ಇಂದು ಬದನಾಜೆ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1

badanajeಉಜಿರೆ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬದನಾಜೆ, ಸರಕಾರಿ ಪ್ರೌಢಶಾಲೆ ಬದನಾಜೆ, ಇದರ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭವು ಇಂದು ಸ.ಉ.ಹಿ.ಪ್ರಾ.ಶಾಲೆ ಬದನಾಜೆ ಉಜಿರೆ ವಠಾರದಲ್ಲಿ ನಡೆಯಿತು.
ಮಂಗಳೂರು ದ.ಕ.ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ನಾಮಫಲಕ ಅನಾವರಣಗೊಳಿಸಿದರು. ಕೊಠಡಿಯ ಉದ್ಘಾಟನೆಯನ್ನು ಬೆಳ್ತಂಗಡಿ ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ, ಉಜಿರೆ ಕ್ಷೇತ್ರ ಜಿ.ಪಂ ಸದಸ್ಯೆ ಶ್ರೀಮತಿ ನಮಿತಾ.ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ ವಹಿಸಿದ್ದರು.
ಉಜಿರೆ ಕ್ಷೇತ್ರ ತಾ.ಪಂ ಸದಸ್ಯ ಶಶಿಧರ.ಕೆ, ಉಜಿರೆ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ವಿನುತಾ.ಆರ್ ಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಂ ಇಲ್ಯಾಸ್, ಉಜಿರೆ ಗ್ರಾ.ಪಂ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದದವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ನಡೆಯಿತು.
ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ಬಿ.ಲಕ್ಷ್ಮಣ ಪೂಜಾರಿ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ.ಎಂ ವಂದಿಸಿದರು. ಶಿಕ್ಷಕಿ ಮೇಧಾ.ಕೆ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.