಡಾಕಯ್ಯ ಗೌಡ ಪಾತ್ರಳ, ಗೀತಾ ಎ. ಶಬರಾಯ ಬಜಿಲ ಪರನೀರು, ಮೋಹನದಾಸ್ ಪಾಂಬೇಲು, ಕೇಶವ ಗೌಡ ಕೋಂಗುಜೆ, ಸಿಬ್ಬಂದಿಗಳಾದ ಶಶಿಕಲಾ, ವೇದಾವತಿ, ದಿಲೀಪ್ ಸಹಕರಿಸಿದರು. ಜಯಶ್ರೀ ಮತ್ತು ಸುನಾಲಿ ಇವರ ಪ್ರಾರ್ಥನೆ ಬಳಿಕ ನಿರ್ದೇಶಕ ಪ್ರಚಂಡಭಾನು ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಿ ಸವಿತಾ ವರದಿ ವಾಚಿಸಿದರು. ಒಕ್ಕೂಟದ ಉಪವ್ಯವಸ್ಥಾಪಕ ಡಾ| ರಾಮಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿ, ಲೋಕೇಶ್ ಬಿ. ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.