ಬೆಳಾಲಿನಲ್ಲಿ ಕೃಷಿ ವಿಚಾರ ಸಂಕಿರಣ  

belal krishi vichara sankeerna copyಬೆಳಾಲು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಜಿರೆ ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಉಜಿರೆ ವಲಯ, ಕೃಷಿ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆ.28ರಂದು ಕೃಷಿ ವಿಚಾರ ಸಂಕಿರಣ ಬತ್ತಿದ ಬಾವಿಯಲ್ಲಿ ಜಲಧಾರೆ ಮಾಹಿತಿ ಕಾರ್ಯಾಗಾರ ಬೆಳಾಲು ಶ್ರೀ.ಧ.ಮ ಪ್ರೌಢಶಾಲೆಯಲ್ಲಿ ಜರಗಿತು.

ಧರ್ಮಸ್ಥಳ ಕ್ಷೇತ್ರದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ನೀರಿನ ತೇವಾಂಶ ಹೆಚ್ಚಿಸಿ ಒಣ ಭೂಮಿ ಅಭಿವೃದ್ಧಿಗೆ ಇಂತಹ ಕಾರ್ಯ ಅತೀ ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ತಾಲೂಕು ಯೋಜನಾಧಿಕಾರಿ ರೂಪಾ ಜೈನ್ ಮಾತನಾಡುತ್ತಾ ನೀರಿನ ಸದ್ಬಳಕೆ ಬಗ್ಗೆ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್ ಮಾತನಾಡುತ್ತಾ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ತಮ್ಮ ಮಕ್ಕಳಿಗೆ ಮನೆಯಲ್ಲಿ ಕೃಷಿ ಕೆಲಸದ ಬಗ್ಗೆ ಮಾಹಿತಿ ನೀಡಬೇಕು ಎಂದರು.
ವಿಚಾರಗೋಷ್ಠಿಯಲ್ಲಿ ಎಸ್.ಎನ್.ಅಬೂಬಕ್ಕರ್ ಬಂಟ್ವಾಳ, ಪ್ರಗತಿಪರ ಕೃಷಿಕರಾದ ರಮೇಶ್ ಪ್ರಭು ಉಜಿರೆ, ವಾಸಪ್ಪ ಗೌಡ ಓನಾಜೆ, ಶ್ಯಾಮಣ್ಣ ನಾಕ ಒಡಿಲ್ನಾಳ ಭಾಗವಹಿಸಿ ಒಣ ಭೂಮಿಗೆ ಜಲಮರು ಪೂರಣದಿಂದ ಜಲಧಾರೆಯ ಸಿಂಚನ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪ್ರಗತಿ ಬಂಧು ಒಕ್ಕೂಟ ಉಜಿರೆ ವಲಯ ಅಧ್ಯಕ್ಷ ಶ್ರೀಧರ, ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಜನಜಾಗೃತಿ ವೇದಿಕೆ ತಾಲೂಕು ಸಮಿತಿ ಸದಸ್ಯ ಯೋಗೀಶ್ ಗೌಡ ಎಸ್, ನವಜೀವನ ಸಮಿತಿ ಅಧ್ಯಕ್ಷ ರತ್ನಾಕರ ಆಚಾರ್ಯ, ಒಕ್ಕೂಟದ ಅಧ್ಯಕ್ಷರುಗಳಾದ ಜನಾರ್ದನ ಪೂಜಾರಿ, ಎಲ್ಯಣ್ಣ ನಾಯ್ಕ ಉಪಸ್ಥಿತರಿದ್ದರು.
ಕಾಯಕ್ರಮದಲ್ಲಿ ಬೆಳಾಲು ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಗ್ರಾ.ಪಂ ಸದಸ್ಯ ಸುರೇಂದ್ರ ಗೌಡ, ಸತೀಶ್ ಎಳ್ಳುಗದ್ದೆ ಪ್ರ.ಬಂಧು ಸ್ವ-ಸಹಾಯ ಸಂಘದ ಪದಾಧಿಕಾರಿಗಳು ಸದಸ್ಯರುಗಳು ಭಾಗವಹಿಸಿದ್ದರು.
ಲತಾರವರ ಪ್ರಾರ್ಥನೆ, ಮಾಯಾ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಕು| ಆಶಾ ವಂದಿಸಿದರು. ಉಜಿರೆ ವಲಯದ ಮೇಲ್ವಿಚಾರಕ ಸತೀಶ್.ಯು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.