ಮಡಂತ್ಯಾರ್ ಜೇಸಿ ಸಪ್ತಾಹ ಮಹಿಳಾ ದಿನ : ನಿರ್ದಿಷ್ಟ ಗುರಿ ಇಲ್ಲದಿದ್ದರೆ ಜೀವನಕ್ಕೆ ಅರ್ಥ ಇಲ್ಲ : ಫಾ| ರಾಜೇಶ್

Advt_NewsUnder_1
Advt_NewsUnder_1
Advt_NewsUnder_1

jci prgmಮಡಂತ್ಯಾರ್ : ನಮ್ಮ ಯವ್ವನವನ್ನು ಒಳ್ಳೆಯವಾಗಿ ರೂಪಿಸಿಕೊಂಡರೆ ನಮ್ಮ ಜೀವನ ಸಾರ್ಥಕ ಕ್ರಮ ಇದರ ಪರಿಶ್ರಮದಿಂದ ಫಲ ದೊರೆಯುತ್ತದೆ. ನಮ್ಮ ಜೀವನದಲ್ಲಿ ಗುರಿ ಇರಬೇಕು ಗುರಿ ಇಲ್ಲದಿದ್ದರೆ ಜೀವನಕ್ಕೆ ಅರ್ಥ ಸಿಗುವುದಿಲ್ಲ ಎಂದು ಕಾರವಾರ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ವಂ| ಫಾ| ರಾಜೇಶ್ ಡಿಸೋಜ ಹೇಳಿದರು.
ಅವರು ಸೆ.9ರಿಂದ 15ರವರೆಗೆ ನಡೆಯುವ ಮಡಂತ್ಯಾರ್ ಜೇಸಿ ಸಪ್ತಾಹದ 4ನೇ ದಿನ ಮಹಿಳಾ ದಿನದ ಮುಖ್ಯ ಅತಿಥಿಯಾಗಿ ಆಗಮಿಸಿ ಯುವಕರಿಗೆ ಸಂದೇಶ ನೀಡಿದರು. ಯುವ ಜನರೇ ಕನಸು ಕಾಣಬೇಕು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಆಗ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದರು.
ವೇದಿಕೆಯಲ್ಲಿ ಮಚ್ಚಿನ ಕ್ಷೇತ್ರದ ತಾ.ಪಂ ಸದಸ್ಯೆ, ಮಡಂತ್ಯಾರ್ ಮಹಿಳಾ ಮಂಟಲದ ಅಧ್ಯಕ್ಷೆ ಶ್ರೀಮತಿ ಪ್ರಪುಲ್ಲ ಜಿ ಹಾರವೆ, ಕಾಪು ಜೇಸಿಯ ಅಧ್ಯಕ್ಷೆ ಜೇಸಿ ಸೌಮ್ಯರಾಕೇಶ್, ಶಂಕರಪುರ ಜಾಸ್ಮಿಸ್ ಜೇಸಿಯ ಅರ್ಧಯಕ್ಷೆ ಜೇಸಿ ಸಿಲ್ವಿಯಾ ಕ್ಯಾಸ್ತಿಲಿನೊ, ಸಿಲ್ವರ್ ಸ್ಟಾರ್ ಜೇಸಿ ಉಡುಪಿಯ ಜೇಸಿ ಜ್ಯೋತಿ ಆರ್.ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಜೇಸಿ ಜಯೇಶ್ ಬಿರೆಟ್ಟೊ ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಪುಲಿಮಜಲು, ಜೇಸಿರೆಟ್ ಅಧ್ಯಕ್ಷೆ ಡಿಗ್ನಾ ಮೋರಸ್ ಉಪಸ್ಥಿತರಿದ್ದರು.
ವಿನ್ಸೆಂಟ್ ಮೋರಾಸ್ ಅತಿಥಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಗಾಯತ್ರಿ ಮತ್ತು ಆದಿತ್ಯಾರಾವ್ ವ್ಯವಹಾರ ಕ್ಷೇತ್ರದೆಲ್ಲಿ ಮಡಿದ ಸಾಧನೆಗೆ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಳಿಗ್ಗೆಯಿಂದ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ದೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಮಂಜ ಶ್ರೀ ಅನಂನತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ| ಹರ್ಷ ಸಂಪಿಗೆತ್ತಾಯ, ಮಡಂತ್ಯಾರ್ ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ, ಪಾರೆಂಕಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ರಾವ್ ದಂಪತಿ, ಜೇಸಿಯ ರಾಷ್ಟ್ರೀಯ ಸಂಯೋಜಕ ಸೆನೆಟಿಕ್ ಸಂಪತ್ ಬಿ.ಸುವರ್ಣ, ಜೇಸಿ ಪೂರ್ವಾರ್ಧಯಕ್ಷ ತುಳಸಿದಾಸ್ ಪೈ, ಜೇಸಿ ಶ್ರೀಧರ ಆಚಾರ್ಯ, ಜೇಸಿ ಆರ್.ಕೆ ಬಂಟ್ವಾಳ್, ಜೇಸಿ ಎಸ್.ಆರ್.ನಾಯಕ್, ಆಶಾ ದೀಪಾದ ದರ್ಮಗುರು ವಂ|ಫಾ| ಸಿರಿಲ್ ಮನೇಜಸ್, ಜೇಸಿ ಚೈತ್ರ ಜೈನ್, ಜೇಸಿ ಅರುಣ್ ಮೋರಾಸ್, ಜೇಸಿ ಅಶೋಖ್ ಗುಂಡಿಯಲ್ಕೆ, ಜೇಸಿ ನವೀನ್, ಸದಸ್ಯರು, ಪದಾಧಿಕಾರಿಗಳು ಜೇಸಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.