ಸೆ.18 ರಿಂದ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ೧೮ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಸೆ.೧೮ ರಿಂದ ಸೆ.೨೪ ರವರೆಗೆ ಸಂಯೋಜಿಸಲಾಗಿದೆ. ಸೆ.೨೫ ರಂದು ಭಜನೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಭಜನಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಮಮತಾ ರಾವ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳ ಆಯ್ದ ಭಜನಾ ಮಂಡಳಿಗಳ ೨೦೦ ಮಂದಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಅವಕಾಶವಿದ್ದು, ಇವರಿಗೆ ಭಜನಾ ಪರಿಣಿತರಿಂದ ವಿಶೇಷ ತರಬೇತಿಯನ್ನು ನೀಡಲಾಗುವುದು. ಕಮ್ಮಟದಲ್ಲಿ ಭಜನೆಯ ಹಾಡುಗಳು, ಸರ್ವಧರ್ಮ ಪ್ರಾರ್ಥನೆ, ನೃತ್ಯಭಜನೆ, ಚರ್ಚೆ, ಹರಿಕಥೆ, ಬೌದ್ಧಿಕ ಉಪನ್ಯಾಸ, ಯೋಗಾಭ್ಯಾಸವನ್ನು ವ್ಯವಸ್ಥೆಗೊಳಿಸಲಾಗಿದೆ.
ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕನಿಷ್ಠ ಓದಲು, ಬರೆಯಲು ತಿಳಿದಿರಬೇಕು. ೧೮ ರಿಂದ ೪೫ ವರ್ಷ ವಯಸ್ಸಿನವರಾಗಿರಬೇಕು. ಯಾವುದಾದರೂ ಒಂದು ಭಜನಾ ಮಂಡಳಿಯ ಸದಸ್ಯರಾಗಿರಬೇಕು. ಭಜನಾ ತರಬೇತಿ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ರಾಗ, ತಾಳ ಅಭ್ಯಾಸವನ್ನು ನಡೆಸಲಾಗುವುದು. ಅಲ್ಲದೇ ಮಹಿಳಾ ಶಿಬಿರಾರ್ಥಿಗಳಿಗೆ ಶೋಭಾನೆ ಹಾಡುಗಳ ಅಭ್ಯಾಸ, ನೃತ್ಯ ತರಬೇತಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ:- ಶ್ರೀಮತಿ ಮಮತಾ ರಾವ್ (೯೪೪೯೭೭೬೯೨೧) ಕಾರ್ಯದರ್ಶಿ, ಮತ್ತು ಸುಬ್ರಹ್ಮಣ್ಯ ಪ್ರಸಾದ್(೯೪೪೮೮೬೯೩೪೦) ಸಂಯೋಜಕರು, ನಾಗೇಂದ್ರ ಅಡಿಗ ಕೋಶಾಧಿಕಾರಿ (೯೪೪೮೪೪೫೩೦೪) ಇವರನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.