ಇಂದು ಕರಾವಳಿ ಕ್ರೈಸ್ತರಿಗೆ ಮೊಂತಿ ಹಬ್ಬದ ಸಂಭ್ರಮ

monthi 1

monthi 2

monthi 4

monthi

monthi3

ಬೆಳ್ತಂಗಡಿ : ಸೆ.8 ಬಂತೆಂದರೆ ಕರಾವಳಿ ಕ್ರೈಸ್ತರಿಗೆ ಮೊಂತಿ ಹಬ್ಬದ ಸಂಭ್ರಮ. ಆ.30 ರಿಂದ ಮಾತೆ ಮರಿಯಮ್ಮನವರ ಹುಟ್ಟು ಹಬ್ಬದ ಪ್ರಯುಕ್ತ 10 ದಿನಗಳ ಕಾಲ ವಿಶೇಷ ನೊವೇನಾ ನಡೆಯುತ್ತದೆ. ಬೆಳಿಗ್ಗೆ ಮಕ್ಕಳು, ಹೆತ್ತವರು ಸೇರಿ ಈ ನೊವೇನಾದಲ್ಲಿ  ಭಾಗವಹಿಸಿ ಮರಿಯಮ್ಮಗೆ ಹೂವನ್ನು ಅರ್ಪಿಸಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಸೆ.8 ರಂದು ಎಲ್ಲಾ ಚರ್ಚ್‌ಗಳಲ್ಲಿ ಭತ್ತದ ತೆನೆಯನ್ನು ಶುದ್ಧಿಕರಿಸಿ ನಂತರ ಪೂಜಾ ಕಾರ್ಯಕ್ರಮ ನಡೆದು ಎಲ್ಲಾ ಕುಟುಂಬಗಳಿಗೆ ಭತ್ತದ ತೆನೆಯನ್ನು ವಿತರಿಸಲಾಗುತ್ತದೆ. ಮನೆಗೆ ತಂದ ತೆನೆಯನ್ನು ಮನೆ ಯಜಮಾನ ದೇವರಿಗೆ ದೀಪ ಉರಿಸಿ ಎಲ್ಲಾರೂ ಒಟ್ಟಿಗೆ ಸೇರಿ ಪ್ರಾರ್ಥನೆ ನೆರವೇರಿಸಿ ವಿವಿಧ ಬಗೆಯ ತರಕಾರಿ ಖಾಧ್ಯಗಳಿಂದ ತಯಾರಿಸಿದ ಪದಾರ್ಥದೊಂದಿಗೆ ಸಹಬೋಜನ ಸವಿಯುವುದರಿಂದ ಸಂಭ್ರಮ ಮೊಂತಿ ಹಬ್ಬದ ಸಡಗರ ನಡೆಯುತ್ತದೆ.

 ತೆನೆ ಹಬ್ಬದ ಪ್ರಯುಕ್ತ ಬೆಳ್ತಂಗಡಿಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.