ಜೆಸಿಐ ಬೆಳ್ತಂಗಡಿ ಮಂಜುಶ್ರೀ ಜೇಸಿ ಸಪ್ತಾಹ-2016 ಸಮೃದ್ಧ ಉದ್ಘಾಟನೆ

jc bdy

  ಬೆಳ್ತಂಗಡಿ : ಶ್ರೀ ಗುರುನಾರಾಯಣ ಸಭಾಭವನ ಬೆಳ್ತಂಗಡಿಯಲ್ಲಿ ಸೆ.14ರಿಂದ ಸೆ.20ರವರೆಗೆ ಪ್ರತಿದಿನ ಸಂಜೆ ಗಂಟೆ 6.30ರಿಂದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಜೇಸಿ ಸಪ್ತಾಹ-2016 ಸಮೃದ್ಧ ಕಾರ್ಯಕ್ರಮವು ನಡೆಯಲಿದೆ.
ಸೆ.14ರಂದು ಜೇಸಿ ಸಪ್ತಾಹದ ಉದ್ಘಾಟನೆಯನ್ನು ಉಜಿರೆ ಶ್ರೀ.ಧ.ಮಂ ಟ್ರಸ್ಟ್ ನ ಉಪಾಧ್ಯಕ್ಷ ಪ್ರೊ.ಎಸ್ ಪ್ರಭಾಕರ್ ನೆರವೇರಿಸಿದರು. ಮುಖ್ತ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೊಡಾ ರೀಜಿನಲ್ ಮ್ಯಾನೇಜರ್(ಹುಬ್ಬಳ್ಳಿ) ಎ.ಎ.ತೋಮಚನ್, ಜೆಸಿಐ ಇಂಡಿಯಾ ವಲಯ 15ರ ವಲಯಾಧ್ಯಕ್ಷ ಜೆಎಫ್‌ಎಂ ಸಂದೀಪ್ ಕುಮಾರ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಸ್ಥಾಪಕಾಧ್ಯಕ್ಷ ಜೆಸಿ.ಪ್ರೊ. ಶ್ರೀರಾಮ್ ಕಾರಂತರವರು ಆಗಮಿಸಿದ್ದರು.
ದ್ವಿತೀಯ ಪಿಯುಸಿಯಲ್ಲಿ ಕರ್ನಾಟಕದಲ್ಲಿ ದ್ವಿತೀಯ ರ‍್ಯಾಂಕ್ ವಿಜೇತೆ ದಕ್ಷಾ ಜೈನ್ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಕರ್ನಾಟಕಕ್ಕೆ ದ್ವಿತೀಯ ರ‍್ಯಾಂಕ್ ವಿಜೇತ ವಿದ್ಯಾರ್ಥಿ ಸುಶ್ರುತ್‌ರವರಿಗೆ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೇಸಿ ಕಾರ್ಯದರ್ಶಿ ಪ್ರಶಾಂತ ಲಾಲ, ನಿಕಟಪೂರ್ವ ಅಧ್ಯಕ್ಷ ಚಿದಾನಂದ ಇಡ್ಯ, ಅಧ್ಯಕ್ಷ  ವಸಂತ ಶೆಟ್ಟಿ ಶ್ರದ್ಧಾ, ಕರ್ಯಕ್ರಮ ಸಂಯೋಜಕ ಸಂತೋಷ್ ಪಿ.ಕೋಟ್ಯಾನ್, ಜೂ.ಜೇಸಿ ಅಧ್ಯಕ್ಷ ಸ್ಮಿತೇಶ್ ಬಾರ್ಯ, ಕಿರಣ್ ಕುಮಾರ್ ಶೆಟ್ಟಿ, ಕಾರ್ಯಕ್ರಮ ಸಹ ಸಂಯೋಜಕರಾದ ಗಣೇಶ್ ಬಿ.ಶಿರ್ಲಾಲು, ಅಭಿನಂದನ್ ಹರೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.