ಜೀವ ವಿಮಾ ನಿಗಮ 60ನೇ ವರ್ಷಾಚರಣೆ ವಿಮಾ ಸಪ್ತಾಹ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

jeeva vima 1

jeeva vima

ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಪ್ರಾರಂಭವಾಗಿ 60ನೇ ವರ್ಷಕ್ಕೆ ಪಾದಾರ್ಪಣೆ ಅಂಗವಾಗಿ ಸೆ.1ರಿಂದ 7ರವರೆಗೆ ವಿಮಾ ಸಪ್ತಾಹ ಆಚರಿಸುವ ಕಾರ್ಯಕ್ರಮದ ಉದ್ಘಾಟನೆ ಸೆ.1ರಂದು ಬೆಳ್ತಂಗಡಿ ಉಪಗ್ರಹ ಶಾಖಾ ಕಛೇರಿಯಲ್ಲಿ ನಡೆಯಿತು.
ಶಾಖೆಯ ಪ್ರಥಮ ಗ್ರಾಹಕರಾದ ವಿನಯ ಕುಮಾರ್ ವಿಮಾ ಸಪ್ತಾಹವನ್ನು ಉದ್ಘಾಟಿಸಿದರು. ಶಾಖಾಧಿಕಾರಿ ಯೋಗೇಂದ್ರ.ಆರ್, ಅಭಿವೃದ್ಧಿ ಅಧಿಕಾರಿಗಳಾದ ಎ,ಜಯದೇವ್, ಎಂ ವಿಶ್ವೇಶ್ವರ ಶೆಟ್ಟಿ, ಟಿ.ಡಿ ರಾಘವೇಂದ್ರ, ವೆಂಕಟೇಶ್ ನಾಕ್.ಎಲ್, ಶಾಖಾಧಿಕಾರಿಗಳಾದ ಕಿಶೋರ್ ಕುಮಾರ್, ಕೇಶವ.ಎಂ ಪ್ರತಿನಿಧಿಗಳು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಮಾ ಸಪ್ತಾಹದ ಅಂಗವಾಗಿ ಸೆ.1ರಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಸೆ.6ರಂದು ಪ್ರತಿನಿಧಿಗಳ ದಿನ ವಿವಿಧ ಸ್ಫರ್ಧೆ ಮತ್ತು ಸೆ.7ರಂದು ಸಮಾರೋಪ ಸಮಾರಂಭ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.