ಸುಸಜ್ಜಿತವಾದ ನೂತನ ತುರ್ತು ನಿಗಾ ಘಟಕ (I.C.U) ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

badyar hospitalಬದ್ಯಾರ್ : ಫಾ| ಎಲ್.ಎಮ್.ಪಿಂಟೊ ಹೆಲ್ತ್ ಸೆಂಟರ್ ಬದ್ಯಾರ್‌ನಲ್ಲಿ ಸುಸಜ್ಜಿತವಾದ ನೂತನ ತೀವ್ರ ನಿಗಾ ಘಟಕವನ್ನು ಆ.22ರಂದು ಉದ್ಘಾಟಿಸಲಾಯಿತು.
ಮಂಗಳೂರು ಬೆಥನಿ ಸಂಸ್ಥೆಯ ಪ್ರಾಂತ್ಯಾದಿಕಾರಿಣಿಯವರ ಸಲಹೆದಾರರಾದ ಭಗಿನಿ ಶುಭ ಉದ್ಘಾಟನೆ ಮಾಡಿ ನಮ್ಮ ಊರಿನ ಸಮಸ್ತರಿಗೆ ಅತ್ಯಾಧುನಿಕ ಸಮಗ್ರ ಸೇವೆ ಈ ಘಟಕದಿಂದ ಲಭಿಸಲಿ ಎಂದು ನುಡಿದರು. ಬದ್ಯಾರ್ ಚರ್ಚ್‌ನ ವಂದನೀಯ ಗುರುಗಳಾದ ಫಾ| ವಿಲ್ಫ್ರೆಡ್‌ರವರು ನೂತನ ಘಟಕದ ಆಶೀರ್ವಚನಗೈದರು.
ಸಮಾರಂಭದ ವೇದಿಕೆಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿಣಿ ಸಿ| ಪ್ರೇಮ್‌ಲತಾ, ವೈದ್ಯಾಧಿಕಾರಿ ಡಾ| ಡೆನ್ಜಿಲ್ ನೊರೋನ್ನ ಮತ್ತು ಸಿ| ಜಾನೆಟ್ ಉಪಸ್ಥಿತರಿದ್ದರು. ಇತರ ವೈದ್ಯರು, ಸಿಬ್ಬಂದಿಗಳು, ರೋಗಿಗಳು ಹಾಗೂ ಘಟಕದ ವಿವಿಧ ಕೆಲಸಕ್ಕೆ ನೆರವಾದ ಆತ್ಮೀಯರು ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮವನ್ನು ಹಂಚಿಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.