ಮಡಂತ್ಯಾರು ಮೊಸರು ಕುಡಿಕೆ ಉತ್ಸವ ಜಿಲ್ಲೆಗೆ ಮಾದರಿ : ಸಂಪತ್ ಸುವರ್ಣ

Madanthyar astemi udgatane copyವಿಶೇಷ ಆಕರ್ಷಣೆ : ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಹಮ್ಮಿಕೊಳ್ಳಲಾದ ಶ್ರೀ ಕೃಷ್ಣ ವೇಷ ಸ್ಪರ್ಧೆ ಎಲ್ಲರ ಆಕರ್ಷಣೆಯನ್ನು ಗಳಿಸಿತು. ಮದ್ದು ಮಕ್ಕಳು ಶ್ರೀ ಕೃಷ್ಣನ ವೇಷ ಹಾಕಿ ಎಲ್ಲರ ಗಮನ ಸೆಳೆದರು. ಈ ಬಾರಿ ಮಳೆಯಿದ್ದರೂ ಎಲ್ಲಾ ಸ್ಪರ್ಧೆಗಳಲ್ಲಿ ಅಧಿಕ ಸಂಖ್ಯೆ ಯಲ್ಲಿ ಸ್ಪರ್ಧಾಳುಗಳು ಭಾಗವಹಿ ಸಿರುವುದು ವಿಶೇಷವಾಗಿತ್ತು.

ಮಡಂತ್ಯಾರು : ಬಹಳಷ್ಟು ಶಿಸ್ತು ಹಾಗೂ ಸಂಭ್ರಮದಿಂದ ನಡೆಯುವ ಮಡಂತ್ಯಾರಿನ ಶ್ರೀ ಕೃಷ್ಣಜನ್ಮಾಷ್ಟಮಿ ಜಿಲ್ಲೆಗೆ ಮಾದರಿಯಾಗಿದ್ದು, ಮಡಂತ್ಯಾರಿಗೆ ವಿಶೇಷ ಹೆಸರನ್ನು ತಂದು ಕೊಟ್ಟಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು.
ಅವರು ಆ.25ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮಡಂತ್ಯಾರು ಇದರ ವತಿಯಿಂದ ಇಲ್ಲಿಯ ಗಣಪತಿ ಮಂಟಪ ದಲ್ಲಿ ನಡೆದ 27ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಜೀವನಕ್ಕೆ ಮಾನವೀಯ ಮೌಲ್ಯ ಗಳನ್ನು ನೀಡುವ ತತ್ವಗಳು ಶ್ರೀಕೃಷ್ಣನ ಸಂದೇಶದಲ್ಲಿದ್ದು, ಇದು ಸಾರ್ವಕಾಲಿಕ ವಾಗಿದೆ ಇವುಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಶ್ರೀ ಕೃಷ್ಣ ಆದರ್ಶ ವ್ಯಕ್ತಿ, ವ್ಯಕ್ತಿತ್ವ ವಿಕಸನದ ಜನಕ ನಾಗಿ ಎಲ್ಲರ ಆರಾಧನೆಯ ದೇವರಾಗಿ ದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ ಕೆ. ಇವರು ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕೇವಲ ಮನೋ ರಂಜನೆಗೆ, ಒಂದು ದಿನದ ಆಚರಣೆಗೆ ಸೀಮಿತವಾಗಬಾರದು, ಆಸಕ್ತರಲ್ಲಿ ನಾಯಕತ್ವವನ್ನು ರೂಪಿಸಿದ, ದುಷ್ಟರನ್ನು ನಿಗ್ರಹಿಸಿದ ಅವರ ಸಂದೇಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಇಂದು ಜಾತಿ, ಮತ, ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಕೆಲವರು ಮಾಡಿ ಸಮಾಜದ ವ್ಯವಸ್ಥೆ ಹಾಳಾಗುತ್ತಿದೆ. ಸಶಕ್ತ ಸಮಾಜ ನಿರ್ಮಾಣದ ಕಾರ್ಯವನ್ನು ಶ್ರೀಕೃಷ್ಣ ಮಾಡಿದ ಈ ಚಿಂತನೆ ನಮ್ಮಲ್ಲಿ ಬೇಕು, ಯುವ ಮನಸ್ಸುಗಳು ದೇಶದ ಸದೃಢತೆಗೆ ಬಳಕೆಯಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಜೊಯೇಲ್ ಮೆಂಡೋನ್ಸಾ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮತಿ ಅಧ್ಯಕ್ಷ ರೂಪೇಶ್ ಆಚಾರ್ಯ ರಕ್ತೇಶ್ವರಿಪದವು, ಗೌರವಾಧ್ಯಕ್ಷ ಶ್ರೀನಿವಾಸ ಕುಲಾಲ್, ಕಾರ್ಯದರ್ಶಿ ಜಯ ಕೆ. ಪಾಂಡವರ ಕಲ್ಲು, ಕೋಶಾಧಿಕಾರಿ ವೀರೇಂದ್ರ ಕುಮಾರ್, ಪ್ರಶಾಂತ್ ಎಂ. ಪ್ರತಿಮಾ ನಿಲಯ, ನಾರಾಯಣ ಪೂಜಾರಿ ಬಳ್ಳಮಂಜ, ಶಂಕರ ಶೆಟ್ಟಿ, ವೆಂಕಟರಮಣ ಗೌಡ, ಗಿರಿಯಪ್ಪ ಪೂಜಾರಿ, ಪ್ರಮೋದ್‌ಕುಮಾರ್ ಬಳ್ಳಮಂಜ, ದಿನೇಶ್ ಎಂ, ಉಮೇಶ್ ಪೂಜಾರಿ, ನಾರಾಯಣ ನಾವಡ, ಸತೀಶ್ ಸಾಲ್ಯಾನ್ ಮೊದಲಾದವ ರಿದ್ದರು. ಬಿ.ಪದ್ಮನಾಭ ಸುವರ್ಣ ಬಳ್ಳಮಂಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಪುನಿತ್ ಕುಮಾರ್ ಧನ್ಯವಾದವಿತ್ತರು.
ವಿವಿಧ ಸ್ಪರ್ಧೆ: ನಂತರ ಮಕ್ಕಳು, ಮಹಿಳೆಯರು, ಪುರುಷರಿಗೆ ಅಡಿಕೆ ಮರ ಏರುವುದು, ಮೊಸರು ಕುಡಿಕೆ ಒಡೆಯುವುದು, ಭಾರ ಎತ್ತುವ ಸ್ಪರ್ಧೆ, ಕ್ರಾಸ್ ಕಂಟ್ರಿರೆಸ್, ಸ್ಲೋ ಸೈಕಲ್ ಬ್ಯಾಲೆನ್ಸ್, ಗೋಣಿ ಚೀಲ ಓಟ, ಗೋವಿಂದ ಸ್ವರ್ಧೆ, ಬೈಕ್ ರೇಸ್ ಸ್ಪೆರ್ಧೆ ನಡೆಯಿತು. ಮಹಿಳೆಯರಿಗೆ ರಂಗೋಲಿ ಬಿಡಿಸುವ ಸ್ಪರ್ಧೆ ವಿಶೇಷವಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.