ಹಿಂದುತ್ವ ರಕ್ಷಣೆಗೆ ಯಾವುದೇ ತ್ಯಾಗಕ್ಕೂ ಸಿದ್ಧರಾಗಿ : ಕುಂಟಾರು

Advt_NewsUnder_1
Advt_NewsUnder_1
Advt_NewsUnder_1

arasinamakki ashtami copy  ಅರಸಿನಮಕ್ಕಿಯಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ

ಅರಸಿನಮಕ್ಕಿ: ಯಾವುದೇ ರಾಜಕೀಯ ಪಕ್ಷದಲ್ಲಿ ಜನರು ಸಕ್ರಿಯರಾಗಿದ್ದಾರೂ ಹಿಂದು ಭಾವನೆ, ಆಚರಣೆಗಳಿಗೆ ಘಾಸಿಯಾಗುವ ಸಂದರ್ಭ ಅಥವಾ ದೇಶ ವಿರೋಧಿ ಕೃತ್ಯಗಳು ಸಂಭವಿಸಿದಾಗ ತಕ್ಷಣ ಜಾಗೃತಗೊಂಡು ಹೋರಾಟಕ್ಕೆ ಅಣಿಯಾಗಬೇಕು ಎಂದು ಕೇರಳ ಹಿಂದು ಐಕ್ಯ ವೇದಿಯ ನೇತಾರ ರವೀಶ ತಂತ್ರಿ ಹೇಳಿದ್ದಾರೆ.
ಅವರು ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಚೈತನ್ಯಮಿತ್ರ ಕಲಾ ವೃಂದ ಆಶ್ರಯದಲ್ಲಿ ನಡೆದ ೧೩ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸಮಾರೋಪದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿದ್ದ ಉದ್ಯಮಿಗಳಾದ ಸುಧೀರ್ ಕುಮಾರ್ ಅಡ್ಕಾಡಿ, ಚಂದ್ರಶೇಖರ ಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಪತ್ನಿ ಜಯಲಕ್ಷ್ಮೀ ದಾಮ್ಲೆ ದಂಪತಿಗೆ ಹುಟ್ಟೂರ ಸನ್ಮಾನ ಅರ್ಪಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಸಂಜೀವ ನಾಯ್ಕ್ ಉಪಸ್ಥಿತರಿದ್ದರು. ಚೈತನ್ಯಮಿತ್ರ ಕಲಾ ವೃಂದದ ಅಧ್ಯಕ್ಷ ಶಿವರಾಮ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಸಂಚಾಲಕ ವೃಷಾಂಕ್ ಖಾಡಿಲ್ಕರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಗಣೇಶ್ ಹೊಸ್ತೋಟ ವಂದಿಸಿದರು. ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕು. ಶಾರದಾ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.