ವೇಣೂರು: ವೃತ್ತಿ ಮಾರ್ಗದರ್ಶನ ಶಿಬಿರ ಉದ್ಘಾಟನೆ ವಿದ್ಯೆ ಸ್ವಾತಂತ್ರ್ಯ ಜೀವನಕ್ಕೆ ಸಹಕಾರಿ ಪಿತಾಂಬರ ಹೇರಾಜೆ

vnrವೇಣೂರು: ಪ್ರತಿಯೊಂದು ಕ್ಷೇತ್ರದಲ್ಲಿ ಬಿಲ್ಲವರು ಮುಂದುವರಿದಿದ್ದರೂ ಒಳ್ಳೆಯತನದ ಅನುಕರಣೆ ಅತ್ಯಗತ್ಯ. ಗ್ರಾಮ ಗ್ರಾಮಗಳಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಾದಾಗ ಸಮಾಜ ಬೆಳವಣಿಗೆಯತ್ತ ಸಾಗುತ್ತದೆ. ವಿದ್ಯೆ ಸ್ವಾತಂತ್ರ್ಯ ಜೀವನಕ್ಕೆ ಸಹಕಾರಿ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ ಹೇರಾಜೆ ಹೇಳಿದರು.
ಅವರು ಆ.28ರಂದು ಯುವವಾಹಿನಿ ಬೆಳ್ತಂಗಡಿ ಘಟಕ ಹಾಗೂ ಹೇರಾಜೆ ನೀಲಮ್ಮ ವೆಂಕಪ್ಪ ಪೂಜಾರಿ ಎಜ್ಯುಕೇಶನ್ ಮತ್ತು ಸೋಶಿಯಲ್ ಟ್ರಸ್ಟ್ (ಎನ್‌ಇಎಸ್‌ಟಿ) ಸಹಭಾಗಿತ್ವದಲ್ಲಿ ವೇಣೂರು ಸರ್ಕಾರಿ ಪ.ಪೂ. ಕಾಲೇಜು ಸಭಾಂಗಣದಲ್ಲಿ ಜರಗಿದ ವೃತ್ತಿ ಮಾರ್ಗದರ್ಶನ ಶಿಬಿರ ಮತ್ತು ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಾನಂದ ಪೂಜಾರಿ ಉಂಗಿಲಬೈಲು ವಹಿಸಿ ಶುಭ ಹಾರೈಸಿದರು.
ಬೆಳ್ತಂಗಡಿ ಶ್ರೀ ಗು.ಸ್ವಾ.ಸೇವಾ ಸಂಘದ ಕೋಶಾಧಿಕಾರಿ ಶೇಖರ ಬಂಗೇರ ಹೇರಾಜೆ, ಬೆಳ್ತಂಗಡಿ ನ.ಪಂ. ಉಪಾಧ್ಯಕ್ಷ ಜಗದೀಶ್, ನಿರ್ದೇಶಕರುಗಳಾದ ಪದ್ಮನಾಭ ಸಾಲ್ಯಾನ್, ಯಶೋಧರ ಚಾರ್ಮಾಡಿ, ಬೆಳ್ತಂಗಡಿ ಯುವವಾಹಿನಿ ಘಟಕದ ಪ್ರ.ಕಾರ್ಯದರ್ಶಿ ಪ್ರಶಾಂತ್ ಮಚ್ಚಿನ, ಜೊತೆ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಬಿಕಿರ, ಹೇರಾಜೆ ಎನ್‌ಇಎಸ್‌ಟಿಯ ಟ್ರಸ್ಟ್‌ನ ಅಧ್ಯಕ್ಷ ರಾಜೇಶ್ ಅಂಚನ್ ಹೇರಾಜೆ, ಟ್ರಸ್ಟಿ ಜಗನ್ನಾಥ ಬಂಗೇರ ಹೇರಾಜೆ, ಶ್ರೀ ಗು.ನಾ.ಸ್ವಾ.ಸೇ. ಸಂಘದ ವೇಣೂರು ವಲಯದ ಕಾರ್ಯದರ್ಶಿ ನವೀನ್ ಕುಮಾರ್ ಪಚ್ಚೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು| ರಕ್ಷಾ ಪ್ರಾರ್ಥಿಸಿ ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ ಮತ್ತು ಕಾರ್ಯಕ್ರಮ ಸಂಯೋಜಕ ರಾಕೇಶ್ ಕುಮಾರ್ ಮೂಡುಕೋಡಿ ಸ್ವಾಗತಿಸಿದರು. ಉಪನ್ಯಾಸಕ ಅನೀಷ್ ಅಮೀನ್ ನಿರೂಪಿಸಿ ಯುವವಾಹಿನಿ ನಿರ್ದೇಶಕ ನಿತ್ಯಾನಂದ ನಾವರ ವಂದಿಸಿದರು. ಉಪನ್ಯಾಸಕ ಸುಧಾಕರ ಪೂಜಾರಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.